ಆತ ಒಪ್ಪಿದರೆ ಒಳಗಡೆನೇ ಮದುವೆ; ರೊ ಚ್ಚಿಗೆದ್ದ ಮಹಿಳೆ
Sep 7, 2024, 16:23 IST
|
ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ರನ್ನು ನೋಡಲೇಬೇಕು, ಮಾತಾಡಲೇ ಬೇಕು ಎಂದು ಮಹಿಳಾ ಅಭಿಮಾನಿಯೊಬ್ಬರು ಪಟ್ಟು ಹಿಡಿದ ಘಟನೆ ಜೈಲಿನ ಎದುರು ನಡೆದಿದೆ. ಕಲಬುರಗಿ ಮೂಲದ ಬೆಂಗಳೂರಿನ ಆರ್ ಆರ್ ನಗರ ನಿವಾಸಿ ಲಕ್ಷ್ಮೀ ಎನ್ನುವ ಮಹಿಳೆ ಬೆಂಗಳೂರಿಂದ ಬಳ್ಳಾರಿ ಜೈಲಿಗೆ ಗುರುವಾರ ಬೆಳಗ್ಗೆ ಆಗಮಿಸಿ, ನಟ ದರ್ಶನ್ ಅವರನ್ನು ನೊಡಲೇ ಬೇಕು ಅಂತಾ ಹಠ ಹಿಡಿದು ಜೈಲು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಈ ವೇಳೆ ಜೈಲಿನ ಭದ್ರತಾ ಸಿಬ್ಬಂದಿ ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ ಎಂದು ತಿಳಿಸುತ್ತಿದ್ದಂತೆ ನಾನು ದರ್ಶನ್ ಅವರನ್ನು ಮದುವೆ ಆಗೋದಕ್ಕೂ ಸಿದ್ಧವಾಗಿ ಬಂದಿರುವೆ ಎಂದಿದ್ದಾಳೆ. ವಿಜಯಲಕ್ಷ್ಮಿ ತರ ನಾನೂ ಮದುವೆ ಆಗುತ್ತೇನೆ. ನನಗೆ ದರ್ಶನ್ ಅಂದ್ರೆ ಇಷ್ಟ. ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಹೋದರೂ ಅಲ್ಲೂ ಬಿಡಲಿಲ್ಲ.
ಈಗ ಇಲ್ಲಿಗೆ ಬಂದಿರುವೆ. ನಟ ದರ್ಶನ್ ಅವರಿಗೆ ಹಣ್ಣು ಕೊಟ್ಟು ನೋಡಿ ಹೊಗುವೆ ಎಂದು ಪಟ್ಟು ಹಿಡಿದಿದ್ದ ಲಕ್ಷ್ಮಿಯನ್ನು ಕೊನೆಗೆ ಜೈಲಿನ ಸಿಬ್ಬಂದಿ ಮನವೊಲಿಸಿ ವಾಪಾಸ್ ಕಳುಹಿಸಿದ್ದಾರೆ.ಈ ಹಿಂದೆ ಇದೇ ಮಹಿಳೆ, ದರ್ಶನ್ ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿದ್ದಾಗಲೂ ಅಲ್ಲಿಗೆ ಭೇಟಿ ನೀಡಿದ್ದರು.
ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ ಎಂದು ಆಕೆಯನ್ನು ತಿಳಿಸಿದಾಗ, ದರ್ಶನ್‌ರನ್ನು ಮದುವೆ ಆಗುವುದಕ್ಕೂ ನಾನು ರೆಡಿಯಾಗಿ ಬಂದಿರುವೆ. ನನಗೆ ದರ್ಶನ್ ಅಂದ್ರೆ ತುಂಬಾ ಇಷ್ಟ. ನಾನು ದರ್ಶನ್ ಅವರ ಹೆಂಡತಿಯಾಗುವುದಕ್ಕೂ ಸಿದ್ಧಳಿದ್ದೇನೆ. ದರ್ಶನ್ ಅವರಿಗೆ ವಿಜಯ ಲಕ್ಷ್ಮೀ ಒಬ್ಬರೇ ಹೆಂಡತಿ ಇದ್ದಾರೆ. ಇವಾಗ ನನಗೆ ಅವರೆಂದರೆ ತುಂಬಾ ಇಷ್ಟ.
ನಾನು ಜೈಲಲ್ಲಿ ಅವರನ್ನು ನೋಡಲೇಬೇಕು. ಅವರನ್ನು ಮಾತಾಡಿಸಿ ಬರಲೇಬೇಕು. ನಾನು ಅವರಿಗೆ ಮಾತಾಡಿಸುವುದಕ್ಕೆ ಪರಪ್ಪನ ಆಗ್ರಹಾರಕ್ಕೂ ಹೋಗಿದ್ದಾಗ ಅವಕಾಶ ಸಿಗಲಿಲ್ಲ. ನಾನು ಅವರನ್ನು ಮಾತಾಡಿಸಿದ ಬಳಿಕವೇ ಇಲ್ಲಿಂದ ಹೋಗಬೇಕು. ನಾನು ಅವರ ರಕ್ತ ಸಂಬಂಧಿಯಾಗುವುದಕ್ಕೆ ಕಾಯ್ತಾ ಇದ್ದೀನಿ ಎಂದು ಆ ಮಹಿಳೆ ರಂಪಾಟ ಮಾಡಿ ಅಧಿಕಾರಿಗಳಿಗೆ ತಲೆನೋವು ತಂದಿದ್ದಾರೆ. ಇದನ್ನು ಪಬ್ಲಿಕ್ ಟಿವಿಯ ರಂಗಣ್ಣ ರಸವತ್ತಾಗಿ ಹೇಳಿದ್ಧಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.