ಅಪ್ಪು ಪುಣ್ಯ ತಿಥಿಗೆ ಬರದೇ ಇದ್ದರೂ ಅಮೇರಿಕಾದಲ್ಲಿ ಅಪ್ಪು ಮಗಳು ಮಾಡಿದ ಕೆಲಸಕ್ಕೆ ಮೆಚ್ಚುಗೆ ಪಟ್ಟ ಕನ್ನಡಿಗರು

 | 
Bhh

ಒಬ್ಬ ಸಿನಿಮಾ ನಟ ಅಥವಾ ಕಲಾವಿದ ಮರಣಾನಂತರ ಜನರ ಹೃದಯಗಳಲ್ಲಿ ನೆನಪಾಗಿ ಚಿರಸ್ಥಾಯಿಯಾಗಬಹುದೇ ಹೊರತು ಹೊಸ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುವ ಸಂಭವಗಳು ತೀರಾ ಕಡಿಮೆ. ಆದರೆ ಪುನೀತ್‌ ರಾಜ್‌ಕುಮಾರ್‌ ವಿಷಯದಲ್ಲಿ ಇದು ಅಪವಾದವಾಗಿ ಪರಿಣಮಿಸಿದೆ. 

ಅವರ ಆಕಸ್ಮಿಕ ನಿಧನದ ನಂತರ ಅವರಿಗೆ ಅಭಿಮಾನಿಗಳು ಹೆಚ್ಚೇ ಆಗಿದ್ದಾರೆ! ಪುನೀತ್‌ ತೆರೆಯ ಮೇಲಿನ ಒಳ್ಳೆಯ ನಟರಷ್ಟೇ ಅಲ್ಲ, ತೆರೆಯ ಹಿಂದಿನ ಹೃದಯವಂತ ಕೂಡ ಎಂಬುದು ಅರಿವಾಗ ತೊಡಗಿದ ಹಾಗೆ ದೇಶಾದ್ಯಂತ ಅಸಂಖ್ಯಾತ ಜನರು ಭಾಷೆ ಅರ್ಥವಾಗದಿದ್ದರೂ ಅವರ ಸಿನಿಮಾಗಳನ್ನು ಹುಡುಕಿ ಹುಡುಕಿ ನೋಡುತ್ತಾ ಕಂಬನಿ ಮಿಡಿಯುತ್ತಿದ್ದಾರೆ. 

ಆ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಅಪ್ಪು ಅಗಲಿಕೆಯ ನೋವು ಜನರನ್ನು ಇನ್ನೂ ಬಾಧಿಸುತ್ತಲೇ ಇದೆ. ಅಕ್ಟೋಬರ್ 29ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ  2 ವರ್ಷವಾಗಿದೆ. ಪುನೀತ್​ ಅಗಲಿಕೆಯ ನೋವು ಇನ್ನು ಕುಟುಂಬಸ್ಥರನ್ನು ಕಾಡುತ್ತಿದೆ. ಪುನೀತ್ ರಾಜ್​ಕುಮಾರ್​ ಕುಟುಂಸ್ಥರು ಸಮಾಧಿ ಸ್ಥಳಕ್ಕೆ ಬಂದಿದ್ದಾರೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಹಾಗೂ ಮಕ್ಕಳು ಪೂಜೆ ಸಲ್ಲಿಸಿದ್ದಾರೆ ರಾಘಣ್ಣ, ಶಿವಣ್ಣ ಸೇರಿದಂತೆ ಕುಟಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಇನ್ನು ಕಿರಿಯ ಮಗಳು ವಂದಿತಾ ಅಮ್ಮನೊಂದಿಗೆ ಆಗಮಿಸಿದರೆ ಹಿರಿಯ ಮಗಳು ಧೃತಿ ವಿದೇಶದಿಂದ ಬಂದಿರಲಿಲ್ಲ. ಇನ್ನು ಈ ಕುರಿತಾಗಿ ಕೆಲವರು ಕಿಡಿಕಾರಿದ್ದಾರೆ. ಅಪ್ಪನ ಪುಣ್ಯ ತಿಥಿಗೆ ಲಕ್ಷಾಂತರ ಅಭಿಮಾನಿಗಳು ಆಗಮಿಸುತ್ತಾರೆ ಮಗಳಾಗಿ ಬರಬೇಕಿತ್ತು ಎಂದು ನುಡಿದಿದ್ದಾರೆ. 

ಇನ್ನು ಈ ಕುರಿತಾಗಿ ಹೇಳಿಕೆ ನೀಡಿರುವ ಅಶ್ವಿನಿ ಅವರು ಧೃತಿ ಪರೀಕ್ಷೆ ನಡೆಯುತ್ತಿದ್ದ ಕಾರಣದಿಂದ ಬರಲಿಲ್ಲ ಆದರೆ ಅವಳು ಅಲ್ಲಿಯೇ ಪುನಿತ್ ರಾಜ್ ಕುಮಾರ್ ಅವರ ಅಭಿಮಾನಿಗಳೊಂದಿಗೆ ಆಚರಿಸಿದ್ದಾಳೆ. ಅಲ್ಲದೆ ಧೃತಿ ತನ್ನ ತಂದೆಗೆ ಅಭಿಮಾನಿಗಳನ್ನು ದೇವರಂತೆ ಕಾಣುವ ಅಭ್ಯಾಸವಿತ್ತು ಹಾಗಾಗಿ ಅಭಿಮಾನಿಗಳ ಜೊತೆ ಅಪ್ಪನ ದಿನ ಆಚರಿಸಿರುವೆ ಎಂದಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.