ಮದುವೆ ಬೇಡ ಅದು ಓಕೆ, ಕನ್ನಡದ ಟಾಪ್ ನಟಿಯ ಹೇಳಿಕೆ ನೋಡಿ ಬೆಚ್ಚಿಬಿದ್ದ ಕರುನಾಡು

 | 
ರಿರರಿ

ಈ ನಟಿಯ ಮದುವೆಯ ಬಗೆಗಿನ ಹೇಳಿಕೆ ಎಲ್ಲೆಡೆ ಸಕತ್ ವೈರಲ್ ಆಗ್ತಿದೆ. ಹೌದು ಮಲಯಾಳಂ ಬ್ಯೂಟಿ ಹನಿ ರೋಸ್ ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ. 

ಇತ್ತೀಚೆಗಷ್ಟೇ ಬಿಡುಗಡೆಯಾಗಿ ಅದ್ಭುತ ಯಶಸ್ಸು ಸಾಧಿಸಿದ ಟಾಲಿವುಡ್​ ಸೂಪರ್​ ಸ್ಟಾರ್​ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಹನಿ ರೋಸ್​ ನಟಿಸಿದರು. ಈ ಚಿತ್ರ 100 ಕೋಟಿ ರೂ. ಕ್ಲಬ್​ ಸೇರಿದೆ. ತಮ್ಮ ಬೋಲ್ಡ್​ ಪಾತ್ರದ ಮೂಲಕ ಸಿನಿರಸಿಕರ ಮನ ಗೆದ್ದಿರುವ ಹನಿ ರೋಸ್​, ಈ ಸಿನಿಮಾ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಮಲಯಾಳಂ ನಟಿ ಹನಿ ರೋಸ್ ಅವರು 2005 ರಲ್ಲಿ 14 ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 

ಸೌಂಡ್ ಆಫ್ ಬೂಟ್, ಸಿಂಗಂ ಪುಲಿ, ಉಪ್ಲುಕಂದಮ್ ಬ್ರದರ್ಸ್ ಬ್ಯಾಕ್ ಇನ್ ಆಕ್ಷನ್, ಅಜಂತಾ , ಹೋಟೆಲ್ ಕ್ಯಾಲಿಫೋರ್ನಿಯಾ, ರಿಂಗ್ ಮಾಸ್ಟರ್, ಕುಂಬಾಶರಂ , ಚಾಲಕಿಕಾರನ್ ಸಂಗಾತಿ, ಇಟ್ಟಿಮನಿ: ಮೇಡ್ ಇನ್ ಚೀನಾ, ಬಿಗ್ ಬ್ರದರ್  ಹಾಗೂ ತೆಲುಗಿನ ವೀರಸಿಂಹ ರೆಡ್ಡಿ  ಸಿನಿಮಾಗಳಲ್ಲಿ ನಟಿಸಿದ್ದಾರೆ.‌ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಜೊತೆ ವೀರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸಿದಷ್ಟು ಖ್ಯಾತಿ ಬೇರೆ ಯಾವ ಚಿತ್ರದಲ್ಲೂ ಸಿಗಲಿಲ್ಲ. ಇದೀಗ ಎಲ್ಲರ ಫೇವರಿಟ್​ ಆಗಿರುವ ಹನಿ ರೋಸ್​, ಇದೀಗ ತಮ್ಮ ಮದುವೆ ಮತ್ತು ಕೌಟುಂಬಿಕ ಜೀವನದ ಬಗ್ಗೆ ಅಚ್ಚರಿಯೆ ಹೇಳಿಕೆ ನೀಡಿದ್ದಾರೆ.

ಹನಿ ರೋಸ್​ ಅವರಿಗೆ ಮದುವೆಯಾಗಲು ಇಷ್ಟವಿಲ್ಲವಂತೆ ಆದರೆ, ತನ್ನ ಜೀವನದಲ್ಲಿ ಸಂಗಾತಿ ಒಬ್ಬರು ಬೇಕು ಎಂದು ಹೇಳಿದ್ದಾರೆ. ಬೇರೆಯವರ ಮದುವೆಗೆ ಹೋಗುವುದು ಕೂಡ ಹನಿ ರೋಸ್​ಗೆ ಇಷ್ಟವಿಲ್ಲವಂತೆ. ಮದುವೆಯಾಗುವುದೇ ಅವರಿಗೆ ಸಮಸ್ಯೆಯಂತೆ. ಬೇರೆಯವರ ಮದುವೆಗೆ ಹೋದರೆ ಎಲ್ಲರ ಕಣ್ಣು ನನ್ನ ಮೇಲೆ ಬೀಳುತ್ತದೆ ಹಾಗಾಗಿ ಯಾರ ಮದುವೆಗೂ ನಾನು ಹೋಗುವುದಿಲ್ಲ ಎಂದಿದ್ದಾರೆ.
ಸಂತೋಷದ ಜೀವನಕ್ಕಾಗಿ ಯಾರೂ ಮದುವೆಯಾಗುವುದಿಲ್ಲ. 

ತಮ್ಮ ಬಳಿ ಹಣವಿದೆ ಎಂದು ತೋರಿಸಿಕೊಳ್ಳಲು ಮದುವೆಯಾಗುವುದಾಗಿ ಹಲವರು ಹೇಳುತ್ತಾರೆ. ನನಗೆ ಮದುವೆಯಾಗಲು ಇಷ್ಟವಿಲ್ಲ. ಬಾಲ್ಯದಿಂದಲೂ ನನಗೆ ಮದುವೆ ಬಗ್ಗೆ ಆಸೆ ಇರಲಿಲ್ಲ ಎಂದು ಹನಿ ರೋಸ್​ ನುಡಿದು ಹುಡುಗರ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.