ನಿಮ್ಮಿಂದ ನನಗೆ ಏನೂ ಆಗಬೇಕಿಲ್ಲ, ಶಾಸಕನ ಅಹಂಕಾರದ ಮಾತಿಗೆ ತಲೆಕೆಡಿಸಿಕೊಂಡ ಪ್ರಜೆಗಳು

 | 
Uhhhhh

ನಿಮಗೆ ಇಷ್ಟ ಇಲ್ಲ ಅಂದ್ರೆ ಮುಂದಿನ ಬಾರಿ ಗೆಲ್ಸಬೇಡಿ ಎಂದು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಪ್ರತಿಭಟನಾ ನಿರತ ಮಹಿಳೆಯರ ವಿರುದ್ಧ ಗರಂ ಆಗಿದ್ದಾರೆ. ಹೆಂಡತಿ ಮಕ್ಕಳನ್ನು ಬಿಟ್ಟು ಸೇವೆ ಮಾಡಿ ಅಂದರೆ ಹೆಂಗೆ, ಅಂಥ ದೊಡ್ಡ ಗುಣಾನೂ ನಂದಲ್ಲ, ನಾನದನ್ನ ಮಾಡಲ್ಲ. 

ನನಗದು ಬೇಕಾಗಿಲ್ಲ ಎಂದು ಶಾಸಕ ವೀರೇಂದ್ರ ಪಪ್ಪಿ ಸಿಡಿಮಿಡಿಗೊಂಡಿದ್ದಾರೆ. ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯದಲ್ಲಿ ಹಂಗಾಗಬೇಕು, ಹಿಂಗಾಗಬೇಕು ಅಂತ ಬಂದಿಲ್ಲ. ಬಂದಿನಿ ಸೇವೆ ಮಾಡಿದ್ದೇನೆ ಅಷ್ಟೇ. ನಿಮಗೆ ಇಷ್ಟ ಇದ್ರೆ ಮುಂದಿನ ಬಾರಿ ಗೆಲ್ಲಿಸಿ. ಇಲ್ಲ ಅಂದ್ರೆ ಬಿಡಿ ಎಂದು ಖಾರವಾಗಿ ಮಾತನಾಡಿದ್ದಾರೆ.

ನನಗೆ ಮತ ಹಾಕಿ ಗೆಲ್ಲಿಸಿ ಅಂತಾನೂ ಕೇಳುವುದಿಲ್ಲ. ನನಗೆ ನಿಮ್ಮಿಂದ ಆಗಬೇಕಾಗಿದ್ದು ಏನೂ ಇಲ್ಲ. ನನ್ನ ಫ್ಯಾಮಿಲಿ ಬಗ್ಗೆ ನೀವು ಮಾತನಾಡಬೇಕಾದರೆ ಬಹಳ ಯೋಚನೆ ಮಾಡಿ ಮಾತನಾಡಬೇಕು. ನಿಮ್ಮಿಂದ ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನನ್ನಿಂದ ನಿಮಗೆ ತೊಂದರೆಯಾಗಿಲ್ಲ. 

ನನ್ನಿಂದ ನಿಮಗೆ ತೊಂದರೆಯಾಗದಾದರೆ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತಿದ್ದೆ ಎಂದು ಶಾಸಕ ಕೆಸಿ ವೀರೇಂದ್ರ ಪಪ್ಪಿ ಪುಲ್ ಗರಂ ಆಗಿದ್ದಾರೆ.
ಕವಾಡಿಗರಹಟ್ಟಿಯಲ್ಲಿ ಮಹಿಳೆಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಸಮಸ್ಯೆ ಆಲಿಸುವ ಸಂದರ್ಭದಲ್ಲಿ ವೀರೇಂದ್ರ ಪಪ್ಪಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ನನ್ನ ಹೆಂಡತಿಗೆ ಹುಷಾರು ಇಲ್ಲ. 

ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಂದ ಬಿಟ್ಟರೆ ನಾನು ಹೋಗುತ್ತೇನೆ ಎಂದು ಶಾಸಕರು ಕೇಳಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ನಿಮ್ಮ ಸಮಸ್ಯೆಯೇ ಹೇಳುತ್ತೀರಾ, ನಮ್ಮ ಸಮಸ್ಯೆ ಕೇಳುವವರು ಯಾರೂ ಎಂದಿದ್ದಾರೆ. ಈ ಮಾತಿಗೆ ಶಾಸಕರು ಗರಂ ಆಗಿದ್ದಾರೆ.ಅಷ್ಟಕ್ಕೂ ಇವರು ಹಿರಿಯ ನಟ ದೊಡ್ಡಣ್ಣ ಅವರ ಅಳಿಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.