ಫಿನಾಲೆಯಲ್ಲಿ‌ ಹನುಮಂತ ಗೆಲ್ಲುತ್ತಾನೆ, ಗೆಲ್ಲದಿದ್ದರೆ ಇದು ಮೋಸ ಎಂದ ಡ್ರೋನ್ ಪ್ರತಾಪ್

 | 
Js
ಬಿಗ್‌ಬಾಸ್‌ ಫಿನಾಲೆ ಶನಿವಾರ ಹಾಗೂ ಭಾನುವಾರ ಜನವರಿ 25 ಹಾಗೂ ಜನವರಿ 26ಕ್ಕೆ ನಡೆಯಲಿದೆ. ಈ ಬಾರಿಯ ಸೀಸನ್ ಹಲವು ಕಾರಣಕ್ಕೆ ಕುತೂಹಲ ಪಡೆದುಕೊಂಡಿದೆ. ಇದೇ ಮೊದಲ ಬಾರಿ ಎನ್ನುವಂತೆ ವೈಲ್ಡ್ ಕಾರ್ಡ್‌ನ ಮೂಲಕ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಹನುಮಂತ ಹಾಗೂ ರಜತ್ ಅವರು ಅಂತಿಮ ಕಣದಲ್ಲಿ ಇದ್ದಾರೆ. ಇವರೊಂದಿಗೆ ಮಂಜು, ಮೋಕ್ಷಿತಾ, ಭವ್ಯ ಹಾಗೂ ತ್ರಿವಿಕ್ರಮ್ ಅವರು ಬಿಗ್‌ಬಾಸ್‌ ಸೀಸನ್‌ 11 ಗೆಲ್ಲುವ ಕನಸು ಕಾಣುತ್ತಿದ್ದಾರೆ. 
ಈ ನಡುವೆ ಹಲವು ಸೆಲೆಬ್ರಿಟಿಗಳು, ಗಣ್ಯರು ಹಾಗೂ ಅಭಿಮಾನಿಗಳು ಅವರ ನೆಚ್ಚಿನ ಸ್ಪರ್ಧಿಗಳಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದೀಗ ಡ್ರೋನ್‌ ಪ್ರತಾಪ್‌ ಸಹ ಬಿಗ್‌ಬಾಸ್‌ ಫಿನಾಲೆಯ ಪ್ರಮುಖ ಸ್ಪರ್ಧಿಯೊಬ್ಬರಿಗೆ ಬೆಂಬಲ ಸೂಚಿಸಿದ್ದಾರೆ. ಹಾಯ್‌.. ಡ್ರೋನ್‌ ಆರ್ಮಿ ಈ ಬಾರಿ ಇದೇ ಸ್ಪರ್ಧಿಗೆ ವೋಟ್ ಹಾಕಿ ಅಂತ ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ಬಿಗ್‌ಬಾಸ್‌ ಸೀಸನ್‌11ರ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ. ಈ ನಡುವೆ ಹಲವು ಅಭಿಮಾನಿಗಳು ಅವರ ನೆಚ್ಚಿನ ಸ್ಪರ್ಧಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಈಗ ಕನ್ನಡ ಬಿಗ್‌ಬಾಸ್‌ ಸೀಸನ್ 10ರಲ್ಲಿ ಎರಡನೇ ಸ್ಥಾನ ಪಡೆದ ಡ್ರೋನ್‌ ಪ್ರತಾಪ್‌ ಅವರು ಈ ಬಾರಿಯ ಬಿಗ್‌ಬಾಸ್‌ ಸ್ಪರ್ಧಿ ಹನುಮಂತ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಡ್ರೋನ್‌ ಪ್ರತಾಪ್‌ ಅವರು ವಿಡಿಯೋ ಮಾಡಿ ಸಪೋರ್ಟ್‌ ಮಾಡಿದ್ದಾರೆ.
ಕಳೆದ ಎರಡು ವಾರದಿಂದ ಸೈಲೆಂಟ್‌ ಆಗಿದ್ದ ಡ್ರೋನ್‌ ಪ್ರತಾಪ್‌ ಅವರು ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು. ಈ ಬಾರಿಯ ಬಿಗ್‌ಬಾಸ್‌ ಸ್ಪರ್ಧಿ ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಡಿಯರ್‌ ಡ್ರೋನ್‌ ಆರ್ಮಿ ಅಂತ ಹೇಳಿ ಎಲ್ಲರೂ ಹನುಮಂತ ಅವರಿಗೆ ಬೆಂಬಲ ಕೊಡಿ ಅಂತ ಹೇಳಿದ್ದಾರೆ. ಡ್ರೋನ್‌ ಪ್ರತಾಪ್‌ ಅವರು ವಿಡಿಯೋದಲ್ಲಿ ಹೇಳಿರುವ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.