ಭಾರತೀಯ ಕ್ರಿಕೆಟರ್ ಮಹಮ್ಮದ್ ಶಮಿ ಅವರ ಹೆಂ ಡತಿ ಎಷ್ಟು ಸೂಪರ್ ಗೊತ್ತಾ, ಪತ್ನಿಯ ಆ ಕೆಲಸಕ್ಕೆ ಕಣ್ಣೀರಿಟ್ಟಿದ್ದ ಶ.ಮಿ

 | 
ರ

ಮೊಹಮ್ಮದ್ ಶಮಿ ಸದ್ಯ ಏಕದಿನ ವಿಶ್ವಕಪ್​ನ ಬೌಲಿಂಗ್ ಸೆನ್ಸೇಷನ್. ಆದ್ರೆ, ಇದೇ ಮೊಹಮ್ಮದ್ ಶಮಿ ಸೂಸೈಡ್​​ಗೆ ಮುಂದಾಗಿದ್ರಂತೆ. ಅದು ಒಂದಲ್ಲ, ಎರಡಲ್ಲ, ಬರೋಬ್ಬರಿ 3 ಬಾರಿ. ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಸ್ಪೀಡ್ ಗನ್. ಟೀಮ್ ಇಂಡಿಯಾದ ಕೀ ಪ್ಲೇಯರ್ ಅನ್ನೋದರಲ್ಲಿ ಎರಡು ಮಾತಿಲ್ಲ. 

ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಎದುರಾಳಿಗಳನ್ನ ಧೂಳೀಪಟ ಮಾಡ್ತಿರುವ ಇದೇ ಶಮಿ, ಆತ್ಮಹತ್ಯೆಗೆ ಮುಂದಾಗಿದ್ದರು. 2015ರ ಏಕದಿನ ವಿಶ್ವಕಪ್​ ಬಳಿಕ 18 ತಿಂಗಳು, ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಮೊಹಮ್ಮದ್​​​ ಶಮಿ ನಿಜಕ್ಕೂ ನರಕಯಾತನೆ ಅನುಭವಿಸಿದ್ದರು. ಒಂದೆಡೆ ಟೀಮ್ ಇಂಡಿಯಾದಿಂದ ಹೊರಗುಳಿದ ಬೇಸರದಲ್ಲಿದ್ದ ಶಮಿಗೆ, ಮತ್ತೊಂದೆಡೆ ಪತ್ನಿ ಹಸೀನ್ ಜಹಾನ, ಮೊಹಮ್ಮದ್ ಶಮಿಯ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಳು. 

ಶಮಿ ಇತರ ಮಹಿಳೆಯರೊಂದಿಗೆ ಸಂಪರ್ಕ ಹೊಂದಿ, ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಅಷ್ಟೇ ಅಲ್ಲ, ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಮಾಡಿದ್ದರು. ಆತನ ಮೇಲೆ ಲೈಂಗಿಕ ಹಿಂಸೆ ಮತ್ತು ವ್ಯಭಿಚಾರದ ಕೇಸ್ ದಾಖಲಿಸಿದಳು! ತನ್ನ ಗಂಡನ ಮಾನಸಿಕ ಆರೋಗ್ಯ ಸರಿ ಇಲ್ಲ ಎಂಬ ಆರೋಪ. ಎಲ್ಲದಕ್ಕೂ ನನ್ನ ಹತ್ತಿರ ಸಾಕ್ಷಿ ಇದೆ ಎನ್ನುವ ಧಿಮಾಕು! ಶಮಿ ಬದುಕಿನ ಅತ್ಯಂತ ಕರಾಳ ದಿನಗಳವು. 

ಒಮ್ಮೆ ವಿದೇಶದ ಪ್ರವಾಸದಲ್ಲಿ ಇದ್ದಾಗ 2018ರಲ್ಲಿ FIR ಆಗಿ ಅರೆಸ್ಟ್ ವಾರಂಟ್ ಹೊರಟಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಶಮಿ ಅರೆಸ್ಟ್ ಆಗುವುದು ತಪ್ಪಿತು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಮಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದ್ರೆ, ಈ ವೇಳೆ ಶಮಿಗೆ ಬೆನ್ನಿಗಿ ನಿಂತಿದ್ದು ಪೋಷಕರು ಹಾಗೂ ಮೂವರು ಆತ್ಮೀಯ ಸ್ನೇಹಿತರು. ಮೊಹಮ್ಮದ್ ಶಮಿಗೆ ಧೈರ್ಯ ತುಂಬುವ ಮೂಲಕ ಕೆಟ್ಟ ಯೋಚನೆಗಳಿಂದ ಹೊರ ಬರುವಂತೆ ಮಾಡಿದ್ದರು. ​​​​​​​

ಟೀಮ್ ಇಂಡಿಯಾ ಆಟಗಾರರು ಕೂಡ ಬೆಂಬಲಕ್ಕೆ ನಿಂತಿದ್ದರು ಅನ್ನೋದನ್ನ ಸ್ವತಃ ಮೊಹಮ್ಮದ್ ಶಮಿಯೇ ಹೇಳಿಕೊಂಡಿದ್ದಾರೆ. ಶಮಿ ಜಾಗದಲ್ಲಿ ಬೇರೆ ಯಾರಿದ್ದರೂ ಕ್ರಿಕೆಟಿಗೆ ವಿದಾಯ ಹೇಳಿ ಓಡಿಹೋಗುತ್ತಿದ್ದರು. ಆದರೆ ಮೊಹಮ್ಮದ್ ಶಮಿ ಈ ಸಾಲು ಸಾಲು ಅಗ್ನಿಪರೀಕ್ಷೆಗಳ ನಡುವೆ ಕ್ರಿಕೆಟ್ ಬಿಟ್ಟು ಹೋಗಿಲ್ಲ ಅನ್ನುವುದು ಭಾರತದ ಭಾಗ್ಯ. 

ಇಂತಹ ದೈತ್ಯ ಪ್ರತಿಭೆ ಇದ್ದರೂ ಆತನಿಗೆ ಕ್ರಿಕೆಟ್ ಆಯ್ಕೆ ಮಂಡಳಿ ತೋರಿದ ಅವಕೃಪೆ, ಮಾಡಿದ ಅನ್ಯಾಯ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಗು ನಗುತ್ತ ಭಾರತವನ್ನು ಪ್ರತೀ ಪಂದ್ಯದಲ್ಲಿಯೂ ಗೆಲ್ಲಿಸುವುದು ಇದೆಯಲ್ಲ, ಅದು ಯಾರಿಂದಲೂ ಅಗದ ಕೆಲಸ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.