ಕುಚಿಕು ಗೆಳೆಯ ದರ್ಶನ್ ಅವರನ್ನು ಅಪ್ಪಿಕೊಂಡ ಕಿಚ್ಚ ಸುದೀಪ್, ಅಭಿಮಾನಿಗಳಿಗೆ ಸಂಭ್ರಮ

ಅಂತೂ ಇಂತೂ ಗೆಳೆಯನ ನೋಡಿ ಮುಗುಳ್ನಗೆ ಬೀರಿದ ದಚ್ಚು ಹೌದು ಸತತ 6 ವರ್ಷಗಳು ಆಗಿತ್ತು.. ಒಬ್ಬರ ಮುಖವನ್ನು ಒಬ್ಬರು ನೋಡಿ.. ಕುಚುಕು ಗೆಳೆಯರಂತಿದ್ದವರು ಮುನಿಸಿಕೊಂಡು ಮಾತುಬಿಟ್ಟಿದ್ದನ್ನು ಕಂಡು, ಇಡೀ ಸ್ಯಾಂಡಲ್ವುಡ್ ಪ್ರೇಮಿಗಳು ಆಘಾತಕೊಳ್ಳಗಾಗಿದ್ರು. ದೂರಾದ ದೋಸ್ತಿಗಳು ಆದಷ್ಟು ಬೇಗ ಒಂದಾಗಲಿ ಎಂದು ಫ್ಯಾನ್ಸ್ಗಳು ದಿನ ಬೆಳಗಾದ್ರೆ ಸಾಕು ದೇವರಲ್ಲಿ ಬೇಡಿಕೊಳ್ತಿದ್ರು.
ಇದೀಗ ಆ ಶುಭಘಳಿಗೆ ಹತ್ತಿರವಾದಂತೆ ಕಾಣ್ತಿದೆ.
ಸ್ಯಾಂಡಲ್ವುಡ್ನ ದಿಗ್ಗಜರು ಎಂದೇ ಖ್ಯಾತರಾಗಿದ್ದ ಅಂಬರೀಶ್, ವಿಷ್ಣುವರ್ದನ್ ಅವರ ಗೆಳೆತನ ದಂತೆಯೇ ದರ್ಶನ್ ಮತ್ತು ಸುದೀಪ್ ಕೂಡ ಕುಚುಕು ದೋಸ್ತಿಗಳಾಗಿದ್ರು. ಹಲವು ಬಾರಿ ಇಬ್ಬರು ಕೂಡ ಜೊತೆ ಜೊತೆಗೇ ಟ್ರಿಪ್ ಹೋಗಿದ್ದಾರೆ. ಕ್ರಿಕೆಟ್ ಕೂಡ ಆಡಿ ಎಂಜಾಯ್ ಮಾಡಿದ್ದಾರೆ. ವೇದಿಕೆ ಮೇಲೆ ಕುಚಿಕು ಕುಚಿಕು ಅಂತಾ ಸ್ಟೆಪ್ಸ್ ಹಾಕಿದ್ದಾರೆ.
ರಿಯಲ್ ಲೈಫ್ನಲ್ಲೂ ಕುಚಿಕುಗಳಾಗಿದ್ದ ಇವರ ಮೇಲೆ ಅದ್ಯಾವ ಕಣ್ಣು ಬಿತ್ತೋ ಗೊತ್ತಿಲ್ಲ. ಯಾವುದೋ ಒಂದು ಕೆಟ್ಟ ಘಳಿಗೆಯೋ.. ಇಲ್ಲ ಅಪಾರ್ಥದ ಮಾತಿನಿಂದಲೋ ಗೊತ್ತಿಲ್ಲ. ಕುಚಿಕು ಗೆಳೆಯರಂತೆ ಇದ್ದವರು ಮಾತು ಬಿಟ್ಟು ದೂರ ಆಗಿದ್ದರು. ಸ್ಯಾಂಡಲ್ವುಡ್ನ ಯಾವುದೇ ಕಾರ್ಯಕ್ರಮಗಳಿದ್ದರೂ, ಇಬ್ಬರೂ ಒಂದೇ ಸಮಯದಲ್ಲಿ ಕಾಣಿಸಿಕೊಳ್ತಿರಲಿಲ್ಲ. ದರ್ಶನ್ ಇದ್ದ ಕಾರ್ಯಕ್ರಮಕ್ಕೆ ಸುದೀಪ್ ಬರ್ತಿರಲಿಲ್ಲ.. ಸುದೀಪ್ ಇದ್ದ ಕಾರ್ಯಕ್ರಮಕ್ಕೆ ದರ್ಶನ ಕೂಡ ಹೋಗ್ತಿರಲಿಲ್ಲ.
ನಾನೊಂದು ತೀರ. ನೀನೊಂದು ತೀರ ಎಂಬಂತೆ ನಡೆದುಕೊಳ್ತಿದ್ರು. ದಿವಂಗತ ನಟ ಅಂಬರೀಷ್ ಪತ್ನಿ.. ಸಂಸದೆ ಸುಮಲತಾರ ಬರ್ತ್ಡೇ ಕಾರ್ಯಕ್ರಮ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. 6 ವರ್ಷಗಳ ಬಳಿಕ ಒಂದೇ ದಚ್ಚು-ಕಿಚ್ಚ ಪ್ರತ್ಯಕ್ಷವಾಗಿದ್ದಾರೆ. ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದಾರೆ. ವೇದಿಕೆ ಮೇಲಿದ್ದ ಅಭಿನಯ ಚಕ್ರವರ್ತಿ ಸುದೀಪ್, ಸುಮಲತಾ ಅವರಿಗೆ ವಿಷ್ ಮಾಡಿ, ಹೋಗಿ ಬರ್ತೀನಿ ಎಂದು ಹೊರುಡುತ್ತಾರೆ. ಅದೇ ಕ್ಷಣದಲ್ಲಿ ಚಕ್ರವರ್ತಿ ಕೂಡ ವೇದಿಕೆಯತ್ತ ಬರಲು ಮುಂದಾಗಿದ್ದಾರೆ.
ಈ ವೇಳೆ ನಟ ಸುದೀಪ್ ಇರೋದು ದರ್ಶನ್ ದಚ್ಚು ಗಮನಕ್ಕೆ ಬಂದಿದೆ ಅನ್ಸುತ್ತೆ. ವೇದಿಕೆಯತ್ತ ನೋಡುತ್ತ ಒಂದು ಕ್ಷಣ ಅಲ್ಲೆ ನಿಂತ ದರ್ಶನ್ ಮುಖದಲ್ಲಿ ಸಣ್ಣದೊಂದು ಮಂದಹಾಸ ಮೂಡಿದೆ. ಈ ಅಪರೂಪ ದೃಶ್ಯವನ್ನು ಕಾರ್ಯಕ್ರಮದಲ್ಲಿ ಭಾಗಿಯಾದವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.