ಮದುವೆ ಆದರೂ ಮಗು ಮಾಡಲ್ಲ ಎಂದ ನ ಟಿ 'ನನ ಗಂಡನಿಗೆ ಮಗು ಮಾಡಲು ಬಿಡಲ್ಲ ಎಂದ ಕಲಾವಿದೆ
Aug 10, 2024, 14:33 IST
|
ಜನರ ಮನಸ್ಥಿತಿಗಳು ಬದಲಾಗ್ತಿದೆ. ದೊಡ್ಡ ಕುಟುಂಬಗಳೀಗ ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡನೆ ಆಗ್ತಿವೆ. ಆಧುನಿಕತೆಯ ಓಟದಲ್ಲಿ ಕುಟುಂಬ ಎಂಬ ಪದದ ವ್ಯಾಖ್ಯಾನವೂ ಬದಲಾಗುತ್ತಿದೆ. ಮದುವೆ ಬೇಡ, ಆದರೂ ಕೊನೆವರೆಗೂ ಜತೆಗಿರೋಣ, ಮಕ್ಕಳು ಬೇಕು ಆದ್ರೆ ಮದುವೆ ಬೇಡ. ಹೀಗೆ ಸಾಕಷ್ಟು ಏರಿಳಿತಗಳು ಸದ್ಯದ ಸಮಾಜದಲ್ಲಿದೆ.
ಇದು ಅವರವರ ವೈಯಕ್ತಿಯ ಅಭಿಲಾಷೆಯಾದರೂ, ಭವಿಷ್ಯದ ಚಿಂತನೆಯ ಭಾಗವೂ ಹೌದು. ಈಗ ಸ್ಯಾಂಡಲ್‌ವುಡ್‌ನ ಹಿರಿಯ ನಟ ಸಿಹಿ ಕಹಿ ಚಂದ್ರು ಅವರ ಪುತ್ರಿ ಹಿತಾ ಚಂದ್ರಶೇಖರ್, ಜೀವನದಲ್ಲಿ ಮಕ್ಕಳೇ ಬೇಡ ಎಂದು ನಿರ್ಧರಿಸಿದ್ದಾರೆ. ನಾಯಿ ಸಾಕುತ್ತೇನೆ ಹೊರತು ಮಕ್ಕಳನ್ನು ಸಾಕುವುದಿಲ್ಲ ಎಂದಿದ್ದಾರೆ.
ಹಿತಾ ಚಂದ್ರ ಶೇಖರ್, ಸಿಹಿ ಕಹಿ ಚಂದ್ರಶೇಖರ ಅವರ ಹಿರಿಮಗಳು. 2019ರ ಡಿಸೆಂಬರ್‌ನಲ್ಲಿ ನಟ ಕಿರಣ್ ಶ್ರೀನಿವಾಸ್ ಜತೆಗೆ ಬಾಳ ಬಂಧನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಇದೀಗ ನಾಲ್ಕುವರೆ ವರ್ಷಗಳಾಗುತ್ತ ಬಂದರೂ ಈ ದಂಪತಿ ಮಕ್ಕಳು ಮಾಡಿಕೊಳ್ಳುವ ನಿರ್ಧಾರ ಮಾಡಿಲ್ಲ. ಹೋದಲ್ಲಿ ಬಂದಲ್ಲಿ, ಸಂಬಂಧಿಕರ ವಲಯದಲ್ಲೂ, ನಮ್ಮ ಕೈಗೆ ಮುದ್ದಾದ ಮೊಮ್ಮಗುವನ್ನು ಯಾವಾಗ ಕೊಡ್ತಿಯಾ ಎಂದು ಕೇಳಿದವರೇ ಹೆಚ್ಚು.
ಆದರೆ, ಹಿತಾ ಅವರ ಆಲೋಚನೆಯೇ ಬೇರೆ. ಈ ಬಗ್ಗೆ ರ್ಯಾಪಿಡ್ ರಶ್ಮಿ ಅವರ ಚಾಟ್ ಶೋನಲ್ಲಿ ಮಾತನಾಡಿದ್ದಾರೆ. ಮೊದಲನೇದಾಗಿ ನನಗೆ ಮಕ್ಕಳನ್ನು ಮಾಡಿಕೊಳ್ಳುವ ಫೀಲಿಂಗ್ ಇಲ್ಲ. ನಾನು ಮತ್ತು ಕಿರಣ್ ಫ್ರೆಂಡ್ಸ್ ಆಗಿದ್ದಾಗಲೇ ಈ ವಿಚಾರವನ್ನು ಮಾತನಾಡಿಕೊಂಡಿದ್ವಿ. ಆತನಿಂದಲೂ ಇದಕ್ಕೆ ಪಾಸಿಟಿವ್ ಉತ್ತರವೇ ಸಿಕ್ಕಿತ್ತು. ಯಾಕೆ ನನ್ನದೇ ಆದ ಮಗು ಬೇಕು? ಎಂಬ ಭಾವನೆ ನನಗಿಲ್ಲ.
ಈ ನಡುವೆ ಈ ಜಗತ್ತಿನಲ್ಲಿ ಏನೆನೆಲ್ಲ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಈ ಪ್ರಪಂಚಕ್ಕೆ ಇನ್ನೊಂದು ಮಗು ತರಲೇಬೇಕಾ ಎಂಬ ಯೋಚನೆ ಬಂತು ಹಾಗಾಗಿ ನಾವು ಮಕ್ಕಳನ್ನು ಮಾಡಿ ಕೊಳ್ಳುವುದಿಲ್ಲ ಎಂದಿದ್ದಾರೆ.