ಸ್ತನಗಳ ಗಾತ್ರ ಹೆಚ್ಚಿಸಿಕೊಳ್ಳಿ ಎಂದ ಸಿನಿಮಾ ನಿರ್ಮಾಪಕ; ಅದಕ್ಕಾಗಿ ಈ ಕನ್ನಡ ಚೆಲುವೆ ಮಾಡಿದ್ದೇನು ಗೊ.ತ್ತಾ

ಸಿನೆಮಾ ರಂಗಕ್ಕೆ ಎಂಟ್ರಿ ಕೊಡಲು ಯೋಚಿಸುವುದೇ ಈ ಕಾರಣಕ್ಕೆ. ಹೌದು ಮುಂಬೈ ಬೆಡಗಿ ಸಮೀರಾ ರೆಡ್ಡಿ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದರು. ಮದುವೆ ನಂತರ ಸಿನಿಮಾಗಳಿಗೆ ಗುಡ್‌ಬೈ ಹೇಳಿ ಫ್ಯಾಮಿಲಿ ಜೊತೆ ಲೈಫ್ ಲೀಡ್ ಮಾಡುತ್ತಿದ್ದಾರೆ. 'ಮೆಸ್ಸಿ ಮಾಮ' ಹೆಸರಿನಲ್ಲಿ ತಮ್ಮ ಅತ್ತೆ ಜೊತೆ ಸೇರಿ ಆನ್‌ಲೈನ್ ಸೀರಿಸ್ ಮಾಡುತ್ತಿರುತ್ತಾರೆ. ಸಮೀರಾ ಮತ್ತೊಮ್ಮೆ ತಮಗಾದ ಬಾಡಿ ಶೇಮಿಂಗ್ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಮುಂಬೈ ಬೆಡಗಿ ಸಮೀರಾ ರೆಡ್ಡಿ ಮಾಡೆಲಿಂಗ್ ಫೀಲ್ಡ್‌ನಿಂದ ಚಿತ್ರರಂಗಕ್ಕೆ ಬಂದವರು. ಮೈನೆ ದಿಲ್ ತುಜ್ಕೊ ದಿಯಾ ಎನ್ನುವ ಸಿನಿಮಾದಲ್ಲಿ ಮೊದಲಿಗೆ ನಟಿಸಿದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಬಂದರು. ಸಮೀರಾ ಒಳ್ಳೆ ಪಾತ್ರಗಳಲ್ಲಿ ನಟಿಸಿದ್ದಕ್ಕಿಂತ ಗ್ಲಾಮರ್ ಡಾಲ್ ಆಗಿ ಮಿಂಚಿದ್ದೇ ಹೆಚ್ಚು. ಪ್ಲ್ಯಾನ್, ಮುಸಾಫೀರ್ ಹೀಗೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಬಳಿಕ ಟಾಲಿವುಡ್ ಕಡೆ ಮುಖ ಮಾಡಿದ್ದರು.
ಕನ್ನಡದಲ್ಲಿ ಮಾಲಾಶ್ರೀ ನಟನೆಯ ದುರ್ಗಿ ಚಿತ್ರದ ತೆಲುಗು ವರ್ಷನ್‌ನಲ್ಲಿ ಜ್ಯೂ. ಎನ್‌ಟಿಆರ್ ಹೀರೊ ಆಗಿ ನಟಿಸಿದ್ದರು. ಆ ಚಿತ್ರಕ್ಕೆ ಸಮೀರಾ ರೆಡ್ಡಿ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ಚಿರಂಜೀವಿ ಜೊತೆ ಜೈ ಚಿರಂಜೀವ ಮತ್ತೆ ಎನ್‌ಟಿಆರ್ ಜೊತೆ ಅಶೋಕ್ ಸಿನಿಮಾಗಳಲ್ಲಿ ಬಿಂದಾಸ್ ಬೆಡಗಿ ತೆರೆಹಂಚಿಕೊಂಡಿದ್ದರು. ಅದೇ ಸಮಯದಲ್ಲಿ ತಾರಕ್ ಜೊತೆ ಸಮೀರಾ ಹೆಸರು ತಳುಕು ಹಾಕಿಕೊಂಡಿತ್ತು.
ನಟಿ ಸಮೀರಾ ರೆಡ್ಡಿ ಚಿತ್ರರಂಗದಲ್ಲಿ ತಮಗಾದ ಬಾಡಿ ಶೇಮಿಂಗ್ ವಿಚಾರವನ್ನು ಸಾಕಷ್ಟು ಬಾರಿ ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದಾರೆ. ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ನನ್ನ ಸ್ತನಗಳ ಸೈಜ್ ಚಿಕ್ಕದಾಗಿ ಇರುವುದರ ಬಗ್ಗೆ ವ್ಯಂಗ್ಯವಾಡಿದ್ದರು. ಸರ್ಜರಿ ಮಾಡಿಸಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದರು. ಇಂತಹ ಕಾಮೆಂಟ್‌ಗಳು ನನ್ನ ಮೇಲೆ ಒತ್ತಡಕ್ಕೆ ಕಾರಣವಾಗಿತ್ತು ಎಂದಿದ್ದಾರೆ. ನಂತರ ಸಿನಿಮಾಗಳಲ್ಲಿ ಸ್ತನಗಳ ಗಾತ್ರ ದೊಡ್ಡದಾಗಿ ಕಾಣಿಸಲು ಪ್ಯಾಡ್ಸ್ ಬಳಸುತ್ತಿದ್ದೆ. ಒಂದು ವೇಳೆ ನಾನು ಸರ್ಜರಿ ಮಾಡಿಸಿಕೊಂಡಿದ್ದರೆ ಸಂತೋಷವಾಗಿ ಇರುತ್ತಿರಲಿಲ್ಲ. ಹಾಗಾಗಿ ಸರ್ಜರಿ ಮಾಡಿಸಿಕೊಳ್ಳುವಂತೆ ಯಾರಿಗೂ ಸಲಹೆ ನೀಡುವುದಿಲ್ಲ ಎಂದಿದ್ದಾರೆ.