ಕೀತಿ೯ ಸುರೇಶ್ ಎಂಗೇಜ್ ಮೆಂಟ್ ಫೋಟೋ ವೈರಲ್, ಟಾಪ್ ಹೀರೋ ಕೈಹಿಡಿದ ಸೌತ್ ಬ್ಯೂಟಿ

 | 
ಬಹ೭

ಮಹಾನಟಿ ಎಂದೇ ಕರೆಸಿಕೊಂಡ ಕೀರ್ತಿ ಸುರೇಶ್‌ ದಕ್ಷಿಣ ಸಿನಿರಂಗದ ಬಹುಬೇಡಿಕೆಯ ನಟಿ. ಕೀರ್ತಿ ಸುರೇಶ್‌ ಮದುವೆ ಕುರಿತು ಆಗಾಗ ಹಲವು ವದಂತಿಗಳು ಹರಡುತ್ತಿರುತ್ತವೆ. ಇದೀಗ ಕೀರ್ತಿ ಸುರೇಶ್‌ ಎಂಗೇಜ್‌ಮೆಂಟ್‌ ಫೋಟೋಗಳು ವೈರಲ್‌ ಆಗಿವೆ.

ಕೀರ್ತಿ ಸುರೇಶ್‌ ಅವರು ಗುಟ್ಟಾಗಿ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರೆ ಎಂದು ವದಂತಿ ಹರಡಲಾಗುತ್ತಿದೆ. ಅಕ್ಕಿನೇನಿ ಕುಟುಂಬದ ಸೊಸೆ ಆಗಲಿದ್ದಾರೆ ಎನ್ನಲಾಗ್ತಿದೆ.ಅಕ್ಕಿನೇನಿ ಸುಶಾಂತ್‌ ಜೊತೆ ಕೀರ್ತಿ ಸುರೇಶ್‌ ಎಂಗೇಜ್ಮೆಂಟ್‌ ನಡೆದ ಫೋಟೋಗಳು ವೈರಲ್‌ ಆಗಿವೆ. ಇದನ್ನು ನೋಡಿದ ಅನೇಕರು ಅಕ್ಕಿನೇನಿ ನಾಗಾರ್ಜುನ ಕುಟುಂಬದ ಸೊಸೆಯಾಗಲಿದ್ದಾರೆ ಎಂದು ಭಾವಿಸುತ್ತಿದ್ದಾರೆ.

ಈಗಾಗಲೇ ವೈರಲ್ ಆದ ಕೀರ್ತಿ ಸುರೇಶ್‌ ಎಂಗೇಜ್‌ಮೆಂಟ್‌ ಫೋಟೋದಲ್ಲಿ ಮೆಗಾಸ್ಟಾರ್‌ ಚಿರಂಜೀವಿ, ಸುಹಾಸಿನಿ ಕೂಡ ಇದ್ದಾರೆ. ಕೀರ್ತಿ ಸುರೇಶ್‌ ಸುಶಾಂತ್‌ ಅವರ ಕೈಗೆ ಉಂಗುರು ತೊಡಿಸುತ್ತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಮಾತನ್ನು ಹೇಳದೆ ನೀವು ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.


ಆದರೆ ಅಸಲಿ ಕಥೆಯೇ ಬೇರೆ ಆಗಿದೆ. ಈ ಫೋಟೋಗಳು ಚಿರಂಜೀವಿ ನಟನೆಯ ಭೋಳಾ ಶಂಕರ್ ಸಿನಿಮಾದ್ದಾಗಿದೆ. ಕೀರ್ತಿ ಸುರೇಶ್‌ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ದೃಶ್ಯದ ಚಿತ್ರೀಕರಣದ ಫೋಟೋ ಇದಾಗಿದೆ. ಸಿನೆಮಾದ ಶೂಟಿಂಗ್ ವೇಳೆ ನಡೆದ ದೃಶ್ಯ ಎಲ್ಲರ ಮನಸನ್ನು ಒಂದು ಕ್ಷಣ ಗಾಬರಿ ಮೂಡಿಸಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.