ಗಂಡನಿಗೆ ಡಿವೋರ್ಸ್ ಕೊಟ್ಟ ಬಳಿಕ ಜೀವನ ತುಂಬಾ ಚೆನ್ನಾಗಿ ಸಾಗುತ್ತಿದೆ; ಜಾಹ್ನವಿ ಕಾರ್ತಿಕ್
Jun 6, 2025, 16:44 IST
|

ಆದರೂ ಕೆಲವರು ಮರೆಯುವ ಪ್ರಯತ್ನ ಮಾಡುತ್ತಾರೆ. ಬದುಕನ್ನು ಮತ್ತೊಮ್ಮೆ ಹೊಸದಾಗಿ ಶುರು ಮಾಡಲು ಮುಂದಾಗುತ್ತಾರೆ. ಆದರೂ ಕೂಡ ಆ ಭಯಾನಕ ನೆನಪುಗಳು ಕಾಡುತ್ತಲೇ ಇರುತ್ತವೆ. ಇದಕ್ಕೆ ಜಾಹ್ನವಿ ಅವರ ಬದುಕು ಸದ್ಯದ ಉದಾಹರಣೆ.ಹೌದು, ಜಾಹ್ನವಿ.. ಕನ್ನಡ ಸುದ್ದಿ ಲೋಕದ ಖ್ಯಾತ ಸುದ್ದಿ ವಾಚಕಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಅಧಿಪತ್ರ ಚಿತ್ರದ ಮೂಲಕ ಈಗಾಗಲೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ.
ಇಂಥಾ ಜಾಹ್ನವಿ ತಮ್ಮ ವ್ಯೆಯಕ್ತಿಕ ಬದುಕಿನಲ್ಲಿ ಹಲವು ನೋವು ಉಂಡಿದ್ದಾರೆ. ಅನೇಕ ಸಲ ತಮ್ಮ ಜೀವನದ ಮುಳ್ಳಿನ ಹಾದಿಯನ್ನು ನೆನೆದು ಕಣ್ಣೀರನ್ನು ಹಾಕಿದ್ದಾರೆ. ಆದರೂ ಕೂಡ ಇವರ ವ್ಯೆಯಕ್ತಿಕ ಬದುಕಿನ ಕುರಿತು ಇನ್ನು ಹಲವರಲ್ಲಿ ಕುತೂಹಲ ಇದ್ದೇ ಇದೆ. ಹೀಗಾಗಿಯೇ ಈಗಲೂ ಕೂಡ ಜಾಹ್ನವಿಗೆ ಅವರ ಮದುವೆ ಮತ್ತು ವಿಚ್ಛೇದನದ ಕುರಿತು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಜಾಹ್ನವಿ ಸದ್ಯ ಮತ್ತೊಮ್ಮೆ ತಮ್ಮ ಜೀವನದ ಏರಿಳಿತಗಳ ಕುರಿತು ರಾಜೇಶ್ ಗೌಡ ಅವರ ಜೊತೆ ಮಾತನಾಡಿದ್ದಾರೆ. ಗಂಡನ ಜೊತೆ ಸಂಬಂಧ ಕಡಿದುಕೊಂಡಿದ್ದೇಕೆ ಎನ್ನುವುದನ್ನು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಜಾಹ್ನವಿ ವೃತ್ತಿ ಜೀವನದಲ್ಲಿ ಹಲವು ಸಮಸ್ಯೆಗಳಿದ್ದರು ಕೂಡ ನಾನು ವ್ಯೆಯಕ್ತಿಕ ಜೀವನವನ್ನು ಕೂಡ ನಿಭಾಯಿಸಿಕೊಂಡು ಹೋಗುತ್ತಿದ್ದೇ ಎಂದಿರುವ ಜಾಹ್ನವಿ ನನಗೆ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಲು ಇಷ್ಟ ಇಲ್ಲ ಹೀಗಾಗಿ ನಾನು ಎಲ್ಲವನ್ನು ಬ್ಯಾಲೆನ್ಸ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಇನ್ನು, ಸಂಸಾರ ಅಂದ ಮೇಲೆ ಚಿಕ್ಕ ಪುಟ್ಟ ವಿರಸಗಳು ಇದ್ದಿದ್ದೇ ಆದರೆ ಅವರು ಸೈಕೋ ತರ ಆಡಲು ಪ್ರಾರಂಭಿಸಿದಾಗ ನಾನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಸಂಭವ ಬಂತು ಎಂದು ಹೇಳಿರುವ ಜಾಹ್ನವಿ ಬೆಂಗಳೂರಿನ ಹುಡುಗನ ಜೊತೆ ನಾನು ಮದ್ವೆಯಾಗಿದ್ದೇ ಬೆಂಗಳೂರಿನಲ್ಲಿ ನಾನೇನಾದರೂ ಕೆಲಸ ಮಾಡಬಹುದು ಎನ್ನುವ ಉದ್ದೇಶದಿಂದ, ಅಣ್ಣ ಮೈಸೂರಿನಲ್ಲಿ ಸಂಬಂಧ ನೋಡಿದ್ದರು ಕೂಡ ನಾನು ಬೆಂಗಳೂರು ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾರೆ. ಎಷ್ಟೇ ಕಷ್ಟ ಆದರೂ ನಾನು ಬಿಡಲಿಲ್ಲ ಎಂದು ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023