ಇಶಾನಿ ಮೈಕಲ್ ಜಗಳ, ಥೂ ಇವ್ನು ನನ್ನ ಬಾಯ್ ಫ್ರೆಂಡಾ ಎಂದು ರೊಚ್ಚಿಗೆದ್ದ ಇ.ಶಾನಿ

 | 
Ghjgyu

ಬಿಗ್​ಬಾಸ್ ಮನೆಯಲ್ಲಿ ನಡೆಯುತ್ತಿದ್ದ ಪ್ರೇಮಕತೆಯನ್ನು ಮುರಿದು ಬಿದ್ದಿದೆ. ಮೈಖಲ್ ಹಾಗೂ ಇಶಾನಿ ನಡುವೆ ಜೋರು ಜಗಳ ನಡೆದಿದ್ದು, ಇಶಾನಿಯಂತೂ ಮೈಖಲ್ ಅನ್ನು ಇನ್ನೆಂದಿಗೂ ನಂಬುವುದಿಲ್ಲ ಎಂದಿದ್ದಾರೆ. ಇವರ ಪ್ರೇಮ ಮುರಿದು ಬೀಳಲು ಕಾರಣವಾಗಿದ್ದು ಕಾರ್ತಿಕ್.
ಈ ಸೀಸನ್​ನ ಬಿಗ್​ಬಾಸ್  ಮನೆಯಲ್ಲಿ ಕಾರ್ತಿಕ್-ಸಂಗೀತಾ, ನಮ್ರತಾ-ಸ್ನೇಹಿತ್ ಜೊತೆಗೆ ಮೈಖಲ್-ಇಶಾನಿ ಜೋಡಿ ಪ್ರೇಕ್ಷಕರ ಗಮನ ಸೆಳೆದಿದೆ. 

ಕಾರ್ತಿಕ್-ಸಂಗೀತಾ ಹಾಗೂ ನಮ್ರತಾ-ಸ್ನೇಹಿತ್ ಅವರುಗಳು ಪರಸ್ಪರ ಅತ್ಮೀಯರಾಗಿದ್ದರೂ ಸಹ ಗೆಳೆಯರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಶಾನಿ-ಮೈಖಲ್ ಮಾತ್ರ ತಮ್ಮನ್ನು ತಾವು ಪ್ರೇಮಿಗಳೆಂದು ಬಿಗ್​ಬಾಸ್ ಮನೆಯಲ್ಲಿ ಘೋಷಿಸಿ ಕೊಂಡಿದ್ದಾರೆ. ಆದರೆ ಇದೀಗ ಮೈಖಲ್ ಹಾಗೂ ಇಶಾನಿ ನಡುವಿನ ಪ್ರೇಮ ಸಂಬಂಧ ಮುರಿದು ಬಿದ್ದಿದೆ.

ಹೌದು, ಇಶಾನಿ, ವಿನಯ್ ಅವರ ತಂಡದಲ್ಲಿದ್ದರು. 
ಮೈಖಲ್ ಎದುರಾಳಿ ತಂಡವಾದ ಸಂಗೀತಾ ತಂಡದಲ್ಲಿದ್ದರು. ಟಾಸ್ಕ್​ಗಳೆಲ್ಲ ಮುಗಿದು, ವಿನಯ್ ತಂಡ ಗೆದ್ದಿದೆ. ವಿನಯ್ ಕ್ಯಾಪ್ಟನ್ ಆಗಿದ್ದಾರೆ, ಸಂಗೀತಾ ಕಳಪೆ ಪಟ್ಟ ಹೊತ್ತು ಜೈಲಿಗೆ ತೆರಳಿದ್ದಾರೆ. ವಿನಯ್​ ಅನ್ನು ಮನೆಯ ಸದಸ್ಯರು ಅಭಿನಂದಿಸಿದರೆ, ಸಂಗೀತಾರನ್ನು ಜೈಲಿಗೆ ಕಳಿಸಿದ್ದಾರೆ.
 
ಇದೆಲ್ಲ ಆದ ಬಳಿಕ ವಿನಯ್ ಹಾಗೂ ತನಿಷಾ ಇಂದು ಅಡುಗೆ ಮಾಡುತ್ತಿರುವಾಗ ಎದುರು ಮೈಖಲ್ ಹಾಗೂ ಇಶಾನಿ ಕೂತಿದ್ದರು. ಸಂಗೀತಾ ಬಗ್ಗೆ ನೆಗೆಟಿವ್ ಆಗಿ ಹೇಳಿದ ಇಶಾನಿಗೆ ಸಂಗೀತಾ ನನ್ನ ಗೆಳತಿ ನಾನು ಅವರಿಗೆ ಬೆಂಬಲಿಸುತ್ತೇನೆ ಎಂದರು ಕಾರ್ತಿಕ್. ಬಳಿಕ ಇಶಾನಿ, ನೀನು ಸಂಗೀತಾಳ ಕೈಗೊಂಬೆ ಎಂದರು. ಆ ಮಾತನ್ನು ಸ್ವೀಕರಿಸದ ಕಾರ್ತಿಕ್, ಅದನ್ನು ಅಲ್ಲಗಳೆದರು. 

ಬಳಿಕ ನೀನು ಸಹ ಇಲ್ಲ, ಒಬ್ಬಳೇ ನಿಂತು ನಿನ್ನ ಕೈಯಲ್ಲಿ ಆಡಿ ಗೆಲ್ಲೋಕಾಗಲ್ಲ ಅಂತ ಗೋಡೆಯ ಹಿಂದೆ ಅವಿತುಕೊಂಡಿದ್ದೀಯ. ಈಗಲೂ ಹೇಳ್ತೀನಿ ಒಬ್ಬಳೇ ನಿಂತು ಆಡಿ ಗೆಲ್ಲುವ ತಾಕತ್ತು ನಿನಗೆ ಇಲ್ಲ ಎಂದರು ಕಾರ್ತಿಕ್. ಇದಕ್ಕೆ ಸಿಟ್ಟಾದ ಇಶಾನಿ, ಮಹಿಳೆಯರಿಗೆ ಆಡಿ ಗೆಲ್ಲುವ ತಾಕತ್ತು ಇಲ್ಲ ಎಂದು ಹೇಳಿದೆ ಎಂದು ಜಗಳ ಮಾಡಿದಳು, ಬಳಿಕ ಆಕೆಯನ್ನು ಸಮಾಧಾನ ಮಾಡಲು ಮೈಖಲ್ ಸಹ ಹೋದರು. 

ಆದರೆ ಮೈಖಲ್, ಕಾರ್ತಿಕ್ ಮಹಿಳೆಯರಿಗೆ ಗೆಲ್ಲುವ ತಾಕತ್ತು ಇಲ್ಲ ಎಂದು ಹೇಳಲಿಲ್ಲ, ಬದಲಿಗೆ ನಿನಗೆ ವೈಯಕ್ತಿಕವಾಗಿ ಗೆಲ್ಲುವ ತಾಕತ್ತು ಇಲ್ಲ ಎಂದು ಹೇಳಿದರು ಎಂದು ಇರುವ ಸತ್ಯವನ್ನೇ ಹೇಳಿದರು. ಆದರೆ ಅದು ಇಶಾನಿಗೆ ಇಷ್ಟವಾಗಿಲ್ಲ, ಮೈಖಲ್ ಮಾತಿನಿಂದ ಕೆರಳಿದ ಇಶಾನಿ, ನೀನು ಒಬ್ಬ ಬಾಯ್​ಫ್ರೆಂಡಾ ಥೂ ಎಂದು ಹೊರಟು ಹೋದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech 
ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.