ಸೌಜನ್ಯ ಪರ ಎದ್ದು ನಿಂತ ಹಿಂದೂ ಹೃದಯ ಸಾಮ್ರಾಟ್ ಅರುಣ್ ಕುಮಾರ್, ದೊಡ್ಡ ಮನುಷ್ಯರ ವಿರುದ್ಧ ನಿಂತ ಪುತ್ತಿಲ

 | 
Nx

ಕಳೆದ ಹನ್ನೊಂದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಒಬ್ಬ ಆರೋಪಿ ಕೂಡಾ ಈಗ ಬಿಡುಗಡೆ ಆಗಿದ್ದಾನೆ. ಆರೋಪಿ ಸಂತೋಷ್ ರಾವ್ ದೋಷಮುಕ್ತಗೊಂಡ ಬೆನ್ನಲ್ಲೇ ನೈಜ ಆರೋಪಿ ಯಾರು ಎನ್ನುವ ಸಂಶಯ ಬಲವಾಗಿ ಕಾಡಿದೆ. 

ಅವತ್ತು ಬಿಚ್ಚಲ್ಲ ಬೆಳಕಿನಲ್ಲಿ ವಿದ್ಯಾರ್ಥಿನಿ ಸೌಜನ್ಯ ಕೊಲೆಯಾದ ಕಾರಣದಿಂದಾಗಿ ಕಣ್ಮರೆಯಾಗಿ ನಂತರ ಅತ್ಯಾಚಾರಗೊಂಡು ಕೊಲೆಯಾದ ಕಾರಣದಿಂದ ಅದು ಸಹಜ ಸಾವು ಆಗಿರೋದಕ್ಕೆ ಸಾಧ್ಯವೇ ಇಲ್ಲ. ಈ ಕೊಲೆಯಲ್ಲಿ ಓರ್ವ ಅಥವಾ ಅಧಿಕ ಮಂದಿ ಆರೋಪಿಗಳು ಇದ್ದೇ ಇದ್ದಾರೆ. ಸೌಜನ್ಯಾಗೆ ನ್ಯಾಯ ಕೊಡಿಸಲು ಮೊದಲಿನಿಂದ ಇವತ್ತಿನ ತನಕ ಹೋರಾಡಿಕೊಂಡು ಬಂದಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ದನಿಯೆತ್ತಿದ್ದಾರೆ. 

ಈ ಮಧ್ಯ ಮಾನವ ಹಕ್ಕುಗಳ ಆಯೋಗವು ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದಲ್ಲದೆ, ಬಿಜೆಪಿಯ ಕೆಲ ನಾಯಕರಿಗೆ ಮುಟ್ಟಿ ನೋಡುವಂತೆ ಮತ ಗಳಿಸಿದ್ದ ಅಪಾರ ಅಭಿಮಾನಗಳ ‘ಹಿಂದೂ ಹೃದಯ ಸಾಮ್ರಾಟ್’ ಎಂದೇ ಕರೆಸಿಕೊಳ್ಳುತ್ತಿರುವ ಅರುಣ್ ಕುಮಾರ್ ಪುತ್ತಿಲ ಸೌಜನ್ಯ ಪರ ನಿಲ್ಲಲಿದ್ದಾರಾ ಎನ್ನುವ ಪ್ರಶ್ನೆ ತನ್ನಿಂತಾನೆ ತೆರೆದುಕೊಂಡಿದೆ. 

ಈ ಹಿಂದೆ ಬ್ಯಾನರ್ ವಿಚಾರದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದ ಯುವಕರ ಬಿಡುಗಡೆ, ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇವೆ ಎನ್ನುತ್ತಿರುವ ಅರುಣ್ ಕುಮಾರ್ ಪುತ್ತಿಲರವರು ಮತ್ತು ಅವರದೇ ಬ್ರಾಂಡ್ ‘ ಪುತ್ತಿಲ ಪರಿವಾರ’ ಸೌಜನ್ಯ ಪರ ಹೋರಾಟ ಇಳಿಯುತ್ತಿದೆ. ಇದೀಗ ದಕ್ಷಿಣ ಕನ್ನಡ ಆದ್ಯಂತ ಪುತ್ತಿಲ ಪರಿವಾರದ ಮೂಲಕ ಕೇಸರಿ ಧ್ವಜಗಳನ್ನು ಪಟಪಟಿಸುತ್ತಾ ದಂಡಯಾತ್ರೆಯ ತರ ದಿನಕ್ಕೊಂದು ಕಡೆ ಸಾಗಿ ಭಾಷಣ ಮಾಡಿ ಜನರನ್ನು ಒಗ್ಗೂಡಿಸುತ್ತಿರುವ ಪುತ್ತಿಲ ಪರಿವಾರ ದಿಟ್ಟ ನಿರ್ಧಾರ ಕೈಗೊಳ್ಳುವ ಸಮಯ ಸನ್ನಿಹಿತವಾಗಿದೆ.

ಈಗ ದಕ್ಷಿಣ ಕನ್ನಡದಲ್ಲಿ ಎಲ್ಲಿಯೇ ಏನೇ ಘಟನೆಯಾಗಲಿ, ಮರುದಿನ ಅಲ್ಲಿ ಪ್ರತ್ಯಕ್ಷ ಆಗುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ಅಲ್ಲಿ ಪ್ರತ್ಯಕ್ಷ ಆಗುತ್ತಿದ್ದಾರೆ ಮತ್ತು ಆಯಾ ಘಟನೆಗೆ ಅನುಸಾರವಾಗಿ ಒಂದು ಸಾಂತ್ವನದ ಅಥವಾ ಖಂಡನೆಯ ಹೇಳಿಕೆಗಳನ್ನು ಅರುಣ್ ಕುಮಾರ್ ಪುತ್ತಿಲ ನೀಡುತ್ತಿರುವುದು ನಾವು ದಿನಂಪ್ರತಿ ನೋಡುತ್ತಿದ್ದೇವೆ. ಆದರೆ ಸೌಜನ್ಯ ಹತ್ಯೆಯಲ್ಲಿ ಬಂಧಿತ ಆಗಿದ್ದ ಏಕೈಕ ಆರೋಪಿ ಕೂಡಾ ಬಿಡುಗಡೆ ಆದ ಸಂದರ್ಭಗಳಲ್ಲಿ, ಅರುಣ್ ಕುಮಾರ್ ಪುತ್ತಿಲ ಏನೊಂದೂ ಪ್ರತಿಭಟಿಸದೇ, ಹೇಳಿಕೆ ನೀಡದೆ ಇರುವುದು ಆಶ್ಚರ್ಯ ಮೂಡಿಸಿತ್ತು. ಆದರೆ ಇದೀಗ ಈ ತಾವು ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದು ಅರುಣ ಕುಮಾರ್ ಪುತ್ತಿಲ ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.