ಕಾಂತಾರ2 ಸಿನಿಮಾದಲ್ಲಿ ನಾನು ಅಭಿನಯಿಸಲ್ಲ; ಒಮ್ಮೆಲೇ ಸಿ ಡಿದೆದ್ದ ರಾಜ್ ಬಿ ಶೆಟ್ಟಿ

 | 
Hh

ಭೂತ ಕೋಲ, ಕಂಬಳದ ಜೊತೆಗೆ ಕರಾವಳಿಯ ವಿವಿಧ ಆಚರಣೆಗಳನ್ನು 'ಕಾಂತಾರ' ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕಾಡಿನ ಜೊತೆಗೆ ಬದುಕು ಕಟ್ಟಿಕೊಂಡಿರುವ ಹಳ್ಳಿಯ ಜನರ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿ ನನಗೆ ಕೋಲದ ಸೀಕ್ವೆನ್ಸ್ ಕೊರಿಯೋಗ್ರಫ್ ಮಾಡುವುದಕ್ಕೆ ರಾಜ್ ಬಿ ಶೆಟ್ಟಿ ಬಂದಿದ್ದರು. ಕೋಲ ಶೂಟ್ ಮಾಡಬೇಕಿತ್ತು.

 ದೈವದ ಅಲಂಕಾರದಲ್ಲಿರುವಾಗ ಎರಡೆರಡು ಕೆಲಸ ಮಾಡುವುದು ಕಷ್ಟ. ಹಾಗಾಗಿ ನಾನು ಶೆಟ್ರಿಗೆ ಕಾಲ್ ಮಾಡಿದೆ. ಕಾಲ್ ಮಾಡಿ ಕ್ಲೈಮ್ಯಾಕ್ಸ್ ಕೊರಿಯೋಗ್ರಫ್ ಮಾಡಲು ಬರಬಹುದೇ ಎಂದು ಕೇಳಿದಕ್ಕೆ ಬಂದು ಸಹಾಯ ಮಾಡಿದ್ದರು ಎಂದಿದ್ದರು ರಿಶಭ್ ಶೆಟ್ಟಿ.

ಇನ್ನು ರಿಷಬ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಇಬ್ಬರು ಕರಾವಳಿ ಭಾಗದವರು. ಆತ್ಮೀಯ ಸ್ನೇಹಿತರು ಕೂಡ. 'ಗರುಡ ಗಮನ ವೃಷಭ ವಾಹನ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ನಿರ್ದೇಶನದಲ್ಲಿ ರಿಷಬ್ ನಟಿಸಿದ್ದರೆ, 'ಕಾಂತಾರ' ಚಿತ್ರದಲ್ಲಿ ರಾಜ್‌, ರಿಷಬ್‌ಗೆ ಕೊರಿಯೋಗ್ರಫಿ ಮಾಡಿದ್ದಾರೆ.

ಚಿತ್ರದಲ್ಲಿ ಭೂತ ಕೋಲ ಆಚರಣೆಯನ್ನು ತೋರಿಸಿದ್ದಾರೆ. ಅದೊಂದು ನೃತ್ಯ ಪ್ರಕಾರ. ಅದರಲ್ಲಿ ರಿಷಬ್ ಪರ್ಫಾರ್ಮ್ ಮಾಡಬೇಕಿತ್ತು. ಕಾಸ್ಟ್ಯೂಮ್‌ ಹಾಕಿಕೊಂಡು ಆ ಮೇಕಪ್‌ನಲ್ಲಿ ಪರ್ಫಾರ್ಮ್‌ ಮಾಡುವುದರ ಜೊತೆಗೆ ನಿರ್ದೇಶನ ಅವರಿಗೆ ಕಷ್ಟವಾಯಿತು. ಹಾಗಾಗಿ ನಾನು ಸಹಾಯ ಮಾಡಿದೆ. ಆದರೆ ಈ ಸಲ ಮಾಡುವುದಿಲ್ಲ ಎಂದಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ನಾನು ಅದೇ ಅಂಗಳದಲ್ಲಿ ಬೆಳೆದವನು. ದೈವ ಕೋಲ, ಅದರ ನಂಬಿಕೆ, ಆಚಾರ ವಿಚಾರ, ಬಟ್ಟೆ, ಬಣ್ಣ ಎಲ್ಲವನ್ನು ಬಹಳ ಹತ್ತಿರದಿಂದ ನೋಡಿದವನು. ಹಾಗಾಗಿ ಅದರ ಬಗ್ಗೆ ನನಗೆ ಬಹಳ ಚೆನ್ನಾಗಿ ಗೊತ್ತಿತ್ತು. ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೇವೆ ಈ ಸಲ ಅವರೇ ಮಾಡುತ್ತಾರೆ ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.