'ಪಾಪ ಪಾಂಡು' ಸೀರಿಯಲ್ ನಲ್ಲಿ ಶಾಲಿನಿ ಅವರಿಗೆ ಎಷ್ಟು ಲಕ್ಷ ಸಂಭಾವನೆ ಇ ತ್ತು ಗೊ ತ್ತಾ

 | 
H
ಹಾಸ್ಯ ನಟಿ ಶಾಲಿನಿ ಇವತ್ತಿಗೂ ನಿರೂಪಕಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. 23 ವರ್ಷಗಳ ಹಿಂದೆ ಪಾಪ ಪಾಂಡು ಧಾರಾವಾಹಿಯ ಪಾಚು ಪಾತ್ರದಿಂದ ಮೋಡಿ ಮಾಡಿದ್ದರು. ಸಿಹಿಕಹಿ ಚಂದ್ರು ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಧಾರಾವಾಹಿ ಅವತ್ತಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು.
ಚಿದಾನಂದ್ ಹಾಗೂ ಶಾಲಿನಿ ಕಾಂಬಿನೇಷನ್ ಗಮನ ಸೆಳೆದಿತ್ತು. ಸತತ 5 ವರ್ಷಗಳ ಕಾಲ ಈ ಧಾರಾವಾಹಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಹೆಂಡ್ತಿ ಅಂದ್ರೆ ಹೆದರುವ ಪುಕ್ಕಲು ಪಾಂಡು ಹಾಗೂ ಖಡಕ್ ಪತ್ನಿ ಶ್ರೀಮತಿ ನಡುವೆ ದಿನಕ್ಕೊಂದು ಕಥೆ ಹೇಳಿ ಧಾರವಾಹಿ ವೀಕ್ಷಕರನ್ನು ರಂಜಿಸಿತ್ತು. ಇದೇ ಧಾರಾವಾಹಿ ಶಾಲಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.
ಪಾಪ ಪಾಂಡು ಧಾರಾವಾಹಿಯ ಹಾಸ್ಯಪಾತ್ರ ಶಾಲಿಗೆ ಜನಪ್ರಿಯತೆ ತಂದುಕೊಟ್ಟಿದ್ದು ನಿಜ. ಆದರೆ ಮುಂದೆ ಆಕೆ ಅದೇ ತರಹದ ಪಾತ್ರಗಳಿಗೆ ಬ್ರ್ಯಾಂಡ್ ಆಗಿಬಿಟ್ಟರು. ಆ ಬಗ್ಗೆ ತಮಗೆ ಇನ್ನು ಬೇಸರವಿದೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್‌ನಲ್ಲಿ ತಮ್ಮ ಕರಿಯರ್ ಬಗ್ಗೆ ಸಾಕಷ್ಟು ಸಂಗತಿಗಳನ್ನು ಶಾಲಿನಿ ಹಂಚಿಕೊಂಡಿದ್ದಾರೆ. ಆ ಧಾರಾವಾಹಿಗೆ ಆಯ್ಕೆ ಆಗಿದ್ದು ಹೇಗೆ ಎಂದು ಹೇಳಿದ್ದಾರೆ.
ನಾನು ಹಾಗೂ ಸಿಹಿಕಹಿ ಚಂದ್ರು ಸರ್ 'ಶಿಖರ' ಎನ್ನುವ ಧಾರಾವಾಹಿಯಲ್ಲಿ ತಂದೆ, ಮಗಳಾಗಿ ನಟಿಸುತ್ತಿದ್ದೆವು. ಆಗ ಇಬ್ಬರು ಸಾಕಷ್ಟು ಮಾತನಾಡುತ್ತಿದ್ದೆವು. ಪುಸ್ತಕಗಳನ್ನು ಓದುತ್ತಿದ್ದೆವು. ಧಾರಾವಾಹಿಯಲ್ಲಿ ಆ ಪಾತ್ರ, ಈ ಪಾತ್ರ ಎಂದು ಮಾತುಕತೆ ನಡೆಯುತ್ತಿತ್ತು. ಒಮ್ಮೆ ಫೋನ್ ಮಾಡಿ ಒಂದು ಧಾರಾವಾಹಿ ಮಾಡ್ತಿದ್ದೀನಿ, ಆಡಿಷನ್‌ಗೆ ಬರ್ತೀಯಾ ಎಂದು ಕರೆದರು. ನಾನು ಹೋಗಿದ್ದೆ.
ನಾನು ಹೋದಾಗ ಇದು ಕಾಮಿಡಿ ಸೀರಿಯಲ್ ಅಂದ್ರು. ನನಗೆ ಶಾಕ್ ಆಯಿತು. ಅಲ್ಲಿಯವರೆಗೂ ನಾನು ಗಂಭೀರ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದೆ. ನನಗೆ ಕಾಮಿಡಿ ಬರಲ್ಲ ಎಂದೆ. ನಿನಗೆ ಬರುತ್ತೆ ಮಾಡು ಎಂದರು. ಆಡಿಷನ್ ಬಳಿಕ ನೀನು ಸೆಲೆಕ್ಟ್ ಆಗಿದ್ದೀಯಾ. ನೀನೇ ಲೀಡ್ ರೋಲ್, ಶ್ರೀಮತಿ ಅಂತ ಪಾಂಡು ಹೆಂಡತಿ ಪಾತ್ರ ಎಂದುಬಿಟ್ಟರು. ಓಕೆ ಎಂದೆ.
ನನ್ನ ಪತಿ ಧಾರಾವಾಹಿ ಹೆಸರು ಕೇಳಿ ಬೇಡ ಎಂದರು. ನಾನು ತಿಂಗಳಿಗೆ 25 ದಿನ ಶೂಟಿಂಗ್ ಇರುತ್ತೆ ಟೈಟಲ್ ನೋಡಿ ಬೇಡ ಅನ್ನೋಕ್ಕಾಗಲ್ಲ. ಆಗ ಧಾರಾವಾಹಿ ಅಂದ್ರೆ ಮೂರ್ನಾಲ್ಕು ದಿನ ಚಿತ್ರೀಕರಣ ಇರುತ್ತಿತ್ತು. 'ಪಾಪ ಪಾಂಡು' ತಿಂಗಳಿನ 25 ದಿನ ಶೂಟಿಂಗ್ ಅಂದಾಗ ಹಿಂದೆ ಮುಂದೆ ನೋಡದೇ ಒಪ್ಪಿಕೊಂಡಿದ್ದೆ. ಸಿದ್ಲಿಂಗು ಡೈರೆಕ್ಟರ್ ವಿಜಯಪ್ರಸಾದ್ ಆಗ ಧಾರಾವಾಹಿ ನಿರ್ದೇಶಿಸುತ್ತಿದ್ದರು ಎಂದು ಶಾಲಿನಿ ನೆನಪಿಸಿಕೊಂಡಿದ್ದಾರೆ. 
2001ರಲ್ಲಿ 'ಪಾಪ ಪಾಂಡು' ಧಾರಾವಾಹಿ ಶುರುವಾಯಿತು. ಅವತ್ತಿನ ಕಾಲಕ್ಕೆ ನನಗೆ ಒಳ್ಳೆ ಸಂಭಾವನೆ ಸಿಕ್ಕಿತ್ತು. ದಿನಕ್ಕೆ 1000 ರೂಪಾಯಿಯಿಂದ ಆರಂಭಿಸಿ ಮುಂದೆ ಹೋಗ್ತಾ 1700 ರೂಪಾಯಿವರೆಗೆ ಸಂಭಾವನೆ ಪಡೆಯುತ್ತಿದ್ದೆ. ಬರೋಬ್ಬರಿ 1000ಕ್ಕೂ ಅಧಿಕ ಎಪಿಸೋಡ್‌ಗಳಲ್ಲಿ ಧಾರಾವಾಹಿ ಪ್ರಸಾರವಾಯಿತು. ತಿಂಗಳಿಗೆ 20 ದಿನಕ್ಕೂ ಹೆಚ್ಚು ಕೆಲಸ ಮಾಡುತ್ತಿದ್ದೆ. ಅವತ್ತಿನ ಕಾಲಕ್ಕೆ ಅದು ದೊಡ್ಡ ಮೊತ್ತ ಎಂದು ಶಾಲಿನಿ ವಿವರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ