ಸದ್ದಿಲ್ಲದೆ ಹಸೆಮಣೆಯೇರಿದ ಲಕ್ಷ್ಮೀನಿವಾಸ ನಟಿ ಚಂದನಾ ಅನಂತಕೃಷ್ಣ, ಹುಡುಗ ಯಾರು ಗೊತ್ತಾ
Nov 7, 2024, 11:33 IST
|

ಹೌದು, ಕಿರುತೆರೆಯ ಚೆಂದದ ನಟಿ ಚಂದನಾ ಅನಂತಕೃಷ್ಣ. ಗೊಂಬೆಯಂತಿರೋ ಈ ನಟಿಗೆ ವಿಕೇಂಡ್ನಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಶೋಗೆ ಅವಕಾಶ ಸಿಕ್ಕಿತ್ತು. ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ನಟಿ ಚಂದನ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಹತ್ತಿದ್ದರು. ಡ್ಯಾನ್ಸ್ ಕೋರಿಯೋಗ್ರಾಫರ್ ರುದ್ರಾ ಅವರಿಗೆ ಜೋಡಿಯಾಗಿ ಪ್ರತಿ ವಾರ ವಿಕೇಂಡ್ನಲ್ಲಿ ನಿಮ್ಮೆಲ್ಲರೆದುರು ಬಂದು ನಿಮ್ಮನ್ನ ರಂಜಿಸುತ್ತಿದ್ದರು.
ಆದರೆ ಧಿಡೀರ್ ಅಂತಾ ಲಾಸ್ಟ್ ವೀಕ್ ಎಪಿಸೋಡ್ನಲ್ಲಿ ಚಂದನಾ ಅವರು ಈ ಶೋ ಕ್ವಿಟ್ ಮಾಡುತ್ತೇನೆ ಎಂದು ವೇದಿಕೆ ಮೇಲೆ ಅನೌನ್ಸ್ ಮಾಡಿದ್ದರು.ಜೀ ವಾಹಿನಯಲ್ಲೇ ಹೊಚ್ಚ ಹೊಸ ಪ್ರಾಜೆಕ್ಟ್ನೊಂದಿಗೆ ಮತ್ತೆ ನಿಮ್ಮೆಲರೆದುರು ಬರುತ್ತೇನೆ ಅಂತಾ ಕ್ವಿಟ್ ಮಾಡುವುದರ ಜೊತೆಗೆ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಕೂಡ ಹೇಳಿಕೊಂಡಿದ್ದರು. ಇದಾದ ಬಳಿಕ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ ಚಂದನಾ ಅನಂತಕೃಷ್ಣ.
ಸೈಲೆಂಟ್ ಚಿನ್ನುಮರಿ ಈಗ ಮೆಲ್ಲಗೆ ಪತಿರಾಯನನ್ನು ಆರಿಸಿಕೊಂಡಿದ್ದಾರೆ. ಕುಟುಂಬದವರೇ ನೋಡಿ ಒಪ್ಪಿರುವ ಹುಡುಗನ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿ ಹೇಳದಿದ್ದರೂ, ಇದೇ ನವೆಂಬರ್ 28 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕುಟುಂಬದ ಸಮ್ಮುಖದಲ್ಲಿ ಸ್ನೇಹಿತರು, ಸಂಬಂಧಿಕರು ಹಾಗೂ ಕಲಾವಿದರು ನಟಿ ಚಂದನಾ ಅವರ ಮದುವೆಗೆ ಸಾಕ್ಷಿಯಾಗಲಿದ್ದಾರೆ.
ಚಂದನಾ ಅವರು ಕೈ ಹಿಡಿಯಲು ಹೊರಟಿರುವ ಹುಡುಗ ಪ್ರತ್ಯಕ್ಷ್ ಉದಯ್. ಇವರ ಬಗ್ಗೆ ಹೆಚ್ಚು ಯಾರಿಗೂ ಗೊತ್ತಿಲ್ಲ. ಉದ್ಯಮಿಯಾಗಿರುವ ಪ್ರತ್ಯಕ್ಷ್ ಅವರ ಪೋಷಕರು ಕೂಡ ಬಣ್ಣದ ಲೋಕದವರೇ ಅನ್ನೋದು ವಿಶೇಷ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,12 Jul 2025
ಚಿನ್ನದ ಬೆಲೆಯಲ್ಲಿ ಇಳಿಮುಖ, ಬಂಗಾರದ ಅಂಗಡಿಗಳಲ್ಲಿ ಮುಗಿಬಿದ್ದ ಜನಸಮೂಹ
Sat,12 Jul 2025