ಕರ್ನಾಟಕದ ಬಾಸ್ ಮನೆಯಲ್ಲಿ ಆಯುಧ ಪೂಜೆ ಹಬ್ಬ ಹೇಗಿದೆ, ದರ್ಶನ್ ಬಳಿ ದುಬಾರಿ ಕಾರುಗಳ ಅಬ್ಬರ

 | 
Mn vc

ಹಿಂದೂಗಳ ವಿಶೇಷ ಹಬ್ಬಗಳಲ್ಲಿ ನವರಾತ್ರಿಯು ಒಂದು. ಒಂಬತ್ತು ದಿನ ಆಚರಿಸುವ ನವರಾತ್ರಿ ಹಬ್ಬದಲ್ಲಿ ಕೊನೆಯ ದಿನ ಆಯುಧ ಪೂಜೆ ಮಾಡಲಾಗುತ್ತೆ. ಮನೆಯಲ್ಲಿ ಇರುವ ವಸ್ತುಗಳಿಂದ ಹಿಡಿದು ಎಲ್ಲಾ ರೀತಿಯ ಆಯುಧಗಳನ್ನು ಇಟ್ಟು ವಿಶೇಷವಾಗಿ ಹೂವುಗಳಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತೆ.

ಈ ಬಾರಿಯ ಆಯುಧ ಪೂಜೆ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿರುವ ವಾಹನಗಳಿಗೆ ಪೂಜೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಆರ್ ಆರ್ ನಗದರಲ್ಲಿರುವ ತೂಗುದೀಪ ನಿವಾಸದ ಮುಂದೆ ಮನೆಯಲ್ಲಿರುವ ಎಲ್ಲಾ ವೆರೈಟಿ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಮಾಡಲಾಗಿದೆ.

ದರ್ಶನ್ ಮನೆ ಮುಂದೆ ಸಾಲುಗಟ್ಟಿ ನಿಂತಿರುವ ದುಬಾರಿ ಕಾರುಗಳ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ಸುಮಾರು ಹದಿಮೂರು ಬೆಲೆ ಬಾಳುವ ಕಾರುಗಳು ಸಾಲಾಗಿ ನಿಂತಿವೆ. ಕಾರುಗಳ ಜೊತೆಗೆ ಮತ್ತೊಂದು ಸಾಲಿನಲ್ಲಿ ಬೈಕ್ ಗಳು ರಾರಾಜಿಸುತ್ತಿವೆ. ಈ ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ದರ್ಶನ್ ಬಳಸುವ ಎಲ್ಲಾ ವಾಹನಗಳು ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. 

ದುಬಾರಿ ಕಾರುಗಳ ಒಡೆಯನಾಗಿರುವ ದರ್ಶನ್ ದಿನಕ್ಕೊಂದು ಕಾರನ್ನು ಬಳಸುತ್ತಾರೆ. ದರ್ಶನ್ ಗೆ ಇರುವ ಕಾರ್ ಕ್ರೇಜ್ ಬಗ್ಗೆಯು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಸ ಕಾರು ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ಸಾಕು, ಅದೂ ಕೆಲವೆ ದಿನಗಳಲ್ಲಿ ದರ್ಶನ್ ಮನೆಯ ಕಾರು ಶೆಡ್ ಸೇರಿರುತ್ತೆ. ಈ ಸಂದರ್ಭದಲ್ಲಿ ಡಿ ಬಾಸ್ ಬಳಿ ಇರುವ ದುಬಾರಿ ಕಾರುಗಳು ಯಾವ್ಯಾವು ಎಂಬುದು ಕೂಡ ತಿಳಿದು ಬಂದಿದ್ದು ಅದರ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. 

ಇದರಲ್ಲಿ ಮೊದಲನೆಯದಾಗಿ ಇತ್ತೀಚಿಗಷ್ಟೇ ಖರೀದಿಸಿರುವ 1.20 ಕೋಟಿ ಮೌಲ್ಯದ ರೇಂಜ್ ರೋವರ್ ಡಿಫೆಂಡರ್. ಲ್ಯಾಂಬೋರ್ಗಿನಿ ಅವೆಂಟಡರ್ ಡಿ ಬಾಸ್ ಬಳಿ ಇರುವ ಅತ್ಯಂತ ದುಬಾರಿ ಮೌಲ್ಯದ ಕಾರು ಇದರ ಬೆಲೆ ಬರೋಬ್ಬರಿ ಸರಿಸುಮಾರು ಆರು ಕೋಟಿ. 80 ಲಕ್ಷ ರೂಪಾಯಿ ಮೌಲ್ಯದ ಟೊಯೋಟಾ ವೇಲ್ ಫೈಯರ್ ಅನ್ನು ಕೂಡ ಡಿ ಬಾಸ್ ಹೊಂದಿದ್ದಾರೆ.

88 ಲಕ್ಷ ರೂಪಾಯಿ ಮೌಲ್ಯದ ನೀಲಿ ಬಣ್ಣದ ಜಾಗ್ವಾರ್ ಎಕ್ಸ್ ಕೆ. ಇದನ್ನು ಡಿ ಬಾಸ್ ರವರ ಬರ್ತಡೆಗೆ ಒಂದು ಸಮಯದಲ್ಲಿ ಅವರ ಪತ್ನಿ ಆಗಿರುವ ವಿಜಯಲಕ್ಷ್ಮಿ ಅವರು ಗಿಫ್ಟ್ ಆಗಿ ನೀಡಿದ್ದರು. ಹಳದಿ ಬಣ್ಣದ 75 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಫೋರ್ಡ್ ಮಸ್ಟಾಂಗ್ ಇವರ ಬಳಿ ಇದೆ. 3 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕೂಡ ಡಿ ಬಾಸ್ ಬಳಿ ಇದೆ. 

ನಿರ್ಮಾಪಕ ಸಂದೇಶ ನಾಗರಾಜ್ ಅವರು ಡಿ ಬಾಸ್ ರವರಿಗೆ ನೀಡಿರುವ ಉಡುಗೊರೆ ಆಗಿರುವ 1.5 ಕೋಟಿ ಮೌಲ್ಯದ ಪೋರ್ಶೇ ಕವಾನ್. 2.75 ಕೋಟಿ ಮೌಲ್ಯದ ರೇಂಜ್ ರೋವರ್ ವೋಗ್. 38 ಲಕ್ಷದ ಮಿನಿ ಕೂಪರ್, ಇದೇ ಮೌಲ್ಯದ ಟೊಯೋಟಾ ಫಾರ್ಚುನರ್, 42 ಲಕ್ಷ ಮೌಲ್ಯದ ಫೋರ್ಡ್ ಯೆಂಡೀವರ್, 53 ಲಕ್ಷ ರೂಪಾಯಿ ಮೌಲ್ಯದ ಜೀಪ್ ವ್ರಾಂಗ್ಲರ್, 61 ಲಕ್ಷ ರೂಪಾಯಿ ಮೌಲ್ಯದ ಬಿ ಎಂ ಡಬ್ಲ್ಯೂ 520ಡಿ, 85 ಲಕ್ಷದ ಆಡಿ q7 ಇವುಗಳೇ ಡಿ ಬಾಸ್ ಬಳಿ ಇರುವ ದುಬಾರಿ ಮೌಲ್ಯದ ಕಾರುಗಳು. 

ಇಷ್ಟೊಂದು ದುಬಾರಿ ಮೌಲ್ಯದ ಕಾರುಗಳನ್ನು ಹೊಂದಿರುವ ಕನ್ನಡ ಚಿತ್ರರಂಗದ ಏಕೈಕ ನಟ ಡಿ ಬಾಸ್ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.