ಸಿಟಿ ರವಿ ಪದಬಳಕೆಯನ್ನು ಒತ್ತಿ ಹೇಳಿ ಕಣ್ಣಿರು ಹಾಕಿದ ಲಕ್ಷ್ಮಿ‌ಹೆಬ್ಬಾಳ್ಕರ್

 | 
Huu
ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬೆಳಗಾವಿ ಅಧಿವೇಶನದಲ್ಲಿ ಅವಮಾನ ಮಾಡಿದ ಸಿಟಿ ರವಿ ವಿರುದ್ಧ ‌ಇದೀಗ ರಾಜ್ಯಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಹೌದು, ಸಿಟಿ ರವಿ ಅವರು ಹೇಳಿದ ಮಾತು ಕಾಂಗ್ರೆಸ್ ವಲಯದಲ್ಲಿ ಕಿಡಿ ಎದ್ದಿದೆ. 
ಕಾಂಗ್ರೆಸ್ ಪಕ್ಷದ ನಾಯಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿಯಲ್ಲಿ ಸಾಕಷ್ಟು ಅಭಿಮಾನಿಗಳನ್ನು‌ ಹೊಂದಿದ್ದಾರೆ‌. ಹಾಗಾಗಿ ಬೆಳಗಾವಿ ಅಧಿವೇಶನದಲ್ಲಿ ಸಿಟಿ ರವಿ ಅವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಅಟ್ಯಾಕ್ ಕೂಡ ನಡೆದಿದೆ. 
ಇನ್ನು ಸಿಟಿ ರವಿ ಅವರ ಮಾತಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಅಂತಹ ಮಾತು ಹೇಳುವುದು ಸರಿಯಲ್ಲ. 'ನನ್ನ ಕಿತ್ತೂರು ಹುಲಿ ಅಂತೆಲ್ಲ ಕರೆಯುತ್ತಾರೆ' ಆದರೆ ಈಗ ಇಂತಹ ಅಸಹ್ಯ ಮಾತಿನಿಂದ ನನ್ನ ಮನಸ್ಸಿಗೆ ನೋವುಂಟು ಮಾಡಿದ್ದಾರೆ.
ಇನ್ನುಮುಂದೆ ಇಂತಹ ಪದಬಳಕೆ ಯಾವ ಹೆಣ್ಣು ಮಗುವಿಗೂ ಬರಬಾರದು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಗುಡುಗಿದ್ದಾರೆ. ' ನನ್ನ ಮೇಲೆ ಇಂತಹ ಆರೋಪ ಮಾಡಿದ ಸಿಟಿ ರವಿಗೆ ಕಾನೂನಿನ ಮೂಲಕ ತಕ್ಕ ಪ್ರಾಯಶ್ಚಿತ್ತ ಆಗಲೇಬೇಕು ಎಂದಿದ್ದಾರೆ.