ಖ್ಯಾತ ಮಾಜಿ ಶಾಸಕನ ಮಾತು ಕೇಳಿ ಬೆಚ್ಚಿಬಿದ್ದ ಕರುನಾಡು, ಹಾಗಾದರೆ ಸೌಜನ್ಯ ಕೊ.ಲೆ ಮಾಡಿದ್ದು ಯಾರು

 | 
Gg

ಧರ್ಮಸ್ಥಳದಲ್ಲಿ ನಡೆದ ಕು.ಸೌಜನ್ಯ ಅತ್ಯಾಚಾರ ಹತ್ಯೆ ಪ್ರಕರಣದ ಕುರಿತಂತೆ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅವರು ಬೆಳ್ತಂಗಡಿಯ ಸಿವಿಸಿ ಹಾಲ್‌ನಲ್ಲಿ ಸಂಗಾತಿ ಮಹಾಸಂಗಮದ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ‌ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದರು.
ಸೌಜನ್ಯಾಳಿಗೆ ನ್ಯಾಯ ಸಿಗದೆ ನಾನು ಹಿಂತಿರುಗುವುದಿಲ್ಲ. 

ಈಗ ಎಲ್ಲೆಡೆ ಬ್ಯಾನರ್ ಹಾಕಿ ಸೌಜನ್ಯ ಅವರ ನ್ಯಾಯಕ್ಕೆ ಒತ್ತಾಯಿಸಲಾಗುತ್ತಿದೆ. ಈ ಹಿಂದೆ ಅವರೆಲ್ಲಾ ಎಲ್ಲಿ ಹೋಗಿದ್ದರು. ಕಡೆಗೂ ಅವರ ಅಡಿಗೆ ನೀರು ಬಂದಾಗ ಎಚ್ಚರಗೊಂಡಿದ್ದಾರೆ. ಸೌಜನ್ಯ ಅತ್ಯಾಚಾರ ಸೇರಿದಂತೆ ಈ ಹಿಂದೆ ನಡೆದ ಎಲ್ಲಾ ಪ್ರಕರಣಗಳ ತನಿಖೆಯಾಗಬೇಕು ಇಂದು ಬೆಳ್ತಂಗಡಿಯ ಮಾಜಿ ಶಾಸಕ ಶ್ರೀ ವಸಂತ ಬಂಗೇರ ಅವರು ಆಗ್ರಹಿಸಿದ್ದಾರೆ. ಮುಖ್ಯವಾಗಿ ಮಹಿಳೆಯರು ಕೂಡಿ ಬೇಕು ಇದನ್ನು ಪ್ರತಿಪಟಿಸಬೇಕು ಎಂದಿದ್ದಾರೆ. 

ಬಂಗೇರಾ ಅವರು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಶಾಸಕನಾಗಿದ್ದೆ. ಆ ಸಂದರ್ಭದಲ್ಲಿ ಸೌಜನ್ಯ ಪ್ರಕರಣವನ್ನು ಸಿಓಡಿ ತನಿಖೆಗೆ ನೀಡಬೇಕೆಂದು ಆಗ್ರಹಿಸಿದ್ದೆ. ಆದರೂ ಮುಖ್ಯಮಂತ್ರಿಯವರು ಬೇರೆ ವಿಚಾರದ ಕುರಿತು ಹೇಳಿದ್ದರು. ನಾನು ಸ್ಪೀಕರ್ ಅವರ ಅನುಮತಿ ಕೇಳಿ ಸಿದ್ದರಾಮಯ್ಯ ಅವರೊಂದಿಗೆ ಸುಧೀರ್ಘ ಹೊತ್ತು ಚರ್ಚೆ ಮಾಡಿದ್ದೆ. ಸಿಬಿಐಗೆ ಈ ಪ್ರಕರಣ ನೀಡದಿದ್ದರೆ ನಾನು ವಾಪಾಸ್ ಬೆಳ್ತಂಗಡಿಗೆ ಬರುವುದಿಲ್ಲ ಎಂದಿದ್ದೆ. 

ಬಳಿಕ ಮುಖ್ಯಮಂತ್ರಿ ಅವರು ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿದ್ದರು. ಸಿಬಿಐ ತನಿಖೆಯಲ್ಲಿ ನಮಗೆ ನ್ಯಾಯ ಸಿಗಬಹುದೆಂಬ ನಿರೀಕ್ಷೆ ಇತ್ತು. ಅರ್ಧ ತನಿಖೆಯಾದಾಗ ಇದರಲ್ಲಿ ಮೋಸವಿದೆ ಎಂದು ಕಂಡು ಬಂತು. ಅದನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ಸಮಯ ಬಂದಾಗ ಆ ವಿಚಾರವನ್ನು ಈ ವಸಂತ ಬಂಗೇರ ಹೇಳಿಯೇ ಹೇಳುತ್ತಾನೆ ಎಂದರು.
ಸೌಜನ್ಯ ಪ್ರಕರಣದ ಸರ್ವ ವಿಚಾರವನ್ನೂ ನಾನು ಹೇಳುತ್ತೇನೆ. ಯಾರಾದರೂ ಕೊಂದರೆ ಹೋದೆ. ಆದರೆ ನನ್ನನ್ನು ಯಾರೂ ಕೊಲ್ಲಲ್ಲ. ನಾನು ದೈವ ಭಕ್ತ. ನನಗೆ ದೇವರ ರಕ್ಷೆ ಇದೆ. ನನ್ನ ಅಂತ್ಯವಾಗುವ ಮುನ್ನವೇ ಈ ಪ್ರಕರಣದ ಸತ್ಯ ಬಹಿರಂಗವಾಗುವ ನಿರೀಕ್ಷೆ ಇದೆ. 

ಯಾರನ್ನು ತನಿಖೆ ಮಾಡಬೇಕೆಂದು ನಾನು ಹೇಳುತ್ತೇನೆ‌. ಖಾಕಿಯನ್ನು ಕೈಕಾಲು ಕಟ್ಟಿ ತನಿಖೆ ಮಾಡಿಸಲೂ ನಮಗೆ ಗೊತ್ತು ಎಂದಿದ್ದಾರೆ ಈ ನೇರ ಮಾತಿನ ನಾಯಕ.
ಪೊಲೀಸರನ್ನು, ತನಿಖಾ ಸಂಸ್ಥೆಯನ್ನು ಕಟ್ಟಿಹಾಕಿದವರು ಯಾರು ಎಂಬುದು ಗೊತ್ತಿದೆ. ಸೌಜನ್ಯ ಎಂಬ ಬಡ ಕುಟುಂಬದ ಹೆಣ್ಮಗಳು, ಶ್ರೀಮಂತರ ಮನೆಯ ಹೆಣ್ಮಗಳ ಅತ್ಯಾಚಾರ, ಕೊಲೆಯಾದರೆ ಮಾತ್ರ ಸಿಬಿಐ ತನಿಖೆ ಅಲ್ಲ ಎಂದರು‌. ನಾವು ಎಲ್ಲರಿಗೂ ನ್ಯಾಯ ಕೊಡಿಸಬೇಕು. ನನ್ನ ಜೀವಮಾನದ ಕಾಲದಲ್ಲಿ ನಡೆದ ಎಲ್ಲಾ ಹತ್ಯೆಗಳಿಗೆ ನ್ಯಾಯ ಕೊಡಿಸುವ ನಂಬಿಕೆ ಇದೆ ಎಂದರು. ಇನ್ನು ಈ ರಹಸ್ಯದ ಕುರಿತಾಗಿ ಹೇಳಿದ್ರೆ ನನ್ನನ್ನೇ ಕೊಲೆ ಮಾಡಲು ಕೂಡ ಇವರು ಹೇಸುವುದಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.