ನನಗೆ ದುಡ್ಡು ಅಂದ್ರೆ ತುಂಬಾ ಇಷ್ಟ; ರಾಜ್ ಕುಮಾರ್ ಮೊಮ್ಮಗಳ ಖ ಡಕ್ ಮಾತು

 | 
೬ೀ

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಇದೀಗ ಪೌಡರ್ ಹಚ್ಚಲು ರೆಡಿಯಾಗಿದ್ದಾರೆ. ದೂದಪೇಡ ದಿಗಂತ್ ಜೊತೆ ನಕ್ಕು ನಗಿಸಲು ನಟಿ ರೆಡಿಯಾಗಿದ್ದಾರೆ. ಸದ್ಯ ಧನ್ಯಾ ಪಾತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ವಿಭಿನ್ನ ಪಾತ್ರದ ಮೂಲಕ ಪಾತ್ರದ ಮೂಲಕ ಧನ್ಯಾ ಬರುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ತುಟಿ ಮೇಲಿರೋದನ್ನು ತುಟೀಲೇ ತಾನೇ ಹುಡುಕಬೇಕು? ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.‌

ಅಂದಹಾಗೆ, ಇತ್ತೀಚೆಗೆ ಪೌಡರ್ ಸಿನಿಮಾದ ಟೀಸರ್ ಕೂಡ ರಿಲೀಸ್ ಮಾಡಲಾಗಿತ್ತು. ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್

ಸಿನಿಮಾದಲ್ಲಿ ಮಾತ್ರ ನನಗೆ ಹಣವೆಂದರೆ ಇಷ್ಟ ನಿಜಜೀವನದಲ್ಲಿ ಬಳಸಲು ಎಷ್ಟು ಬೇಕೋ ಅಷ್ಟಿದ್ದರೆ ಸಾಕು ಅಂದಿದ್ದಾರೆ.ಈ ಚಿತ್ರದಲ್ಲಿ ಧನ್ಯಾ ರಾಮ್ ಕುಮಾರ್ ಜೊತೆ ದಿಗಂತ್, ರವಿಶಂಕರ್ ಗೌಡ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ನಾಗಭೂಷಣ್, ಅನಿರುದ್ಧ ಆಚಾರ್ಯ ಸೇರಿದಂತೆ ಹಲವರು ನಟಿಸಿದ್ದಾರೆ.’ಪೌಡರ್’ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಸಹಯೋಗದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.