ಬಿಗ್ ಬಾಸ್ ಕೊಟ್ಟ 50 ಲಕ್ಷದಲ್ಲಿ ಐಶಾರಾಮಿ ಮನೆ ಕಟ್ಟುಕೊಂಡು ಜೀವನ ಸಾಗಿಸ್ತೀನಿ; ಹನುಮಂತ
Jan 28, 2025, 13:02 IST
|

ಈ ಬಾರಿಯ ಬಿಗ್ ಬಾಸ್ನಲ್ಲಿ ಒಟ್ಟೂ 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅವರಲ್ಲಿ 19 ಜನರನ್ನು ಹಿಂದಿಕ್ಕಿ ಹನುಮಂತ ಅವರು ಕಪ್ನ ಒಲಿಸಿಕೊಂಡಿದ್ದಾರೆ. ಜವಾರಿ ಹುಡುಗನಾಗಿ, ಜವಾರಿ ಹಾಡುಗಳನ್ನು ಹಾಡುತ್ತಾ ಗಮನ ಸೆಳೆದರು. ಯಾರೇ ನಾಮಿನೇಟ್ ಮಾಡಲಿ, ಯಾರು ಏನೇ ಕಾರಣ ಕೊಡಲಿ, ಅವರನ್ನು ಕಳಪೆಗೆ ಹಾಕಲಿ ಇದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳದೆ ಆಡಿದರು. ಅದಕ್ಕೆ ಕೊನೆಗೂ ಜಯ ಸಿಕ್ಕಂತೆ ಆಗಿದೆ. ‘ಒಳ್ಳೆಯತನಕ್ಕೆ ಜಯ ಇದೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.
ಹನುಮಂತನ ಪರವಾಗಿ ಅನಕೇರು ವೋಟ್ ಮಾಡುವಂತೆ ಕೋರಿದ್ದರು. ಉತ್ತರ ಕರ್ನಾಟಕ ಮಂದಿ ಹನುಮಂತಗೆ ಭರ್ಜರಿ ವೋಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕ ಮಂದಿ ಮಾತ್ರ ಅಲ್ಲದೆ, ಎಲ್ಲಾ ಭಾಗದ ಜನರಿಗೂ ಅವರು ಇಷ್ಟ ಆಗಿದ್ದರು. ಈ ಕಾರಣಕ್ಕೆ ಅವರಿಗೆ 5 ಕೋಟಿ ವೋಟ್ ಬಿದ್ದಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಜನರಿಗೆ ಇಷ್ಟವಾದ ಹನುಮಂತಗೆ ಎಲ್ಲರೂ ಶುಭ ಕೋರಿ ಗೆಲ್ಲಿಸಿದ್ದಾರೆ. ಅಷ್ಟಕ್ಕೂ ಹನುಮಂತ ಅವರು ಸಾಕಷ್ಟು ಕಷ್ಟವನ್ನು ನೋಡಿದವರು. ಅವರು ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ, ಈ ರೀತಿ ವಿನ್ ಆಗಿದ್ದು ಎಲ್ಲಿಯೂ ಇಲ್ಲ. ಕೇವಲ ಲುಂಗಿ-ಶರ್ಟ್ನಲ್ಲಿ ಕಾಣಿಸಿಕೊಳ್ಳುತ್ತಾ, ಬಿಗ್ ಬಾಸ್ನಲ್ಲಿ ಸಿಂಪಲ್ ಆಗಿದ್ದ ಅವರು ವಿನ್ ಆಗಿಯೇ ಬಿಟ್ಟರು.ಹನುಮಂತ ಅವರ ಬುದ್ಧಿವಂತಿಕೆಯನ್ನು ಸುದೀಪ್ ಅವರು ಮೊದಲಿಂದ ಹೊಗಳುತ್ತಾ ಬರುತ್ತಿದ್ದರು. ಹನುಮಂತ ಅವರು ಉತ್ತಮವಾಗಿ ಆಡುತ್ತಿದ್ದಾರೆ ಎಂದು ಅನೇಕ ಬಾರಿ ಹೇಳಿದ್ದಾರೆ. ಅವರು ಯಾವುದೇ ತಾರತಮ್ಯ ಮಾಡದೆ ತೆಗೆದುಕೊಳ್ಳುತ್ತಿದ್ದ ನಿರ್ಧಾರಕ್ಕೆ ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಈಗ ಅವರಿಗೆ ಜಯ ಸಿಕ್ಕಿದೆ. ಹನುಮಂತನ ಅಭಿಮಾನಿಗಳು ದೊಡ್ಮನೆ ಹೊರಗೆ ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನು ಸ್ನೇಹಿತರೇ... ಇವ್ರ ಜೀವನದ ಅನುಭವಗಳನ್ನು ನೋಡೋದಾದ್ರೇ ಸವಣೂರಿನಿಂದ 6 ಕಿ.ಮೀ. ದೂರದಲ್ಲಿರುವ ಚಿಲ್ಲೂರು ಬಡ್ನಿ ಗ್ರಾಮದ ತಾಂಡಾದ ಮನೆಯಲ್ಲಿ ಹನುಮಂತ ಅವರ ಕುಟುಂಬವಿದೆ. ಹನುಮಂತ ಅವರ ತಂದೆ ಮೇಘಪ್ಪ ಹಾಗೂ ತಾಯಿ ಶೀಲವ್ವ. ಈ ದಂಪತಿ ಕುರಿ ಕಾಯುತ್ತ ಮಗನನ್ನು ಸಾಕಿದ್ದಾರೆ. ಹನುಮಂತ ಅವರಿಗೆ ಅಣ್ಣ, ತಂಗಿ ಹಾಗೂ ಮೂವರು ಅಕ್ಕಂದಿರಿದ್ದಾರೆ. 5ನೇ ತರಗತಿಯವರೆಗೂ ಓದಿರುವ ಹನುಮಂತ, ಬಾಲ್ಯದಲ್ಲಿಯೇ ಭಜನಾ ಪದಗಳನ್ನು ಕೇಳಲು ಹೋಗುತ್ತಿದ್ದರು. ಭಜನಾ ಮಂಡಳಿ ಸದಸ್ಯರ ಜೊತೆ ಸೇರಿ ಹಾಡು ಹಾಡಲಾರಂಭಿಸಿದ್ದರು. ದಿನ ಕಳೆದಂತೆ ಶಾಲೆ ಬಿಟ್ಟು, ಹಾಡುಗಾರಿಕೆಯಲ್ಲಿಯೇ ಮುಂದುವರಿದರು. ಇದರ ಜೊತೆಯಲ್ಲಿಯೇ ತಂದೆ–ತಾಯಿ–ಸಹೋದರರೊಂದಿಗೆ ಕುರಿ ಕಾಯಲು ಹೋಗುತ್ತಿದ್ದರು. ಇದರ ನಡುವೆಯೇ ಸವಣೂರು, ಶಿಗ್ಗಾವಿ ಹಾಗೂ ಸುತ್ತಮುತ್ತಲ ತಾಲ್ಲೂಕಿನ ಗ್ರಾಮಗಳಲ್ಲಿ ಭಜನಾ ಪದಗಳನ್ನು ಹಾಡುತ್ತ ಪ್ರಸಿದ್ಧಿ ಪಡೆದಿದ್ದರು.
ಸ್ನೇಹಿತರೇ...ಚಿಲ್ಲೂರು ಬಡ್ನಿ ಗ್ರಾಮಕ್ಕೆ ಸಮೀಪದಲ್ಲಿ ಶಿಶುನಾಳ ಗ್ರಾಮವಿದೆ. ಇದೇ ಊರಿನ ಸಂತ ಶಿಶುನಾಳ ಷರೀಫ್‌ರ ತತ್ವಪದಗಳನ್ನು ಹನುಮಂತ ಸರಾಗವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಕುರಿ ಕಾಯುತ್ತಿದ್ದ ಸಂದರ್ಭದಲ್ಲಿಯೇ ಹಾಡು ಹಾಡಿ ಸಹೋದರನ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಸ್ನೇಹಿತರ ಒತ್ತಾಯದ ಮೇರೆಗೆ ಜೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ಕಾರ್ಯಕ್ರಮಕ್ಕೆ ಆಡಿಷನ್ ನೀಡಿದ್ದ ಅವರು, ತಮ್ಮ ಕಂಠದ ಮೂಲಕ ಅವಕಾಶ ಗಿಟ್ಟಿಸಿಕೊಂಡರು.
‘ಕೇಳ ಜಾಣ, ಶಿವ ಧ್ಯಾನ ಮಾಡಣ್ಣ... ನಿನ್ನೊಳಗ ನೀನು ತಿಳಿದ ನೋಡಣ್ಣ...’ ಹಾಡಿನ ಮೂಲಕ ತೀರ್ಪುಗಾರರ ಮನಗೆದ್ದ ಹನುಮಂತ, ಬಳಿಕ ತಿರುಗಿ ನೋಡಲೇ ಇಲ್ಲ. ಹಾಡಿದ ಹಾಡುಗಳೆಲ್ಲವೂ ಪ್ರಸಿದ್ಧಿ ತಂದುಕೊಟ್ಟವು. ನೃತ್ಯದ ರಿಯಾಲಿಟಿ ಶೋಗಳಲ್ಲಿಯೂ ಹನುಮಂತ ಮಿಂಚಿದರು. ಹಲವು ಪ್ರಶಸ್ತಿಗಳು, ಸನ್ಮಾನಗಳು ಮುಡಿಗೇರಿದವು. ಸಂಗೀತ ಆರ್ಕೆಸ್ಟ್ರಾಗಳೂ ಕೈ ಹಿಡಿದವು.
ಸ್ನೇಹಿತರೇ...ಇದೀಗ ಅದೇ ಹಳ್ಳಿ ಹೈದ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತ ವಿಜೇತರಾಗಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಆದರೆ, ಇಷ್ಟೂ ಹಣ ಅವರಿಗೆ ಸಿಗೋದಿಲ್ಲ. ಸರ್ಕಾರ ದೊಡ್ಡ ಮೊತ್ತದ ತೆರಿಗೆಯನ್ನು ವಿಜೇತರಿಗೆ ವಿಧಿಸುತ್ತದೆ. ಇದನ್ನು ಸರ್ಕಾರಕ್ಕೆ ಅವರು ಪಾವತಿಸಬೇಕಾಗುತ್ತದೆ. ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್ನಲ್ಲಿ ಆಡಿ ಗೆದ್ದಲ್ಲಿಈ ತೆರಿಗೆ ಪಾವತಿಸಬೇಕಾಗುತ್ತದೆ.
ಇನ್ನೂ ಸರಾಳವಾಗಿ ಹೇಳ್ಬೇಕು ಅಂದ್ರೆ ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಬರುವ ಒಟ್ಟೂ ಹಣದಲ್ಲಿ ಶೇ. 30 ಹಣ ಸರ್ಕಾರಕ್ಕೆ ಕೊಡಲೇಬೇಕಿದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್ನಲ್ಲಿ ಆಡಿ ಗೆದ್ದಲ್ಲಿ ಶೇ. 30 ತೆರಿಗೆ ಪಾವತಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ಇಂದ ಈ ತೆರಿಗೆ ಅನ್ವಯ ಆಗುತ್ತದೆ.
ಸ್ನೇಹಿತರೇ ಇವೆಲ್ವುಗಳ ನಡುವೆ ಬೇಸರದ ಸಂಗತಿ ಏನಪ್ಪಾ ಅಂದ್ರೆ ಅನಾರೋಗ್ಯದಿಂದ ಬಳಲುತ್ತಿದ್ದ ಹನುಮಂತ ಅವರ ಚಿಕ್ಕಪ್ಪ ದೇವಪ್ಪ ಅವರು ನಿಧನರಾಗಿದ್ದರೆ, ಚಿಲ್ಲೂರು ಬಡ್ನಿಯಲ್ಲಿ ಸೂತಕ ಆವರಿಸಿದೆ. ಇದರಿಂದ ಹನುಮಂತನ ನೋಡಲು ಇರುವವರಿಗೆ ಬಂದ ಹಲವಾರು ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.ನಿನ್ನೆ ಹನುಮಂತನ ಚಿಕ್ಕಪ್ಪ ನಿಧನರಾದ ಯಾವುದೇ ಸಂಭ್ರಮಾಚರಣೆ ಮಾಡದಿರಲು ಹನುಮಂತನ ಸ್ನೇಹಿತರು, ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಸದ್ಯ ಹನುಮಂತ ಹಾಗೂ ಅವರ ಕುಟುಂಬಸ್ಥರು ಬೆಂಗಳೂರಿನಲ್ಲೇ ಇದ್ದಾರೆ. ಮೂರು ದಿನದ ಕಾರ್ಯ ಮುಗಿದ ನಂತರ ಹನುಮಂತ ಚಿಲ್ಲೂರು ಬಡ್ನಿಗೆ ಬರುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.
ಸ್ನೇಹಿತರೇ...ಒಟ್ಟಿನಲ್ಲಿ ಹೇಳುವುದಾದರೆ ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ ಅಗಿದ್ದೇ ತಡ ಕನ್ನಡಿಗರ ವಾಟ್ಸಾಪ್ ಸ್ಟೇಟಸ್ ಪೂರ್ತಿ ಹನುಮಂತ ಹವಾ ಜೋರಾಗಿ ಇತ್ತು. ಅಲ್ಲದೆ ಹನುಮಂತುಗೆ ಎಲ್ಲರೂ ಸಖತ್ ಆಗಿ ವಿಶ್ ಕೂಡ ಮಾಡಿದರು. ಈ ಮೂಲಕ ಅತ್ತ ಪಟಾಕಿ ಹೊಡೆದು ಸಂಭ್ರಮಿಸಿದ ಜನಗಳ ಜೊತೆಗೆ, ಇತ್ತ ಮನೆಯಲ್ಲೇ ಕೂತು ಖುಷಿಯಿಂದ ಹನುಮಂತ ಗೆದ್ದ ಸುದ್ದಿ ಹಂಚಿಕೊಂಡ ಜನ್ರು ಕೂಡಾ ಇದ್ದಾರೆ. ಮತ್ಯಾಕೆ ತಡ ನೀವು ಕೂಡಾ ಹನುಮಂತನಿಗೆ ಅಭಿನಂದನೆಗಳ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,7 Jul 2025