ಕಾಟೇರ ಅಬ್ಬರಕ್ಕೆ ಕೆ.ಜಿ.ಎಫ್ ದಾಖಲೆ ಪು.ಡಿಪುಡಿ, ಪಬ್ಲಿಕ್ ಟಿವಿ ರಂಗಣ್ಣ ಬಾರಿ ಮೆಚ್ಚುಗೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಸದ್ದು ಕನ್ನಡ ಚಿತ್ರರಂಗದಲ್ಲಿ ಜೋರಾಗಿದೆ. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಬಿಡುಗಡೆಯಾದ ಟ್ರೈಲರ್ ಧೂಳೆಬ್ಬಿಸಿದೆ. ದರ್ಶನ್ ಆರ್ಭಟ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್ ಹವಾ ಮುಂದುವರೆದಿದೆ.
ಇನ್ನು ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ದರ್ಶನ್ ಬಹಳ ದಿನಗಳ ನಂತರ ಒಂದು ವಿಭಿನ್ನ ಕಥೆಯ ಚಿತ್ರದಲ್ಲಿ ನಟಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಕಟ್ಟಿಕೊಟ್ಟಿರುವುದಾಗಿ ಚಿತ್ರತಂಡ ಹೇಳುತ್ತಾ ಬರ್ತಿದೆ. 70ರ ದಶಕದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ದರ್ಶನ್ ಅಬ್ಬರ, ಪಂಚ್ ಡೈಲಾಗ್ಸ್, ಜಬರ್ದಸ್ತ್ ಬಿಜಿಎಂ, ಅದ್ಧೂರಿ ವಿಷ್ಯುವಲ್ಸ್ ಇರುವ ಟ್ರೈಲರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ.
ಪದೇ ಪದೆ ಮುಗಿಬಿದ್ದು ಅಭಿಮಾನಿಗಳು ಟ್ರೈಲರ್ ನೋಡಿ ಎಂಜಾಯ್ ಮಾಡ್ತಿದ್ದಾರೆ. ಎಕೆಂದರೆ ಕಾಟೇರ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಹಳೇ ದರ್ಶನ್ ಇಲ್ಲಿ ಹುಡುಕಿದರೂ ಕಾಣಸಿಗುವುದಿಲ್ಲ. ಬದಲಾಗಿ, ಹೊಸ ದರ್ಶನ್ ಇಲ್ಲಿ ಅಬ್ಬರಿಸಿದ್ದಾರೆ. ಕೇವಲ ಒಂದೇ ಪಾತ್ರವೇ ಇಡೀ ಟ್ರೇಲರ್ ಆಕ್ರಮಿಸಿಲ್ಲ. ಚಿತ್ರದ ಎಲ್ಲ ಪ್ರಮುಖ ಪಾತ್ರಗಳ ಝಲಕ್‌ಅನ್ನು ಟ್ರೇಲರ್‌ನಲ್ಲಿ ಭರ್ತಿಯಾಗಿ ತುಂಬಿಸಿದ್ದಾರೆ ನಿರ್ದೇಶಕರು.
ಭೀಮನಹಳ್ಳಿಯಲ್ಲಿ ಕುಲುಮೆನೇ ದೇವರು ಅಂದುಕೊಂಡಿರುವ ಕಥಾನಾಯಕನಿಗೆ, ಅದೇ ದೇವರು ಒಂದು ವರ ಕೊಟ್ಟಿರುತ್ತಾನೆ. ಸಾವಿರ ಮಚ್ಚು ನೂರು ಕಡೆ ತಯಾರಾದ್ರೂ, ಅದರಲ್ಲಿ ಆತ ಮಾಡಿದ ಮಚ್ಚು ಯಾವುದು ಅಂತ ಅಷ್ಟೇ ಸಲೀಸಾಗಿ ಗುರ್ತು ಹಿಡಿದು ಬಿಡ್ತಾನೆ ಆತ. ಆ ಮಚ್ಚಿನ ಕಥೆಯೇ ಅಚ್ಚರಿಯ ರೂಪದಲ್ಲಿ ಟ್ರೇಲರ್‌ನಲ್ಲಿ ಕಾಣಿಸಿದೆ. ಎರಡು ಹಳ್ಳಿಗಳ ದೃಶ್ಯವೈಭೋಗದ ಜತೆಗೆ, ಅಪ್ಪಟ ಕರುನಾಡ ಸೊಗಡಿನ ಕಥೆಯನ್ನೇ ಹಿಡಿದು ತಂದಿದ್ದಾರೆ ತರುಣ್ ಸುಧೀರ್. ಇನ್ನು ಈ ಟ್ರೇಲರ್ ಮೆಚ್ಚಿದ ರಂಗಣ್ಣ ಅವರು ಹಾಡಿ ಹೊಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.