ನಿವೇದಿತಾ ಜೊತೆ ನನಗೆ ಸಂಬಂಧ ಇಲ್ಲ ಸ್ವಾಮಿ; ಮೌನಮುರಿದ ಸೃಜನ್ ಲೋಕೇಶ್
Mar 16, 2025, 21:13 IST
|

ಸುಮ್ ಸುಮ್ನೆ ಸಂಬಂಧ ಕಟ್ತಾರೆ, ನನಗೇನು ಹೆಂಡತಿ, ಮಕ್ಕಳು ಇಲ್ವಾ ಅಂತ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಕೆಂಡಕಾರಿದ್ದಾರೆ.ನನ್ನ ಬಗ್ಗೆ ವಿವಾದಗಳು ಬಂದಾಗ ನಾನು ಅದನ್ನು ಕಡೆಗಣಿಸುತ್ತೇನೆ. ಯಾಕಂದರೆ ನಾನೇನೋ ಮಾಡಿದಾಗ ನನ್ನ ಸ್ನೇಹಿತನಾಗಿ ಹೇಳಿದರೆ ಕೇಳಿಸಿಕೊಳ್ಳುತ್ತೇನೆ. ಆದರೆ ಪರಿಚಯನೇ ಇಲ್ಲದೇ ಇದ್ದವರು ಕಮೆಂಟ್ ಮಾಡಿದಾಗ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ಸುಮ್ ಸುಮ್ನೆ ಸಂಬಂಧ ಕಟ್ತಾರೆ, ನನಗೇನು ಹೆಂಡತಿ, ಮಕ್ಕಳು ಇಲ್ವಾ ಅಂತ ಗರಂ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ, ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಟಾಂಗ್ ಕೊಟ್ಟಿರುವ ಸೃಜನ್ ಲೋಕೇಶ್, ನೀನು ಯಾರು ಗುರು ನನ್ನ ಬಗ್ಗೆ ಡಿಸೈಡ್ ಮಾಡೋಕೆ. ನಿನ್ನ ಹತ್ರ ಯಾವುದಾದ್ರು ದಾಖಲೆ ಇದ್ಯಾ? ಎಲ್ಲದಕ್ಕೂ ಒಂದು ಲೈನ್ ಅನ್ನೋದು ಇರುತ್ತೆ. ಅದನ್ನ ಕ್ರಾಸ್ ಮಾಡಿದ್ರೆ ಎಂಥವರಿಗೆ ಆಗಲಿ ಕೋಪ ಬಂದೇ ಬರುತ್ತೆ. ಸುಮ್ನೆ ನಿಮಗೆ ಇಷ್ಟ ಬಂದ ಹಾಗೆ ಇವ್ರು ಇರಬಹುದು. ಹಿಂಗೆ ಇರಬಹುದು. ಇವರೇ ಇರಬಹುದು ಅಂದ್ರೆ ಹೇಗೆ. ಹೆಂಗೆ ಗೊತ್ತು ಗುರು ನಿನಗೆ. ಆ ಪದಗಳಿಗೆ ಒಂದು ಮಿತಿಯೇ ಬೇಡ್ವಾ. ಜೀವನದಲ್ಲಿ ನಾವು ಇಷ್ಟು ಹದಗೆಟ್ಟು ಹೋಗಿದ್ವಾ? ಎಂದು ಸೃಜನ್ ಲೋಕೇಶ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನನ್ನೂ ಪ್ರಶ್ನಿಸುವ ಹಕ್ಕು ನನ್ನ ಅಮ್ಮ, ನನ್ನ ಹೆಂಡತಿ, ನನ್ನ ಅಕ್ಕ, ನನ್ನ ಮಕ್ಕಳು, ನನ್ನ ಸ್ನೇಹಿತರು ಇಷ್ಟೇ ಯಾಕೆ ನನ್ನ ಶತ್ರುಗಳಿಗೆ ಕೂಡ ಇದೆ ಯಾಕೆಂದರೆ ಅವರಿಗೆ ನನ್ನ ಜೀವನದಲ್ಲಿ ನಾನು ಸ್ಥಾನ ಕೊಟ್ಟಿದ್ದೇನೆ ಎಂದಿರುವ ಸೃಜನ್ ಲೋಕೇಶ್, ಮೊದಲೆಲ್ಲ ನಾವು ಒಬ್ಬರ ಬಗ್ಗೆ ಮಾತನಾಡಬೇಕು ಅಂದರೆ ಹತ್ತು ಬಾರಿ ಯೋಚನೆ ಮಾಡುತ್ತಿದ್ದೇವು ಆದರೆ ಈಗ ಯಾರ ಬಗ್ಗೆಯಾದರೂ ಯಾರಾದರೂ ಬಾಯಿಗೆ ಬಂದ ಹಾಗೇ ಮಾತನಾಡುವಂತೆ ಆಗಿದೆ ಎಂದು ಹೇಳಿದ್ದಾರೆ.
ಕೈಯಲ್ಲಿ ಮೊಬೈಲ್ ಇದ್ದವರೆಲ್ಲ ಈಗ ಪತ್ರಕರ್ತರಾಗಿದ್ಧಾರೆ ಎಂದಿರುವ ಸೃಜಾ ನಮ್ಮ ವ್ಯವಸ್ಥೆ ಇಷ್ಟೊಂದು ಹದಗೆಟ್ಟು ಹೋಗಿದೆಯಾ ಎಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,15 May 2025