ಆರೋಗ್ಯ ಸರಿ ಇಲ್ಲದಿದ್ದರು ಕೂಡ ದರ್ಶನ್ ಮಾತಿಗೆ ರೊಚ್ಚಿಗೆದ್ದ ಜಗ್ಗೇಶ್

ಮತ್ತೊಮ್ಮೆ ಮಾತಿನಲ್ಲಿ ಕಿಡಿ ಹೊತ್ತಿಸಿದ ನಟ ಜಗ್ಗೇಶ್.ರಾಜ್ಯದಲ್ಲಿ ಕಾವೇರಿ ಹೋರಾಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ತಮಿಳು ನಾಡಿಗೆ ನೀರು ಹರಿಸುವ ಕ್ರಮದ ವಿರುದ್ಧ ಅನ್ನದಾತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ತಿಂಗಳಿಂದ ರೈತರು ಹೋರಾಟ ಮಾಡ್ತಿದ್ರು, ಕನ್ನಡ ಚಿತ್ರರಂಗ ಸ್ಟಾರ್ ನಟರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಯಾಕೆ ಎಂದು ಹೋರಾಟಗಾರರು ಈ ಹಿಂದೆ ಆಕ್ರೋಶ ಹೊರಹಾಕಿದ್ರು.
ಬಳಿಕ ನಟ ದರ್ಶನ್, ಸುದೀಪ್ , ಶಿವಣ್ಣ, ಕಾವೇರಿ ನಮ್ಮ ಹಕ್ಕು, ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಸಾಥ್ ನೀಡಿದ್ರು. ಕರ್ನಾಟಕದ ಬಂದ್ ವೇಳೆ ಚಿತ್ರತಂಡ ಒಂದಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಕೆಲ ದಿನಗಳ ಹಿಂದೆ ರೈತ ಹೋರಾಟದಲ್ಲಿ ಭಾಗಿಯಾಗಿದ್ದ ದರ್ಶನ್ ಪರಭಾಷೆ ಸಿನಿಮಾ ವಿತರಕರಿಗೆ ಚಳಿ ಬಿಡಿಸಿದ್ರು. ಇದೀಗ ಜಗ್ಗೇಶ್ ಕೂಡ ಪರಭಾಷೆ ಸಿನಿಮಾಗಳ ಬಗ್ಗೆ ಮಾತಾಡಿದ್ದಾರೆ.
ಕಾವೇರಿ ಹೋರಾಟದಲ್ಲಿ ಭಾಗವಹಿಸದಿದ್ದಕ್ಕೆ ಕ್ಷಮೆ ಇರಲಿ ಎಂದ ನಟ ಜಗ್ಗೇಶ್, ಕಾವೇರಿ ವಿಚಾರದಲ್ಲಿ ಕಲಾವಿದರನ್ನು ತರಬೇಡಿ ಎಂದು ಹೇಳಿದ್ರು. ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ಭಾಷಣಗಳಿಂದ ಪ್ರಯೋಜನವಿಲ್ಲ. ನೀರು ಬಿಡೋದು ತಪ್ಪಲ್ಲ ಕೇಳಿದ ಕ್ಷಣ ನೀರು ಬಿಟ್ಟರು. ಈಗ ಇಲ್ಲ ಅಂದ್ರೆ ಹೇಗೆ? ಹೋರಾಟಕ್ಕೆ ಬಂದಿಲ್ಲ ಅಂತ ಸಿನಿಮಾ ನಟರಿಗೆ ಬೈಯ್ಯೋದು ಸರಿಯಲ್ಲ.
ಇದೆಲ್ಲಾ ಆ್ಯಕ್ಟಿಂಗ್, ಮೊದಲು ಅದನ್ನ ಬಿಟ್ಟುಬಿಡಿ ಎಂದು ಹೋರಾಟಗಾರರಿಗೆ ನಟ ಜಗ್ಗೇಶ್ ಕಿವಿ ಮಾತು ಹೇಳಿದ್ದಾರೆ. ಈ ವಿಷಯದಲ್ಲಿ ಕಲಾವಿದರನ್ನ ದಯವಿಟ್ಟು ತರಬೇಡಿ. ಇದು ಕಾನೂನಿನ ಕ್ರಿಯೆ. ಕಲಾವಿದರಿಂದ ಏನು ಮಾಡಲು ಆಗೋದಿಲ್ಲ. ನೀವೆಲ್ಲಾ ಕಾವೇರಿ ನೀರು ಕುಡೀತಿಲ್ಲವಾ? ನೀವೆಲ್ಲಾ ಯಾಕೆ ಬರಲ್ಲ? ಕಲಾವಿದರನ್ನ ದೂಷಿಸುವುದು ಯಾಕೆ? ಪರಭಾಷಿಗರು ಕೋಟಿಗಟ್ಟಲೆ ಬ್ಯುಸಿನೆಸ್ ಮಾಡ್ತಿದ್ದಾರೆ ಎನ್ನುತ್ತಾ ಜಗ್ಗೇಶ್ ಕೂಡ ತಮಿಳು ಸಿನಿಮಾ ಬಗ್ಗೆ ಕಿಡಿಕಾರಿದ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.