ನೀವು ಕೂಡ R ಹೆಸರಿಟ್ಟರೆ ಕೋಟಿಯ ಒಡೆಯನಾಗಬಹುದು; ಏನಿದು ರಿಷಬ್ ಶೆಟ್ಟಿ ಸೀಕ್ರೆಟ್

 | 
J

ಪ್ರಶಾಂತ್ ಶೆಟ್ಟಿ ಎಂದರೆ ನಿಮಗೆ ಖಂಡಿತಾ ಗೊತ್ತಾಗಲಿಕ್ಕಿಲ್ಲ. ಅದೇ ರಿಷಬ್ ಶೆಟ್ಟಿ ಎಂದರೆ ಥಟ್ಟನೆ ತಿಳಿಯುತ್ತದೆ. ಹೌದು, ರಿಷಬ್ ಶೆಟ್ಟಿ ಮೂಲ ಹೆಸರು ಪ್ರಶಾಂತ್ ಶೆಟ್ಟಿ. 1983ರಲ್ಲಿ ಜುಲೈ 7, ಬೆಳಗ್ಗೆ 7 ಗಂಟೆಗೆ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಪ್ರಶಾಂತ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಹಾಗೂ ರತ್ನಾವತಿ ಶೆಟ್ಟಿ ಎಂಬ ಮಧ್ಯಮ ವರ್ಗದ ದಂಪತಿಯ ಮಕ್ಕಳಲ್ಲಿ ಕೊನೆಯವರು.

ನಾಟಕ, ಶಾರ್ಟ್ ಮೂವಿ, ಸಿನಿಮಾಗಳಲ್ಲೆಲ್ಲ ಪ್ರಶಾಂತ್ ಶೆಟ್ಟಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ ಯಾವುದೂ ಕೈ ಹಿಡಿಯಲಿಲ್ಲ. ಹೀರೋ ಆಗಬೇಕು ಅಂತ ಬಂದವರು, ಅವಕಾಶಕ್ಕಾಗಿ ಅಲೆದಿದ್ದಾರೆ. ಒಂದೆರಡು ಸಿನಿಮಾಗೆ ಹೀರೋ ಅಂತ ಗೊತ್ತಾದರೂ ಮುಹೂರ್ತಕ್ಕೂ ಮುನ್ನವೇ ಪ್ರಾಜೈಕ್ಟ್ ಡ್ರಾಪ್ ಆಗುತ್ತಿತ್ತಂತೆ. ಇದರಿಂದ ನೊಂದ ಪ್ರಶಾಂತ್ ತಮ್ಮ ಅಪ್ಪನ ಸಲಹೆ ಕೇಳುತ್ತಾರೆ.

ಪ್ರಶಾಂತ್ ಶೆಟ್ಟಿ ತಂದೆ ಭಾಸ್ಕರ್ ಶೆಟ್ಟಿ ಜ್ಯೋತಿಷ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದರಂತೆ. ಹೀಗಾಗಿ ಸಿನಿಮಾಕ್ದಲ್ಲಿ ಬೆಳೆಯಬೇಕು ಅಂತ ಹೆಸರು ಬದಲಾವಣೆ ಮಾಡಿಕೊಳ್ಳುತ್ತೇನೆ ಅಂತ ಪ್ರಶಾಂತ್ ಹೇಳಿದ್ದಾರೆ. ಈ ವೇಳೆ ರಾಜ್‌ಕುಮಾರ್, ರಜಿನಿಕಾಂತ್ ಅವರಂತೆ ಆರ್ ಅಕ್ಷರದಿಂದ ಹೆಸರು ಇಟ್ಟುಕೊಳ್ಳುವಂತೆ ತಂದೆ ಸೂಚಿಸಿದ್ದಾರೆ. ಆಗ ಹೊಳೆದಿದ್ದೆ ರಿಷಬ್ ಹೆಸರು. ಹಿಂದೆ ಮುಂದೆ ಯೋಚಿಸದ ಪ್ರಶಾಂತ್ ಶೆಟ್ಟಿ ತಮ್ಮ ಹೆಸರನ್ನು ರಿಷಬ್ ಶೆಟ್ಟಿ ಅಂತ ಬದಲಾಯಿಸಿಕೊಳ್ಳುತ್ತಾರೆ.

ನಂತರ ಇದೇ ಆಸೆಯಂತೆ ಮಗ ಮತ್ತು ಮಗಳಿಗೂ ರ ಅಕ್ಷರದಿಂದ ಬರುವ ಹೆಸರನ್ನೇ ಇಟ್ಟಿದ್ದಾರೆ.ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿಗೆ ರಣ್ವಿತ್ ಶೆಟ್ಟಿ ಎಂಬ ಮಗನಿದ್ದಾನೆ. ರಾದ್ಯಾ ಎನ್ನುವ ಮಗಳು ಕೂಡಾ ಇದ್ದಾಳೆ. ಇತ್ತೀಚಿಗಷ್ಟೆ ಶಾರದಾಂಬೆಯ ಪೂಜೆಯ ಸಂದರ್ಭದಲ್ಲೂ ಅಕ್ಕಿ ಮೇಲೆ ಅಕ್ಷರ ಬರೆಸುವ ಆಚರಣೆ ಇದೆ. ಇನ್ನು ಫೋಟೋಗಳಿಗೆ ಸಂಬಂಧಿಸಿ ರಿಷಭ್​​ ಅಭಿಮಾನಿಗಳು ಸರ್..ಒಳ್ಳೆಯದಾಗಲಿ..ಜಗನ್ಮಾತೆ ಶಾರದಾಂಬೆ ಅನುಗ್ರಹ ನಿಮ್ಮ ಕುಟುಂಬದ ಮೇಲಿರಲಿ” ಎಂದು ಕಮೆಂಟಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.