ಮಡೆನೂರು ಮನು ಹಾಗೂ ಮಿಂಚು ಕರ್ಮಕಾಂಡ ಆಡಿಯೋ ಬ ಯಲು
May 31, 2025, 19:46 IST
|

ಈಗಾಗಲೇ ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಮನು ಬಂಧನದಲ್ಲಿದ್ದಾರೆ. ಗಂಭೀರ ಆರೋಪ, ಪೊಲೀಸ್ ವಿಚಾರಣೆಯ ಮಧ್ಯೆ ಮಡೆನೂರು ಮನು ಅವರನ್ನ ಕನ್ನಡ ಕಿರುತರೆ ಹಾಗೂ ಸ್ಯಾಂಡಲ್‌ವುಡ್‌ನಿಂದಲೇ ಬ್ಯಾನ್ ಮಾಡುವ ಆಗ್ರಹ ಕೇಳಿ ಬಂದಿದೆ.ಮಡೆನೂರು ಮನು ಬಂಧನದ ಬಳಿಕ ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿತ್ತು.
ಆ ಆಡಿಯೋದಲ್ಲಿ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಡೆನೂರು ಮನು ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗುತ್ತಿದೆ. ಇದೇ ಬುಧವಾರ ಫಿಲಂ ಚೇಂಬರ್‌ಗೆ ದೂರು ನೀಡಿ ಮಡೆನೂರು ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡ್ಬೇಕು ಅಂತ ಪ್ರತಿಭಟನೆ ನಡೆಸಲಾಗುತ್ತಿದೆ.
ಶಿವರಾಜ್‌ಕುಮಾರ್ ಇನ್ನೊಂದು 6 ವರ್ಷ.. ಸತ್ತು ಹೋಗ್ತಾರೆ. ಧ್ರುವ ಸರ್ಜಾ ಇನ್ನೊಂದು 8 ವರ್ಷ, ದರ್ಶನ್ ಸರ್ ಇನ್ನೊಂದು 6 ವರ್ಷ, ಕ್ರೇಜ್ ಇರುತ್ತದೆ ಸಿನಿಮಾ ಓಡಲ್ಲ. ಈ ಮೂರು ಜನರ ಮಧ್ಯೆ ಕಾಂಪಿಟೇಶನ್ ಕೊಡೋಕೆ ನಿಂತಿರೋ ಗಂಡುಗಲಿ ನಾನು ಅಂತ ಆಡಿಯೋದಲ್ಲಿ ಮಡೆನೂರು ಮನು ಹೇಳಿದ್ದಾರೆ ಎನ್ನಲಾಗಿದೆ. ಈ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಡೆನೂರು ಮನು ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಹಿರಿಯ ನಟ ಜಗ್ಗೇಶ್ ಸಹ ಪರೋಕ್ಷವಾಗಿ ಮಡೆನೂರು ಮನುಗೆ ಛೀಮಾರಿ ಹಾಕಿದ್ದಾರೆ.
ಅಷ್ಟೇ ಅಲ್ಲ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಶಿವರಾಜ್ ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಬಗ್ಗೆ ಕೇವಲವಾಗಿ ಮಾತನಾಡಿರುವ ಮಡೆನೂರು ಮನುನ ಚಿತ್ರರಂಗದಿಂದ ದೂರ ಇಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಜ್ಜಾಗಿದೆ ಎನ್ನಲಾಗಿದೆ.ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಗೌರವ ಅಧ್ಯಕ್ಷ ಎನ್.ಆರ್ ರಮೇಶ್ ಅವರು ಮಡೆನೂರು ಮನು ಅವರನ್ನು ಬ್ಯಾನ್ ಮಾಡಲು ನಿರ್ಮಾಪಕ ಸಂಘ, ಕಿರುತೆರೆಯಿಂದಲೂ ಬ್ಯಾನ್ ಮಾಡುವಂತೆ ಕಲರ್ಸ್ ಕನ್ನಡ, ಜೀ ಕನ್ನಡ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.