ಅವತ್ತು ನಾನು ಎಲ್ಲೂ ಮುಟ್ಟಿಲ್ಲ ಎಂದ ಕಿಟ್ಟಿ; ತಕ್ಷಣ ಕೋ ಪಗೊಂಡ ರಚ್ಚು
Aug 22, 2024, 13:32 IST
|
2011ರಲ್ಲಿ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಸಿನಿಮಾವು ಮ್ಯೂಸಿಕಲಿ ಹಿಟ್ ಆಗಿತ್ತು. ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಅವರ ಕಾಂಬಿನೇಷನ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಇದೀಗ ನಿರ್ದೇಶಕ ನಾಗಶೇಖರ್ ಅವರು ಸಂಜು ವೆಡ್ಸ್ ಗೀತಾ 2 ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಬಹಳಷ್ಟು ಕುತೂಹಲ ಮೂಡಿಸಿರುವ 'ಸಂಜು ವೆಡ್ಸ್ ಗೀತಾ 2ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.
ನಾಗ ಶೇಖರ್ ಸಾರಥ್ಯದ ಸಂಜು ವೆಡ್ಸ್ ಗೀತಾ 2 ಸಿನಿಮಾಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಮುಕ್ತಾಯಗೊಳಿಸಲಾಗಿದೆ. ಪವಿತ್ರ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಛಲವಾದಿ ಕುಮಾರ್ ಅವರು ಸಂಜು ವೆಡ್ಸ್ ಗೀತಾ 2 ಸಿನಿಮಾಕ್ಕೆ ಹಣ ಹಾಕಿದ್ದಾರೆ. ನಾಗಶೇಖರ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ನಡುವಿನ ವಿಭಿನ್ನ ಪ್ರೇಮಕಥೆಯನ್ನು ಹೇಳಲಾಗುತ್ತಿದೆ.
ಜೊತೆಗೆ ರೇಷ್ಮೆ ಕೃಷಿ ಕುರಿತ ಹೋರಾಟವು, ರೇಷ್ಮೆ ಬೆಳೆಗಾರರ ಸಮಸ್ಯೆ ಬಗ್ಗೆಯೂ ಇರಲಿದೆ. ಈ ಬಾರಿ ಶ್ರೀನಗರ ಕಿಟ್ಟಿ ಎದುರು ರಮ್ಯಾ ಬದಲು ರಚಿತಾ ರಾಮ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.ನನಗೆ ಈ ಸಿನಿಮಾದ ಜರ್ನಿ ಬಹಳ ಖುಷಿ ನೀಡಿದೆ. ಸಂಜು ವೆಡ್ಸ್ ಗೀತಾ ಅಂತ ಶೀರ್ಷಿಕೆ ಇದ್ದರೂ, ಇದರಲ್ಲಿ ಬೇರೆಯದೇ ಕಥೆ ಇದೆ. ಶೂಟಿಂಗ್‌ಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿದ್ದು ಬಹಳ ನೆನಪಿನಲ್ಲಿ ಉಳಿಯುವಂತಹ ಕ್ಷಣಗಳಾಗಿವೆ.
ಅಲ್ಲಿನ ವಾತಾವರಣ ತುಂಬ ಚೆನ್ನಾಗಿತ್ತು, ನಾವದಕ್ಕೆ ಉತ್ತಮವಾಗಿ ಹೊಂದಿಕೊಂಡಿದ್ದೆವು. 'ಸಂಜು ವೆಡ್ಸ್ ಗೀತಾ 2' ಸಿನಿಮಾವನ್ನು ಬಹಳ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಅದಕ್ಕಾಗಿ ಸತ್ಯ ಹೆಗಡೆ ಛಾಯಾಗ್ರಹಣಕ್ಕೆ ಮೆಚ್ಚುಗೆ ಸಲ್ಲಬೇಕು" ಎಂದು ಹೇಳಿದ್ದಾರೆ.ನಟ ಶ್ರೀನಗರ ಕಿಟ್ಟಿ ಅವರು ಈ ಸಿನಿಮಾದಲ್ಲಿ ರೇಷ್ಮೆ ಬೆಳೆಗಾರನಾಗಿ ಕಾಣಿಸಿಕೊಂಡಿದ್ದಾರೆ.
"ಇಂದಿಗೆ ನಮ್ಮ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಶೀಘ್ರದಲ್ಲೇ ಸಾಂಗ್ಸ್ ರಿಲೀಸ್ ಆಗಲಿವೆ. ನೀವೆಲ್ಲರೂ ಖಂಡಿತಾ ಹಾಡುಗಳನ್ನು ಇಷ್ಟಪಡುತ್ತೀರಿ. ನಾನು ಈ ಸಿನಿಮಾದಲ್ಲಿ ರೇಷ್ಮೆ ಬೆಳೆಗಾರನ ಪಾತ್ರವನ್ನು ಮಾಡಿದ್ದೇನೆ" ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.