ನಾನು ವಕೀಲ ಕಂಡ್ರಿ, ಸೌಜನ್ಯ ಕೇಸ್ ನಾನೇ ಸ್ಟಡಿ ಮಾಡ್ತೀನಿ ಎಂದ ಸಿದ್ದರಾಮಯ್ಯ, ಮೆಚ್ಚಿಕೊಂಡ ಕನ್ನಡಿಗರು

 | 
Bv

ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಮರು ತನಿಖೆ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಲಾಯರ್ ಆಗಿ ಹೇಳೊದಾದ್ರೆ ಅವರು ಹೈಕೋರ್ಟ್ ಗೆ ಅಫೀಲು ಹೊಗ್ಬೆಕು ಎಂದಿದ್ದಾರೆ. ಇನ್ನು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸೌಜನ್ಯಾ ಕೇಸನ್ನು ಈಗಾಗಲೇ ಸಿಬಿಐಗೆ ಕೊಡಲಾಗಿತ್ತು. ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸೌಜನ್ಯ ಹೆತ್ತವರು ಮರು ತನಿಖೆಗೆ ಒತ್ತಾಯಿಸಿದ್ದಾರೆ. 

ಕಾನೂನಾತ್ಮಕವಾಗಿ ಏನು ಮಾಡಬೇಕು ಅಂತ ನೋಡಬೇಕಾಗತ್ತೆ. ನ್ಯಾಯಾಲಯಕ್ಕೆ ಮತ್ತೆ ಅಪೀಲು ಹಾಕಬೇಕಾಗುತ್ತೆ. ತೀರ್ಪು ಏನಿದೆ ಅಂತ ನೋಡಿದ ಮೇಲೆ ನಿರ್ಧಾರ ಮಾಡ್ತೀವಿ ಎಂದರು. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದರೆ ಕಠಿಣ ಕ್ರಮ ಖಚಿತ ಎಂದು ಹೇಳಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ದ ಅಥವ ಯಾರ ವಿರುದ್ಧವೂ ಅವಹೇಳನ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಟೀಕೆ ಮಾಡಿದರೂ ಕ್ರಮ ತಗೋತೀರಾ ಎಂದು ಕೇಳಿದ್ದಕ್ಕೆ, ಟೀಕೆ ಮಾಡಿದರೆ ಕ್ರಮ ಅಲ್ಲ, ಸುಳ್ಳು ಸುದ್ದಿ ಹಬ್ಬಿಸಿದರೆ ಮಾತ್ರ ಕ್ರಮ. 

ಟೀಕೆ ಬೇರೆ, ಸುಳ್ಳು ಸುದ್ದಿ , ವೈಯಕ್ತಿಕ ತೇಜೋವಧೆ ಮಾಡೋದು ಬೇರೆ.‌ ಕುಟುಂಬದ ಬಗ್ಗೆ ಅವಹೇಳನ ಮಾಡಿದ್ರೆ ನೀವು ಬಿಡ್ತೀರಾ ಎಂದು ಮರು ಪ್ರಶ್ನೆ ಹಾಕಿದರು. ಇನ್ನು ಸೌಜನ್ಯಾ ಪ್ರಕರಣದಲ್ಲಿ ತನಗೂ ಕೂಡ ಬೇಸರದೆ. ಅಮಾಯಕರಿಗೆ ಶಿಕ್ಷೆ ಆಗಿರುವ ಕಾರಣ ದುಃಖವಿದೆ ಆದರೆ ಸೌಜನ್ಯ ಕೇಸ್ ಸಿಬಿಐಗೆ ಕೊಟ್ಟಿತ್ತು. ಅದು ಕೋರ್ಟ್​ನಲ್ಲಿ ಇತ್ತು. ಈಗ ಅವರ ಪೋಷಕರು ‌ಮರು ತನಿಖೆಗೆ ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ಏನಾಗಬೇಕು ಅಂತ ನೋಡಿ ಮುಂದಿನ ನಿರ್ಧಾರ ಮಾಡುತ್ತೇವೆ. 

ನಾನು ಲಾಯರ್ ಆಗಿ ಹೇಳುವುದಾದರೆ ಇದರ ಬಗ್ಗೆ ಹೈಕೋರ್ಟ್ ಗೆ ಅಪೀಲ್ ಹೋಗಬೇಕು. ನಾನು ಸಿಬಿಐ ಕೋರ್ಟ್ ಜಡ್ಜ್ ಮೆಂಟ್ ನೋಡಿಲ್ಲ.ಅವರ ಪೋಷಕರು ಜಡ್ಜ್ ಮೆಂಟ್ ಕಾಪಿ ತಂದು ಕೊಟ್ಟಿದ್ದಾರೆ. ಅದರ ಜಡ್ಜ್ ಮೆಂಟ್ ಓದಿ ಅಪೀಲ್​ಗೆ ಅವಕಾಶ ಇದ್ಯಾ ಅಂತ ನೋಡುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.