ವಿಡಿಯೋ ಕಾಲ್‌ ಮಾಡಿ ಅದನ್ನು ತೋರಿಸು ಎಂದಿದ್ದ; ಮದುವೆ ಬಳಿಕ ಮೌನ ಮುರಿದ ಚಂದನ ಅನಂತಕೃಷ್ಣ

 | 
Bnz
ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಅವರು ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಮನರಂಜನಾ ಕ್ಷೇತ್ರದಲ್ಲಿ ಕಾಸ್ಟಿಂಗ್‌ ಕೌಚ್‌ ಅನುಭವಗಳ ಬಗ್ಗೆ ಇತ್ತೀಚೆಗೆ ನಟಿಯರು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಚಂದನಾ ಅವರು ಕೂಡ ತಮ್ಮ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅವಕಾಶ ಕೊಡುವ ನೆಪದಲ್ಲಿ ನಟಿಯರೊಂದಿಗೆ ಹೇಗೆಲ್ಲ ವರ್ತಿಸುತ್ತಾರೆ ಎಂದು ಇಂಡಸ್ಟ್ರಿಯ ಕರಾಳತೆಯನ್ನು ಅವರು ರಿವೀಲ್‌ ಮಾಡಿದ್ದಾರೆ.
ಒಂದು ದಿನ ಯಾವುದೋ ಸಿನಿಮಾದಲ್ಲಿ ಅವಕಾಶ ಎಂದು ಒಬ್ಬರು ಫೋನ್‌ ಮಾಡಿದ್ರು. ಬಳಿಕ ವಿಡಿಯೋ ಕಾಲ್‌ ಮಾಡಿ, ನಿಮ್ಮನ್ನ ನೋಡಬೇಕು ಅಂದ್ರು. ನಾನು ಫೋಟೋಸ್‌ ಕಳಿಸಿದ್ದೆ. ಈ ತರದ್ದು ಬೇಡ, ಇನ್ನೂ ಸ್ವಲ್ಪ ಮಾಡ್ರನ್‌ ಬೇಕು ಅಂದ್ರು. ಆದ್ರೆ ನಾನು ಮಾಡ್ರನ್‌ ಫೋಟೋಸ್‌ ತೆಗೆಸಿರಲಿಲ್ಲ. ಆಮೇಲೆ ಮೇಕಪ್‌ ಇಲ್ಲದ ಫೋಟೋಸ್‌ ಕೇಳಿದ್ರು, ನಿಮ್ಮನ್ನ ರಿಯಲ್‌ ಆಗಿ ಹೇಗಿದ್ದೀರಾ ಅಂತ ನೋಡ್ಬೇಕು ವಿಡಿಯೋ ಕಾಲ್‌ ಮಾಡೋಕೇ ಹೇಳಿದ್ರು ಎಂದಿದ್ದಾರೆ.
ಆಗ ನನಗೆ ಯಾವ ನನ್ಮಗ ಈ ತರ ವಿಡಿಯೋ ಕಾಲ್‌ ಕೇಳ್ತಾನೆ ಅನಿಸಿತ್ತು. ಅದಕ್ಕೆ ನಾನು ರಿಪ್ಲೈ ಕೂಡ ಮಾಡಲಿಲ್ಲ. ಬ್ಲಾಕ್‌ ಮಾಡಿದೆ. ಆ ಮೇಲೆ ಯಾವುದೋ ಏಜೆನ್ಸಿಯಿಂದ ಫೋನ್‌ ಬಂದಿತ್ತು. ಒಂದು ಸಿನಿಮಾ ಇದೆಲ್ಲ ರಿಕ್ವೈರ್‌ಮೆಂಟ್ಸ್‌ ಬೇಕು ಎಂದ್ರು. ನೀವು ಓಕೆ ಅಂದ್ರೆ ಇಷ್ಟು ಪೇಮೆಂಟ್‌ ಕೊಡ್ತೀವಿ, ಮೂರು ತಿಂಗಳು ಶೂಟಿಂಗ್‌ + ಕಾಂಪ್ರಮೈಸ್‌ ಎಂದು ಆ ಮೆಸೇಜ್‌ನಲ್ಲೇ ಕ್ಲಿಯರ್‌ ಆಗಿ ಬರೆದಿದ್ರು. ಅದನ್ನ ನೋಡಿ ನಾನು ರಿಪ್ಲೈ ಮಾಡಲಿಲ್ಲ, ನಂಬರ್‌ ಬ್ಲಾಕ್‌ ಮಾಡಿದೆ ಎಂದು ಚಂದನಾ ಆ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ್ದಾರೆ
ಇನ್ನೊಮ್ಮೆ ಪ್ರಜ್ವಲ್‌ ದೇವರಾಜ್‌ ಅವರೊಂದಿಗೆ ಸಿನಿಮಾ ಎಂದು ಆಡಿಷನ್‌ಗೆ ಫೋನ್‌ ಮಾಡಿದ್ರು. ಮೇಘನಾ ರಾಜ್‌ ಅವರು ಪ್ರಜ್ವಲ್‌ ಅವರಿಗೆ ತುಂಬಾ ಕ್ಲೋಸ್‌ ಇದ್ದ ಕಾರಣ ಅವರಿಗೇ ಮೆಸೇಜ್‌ ಮಾಡಿ ಕೇಳಿದೆ. ಈ ತರ ಪ್ರಜ್ವಲ್‌ ಅವರ ಸಿನಿಮಾಗೆ ಆಡಿಷನ್‌ ಕರೀತಿದಾರೆ ಹೋಗ್ಲಾ? ಎಂದು ಕೇಳಿದೆ. ಅವರು ತಕ್ಷಣವೇ ಹೋಗಬೇಡ. ಇದೆಲ್ಲ ಸ್ಕ್ಯಾಮ್‌ ಎಂದು ಹೇಳಿದ್ರು. ಆಗ ಇನ್ನೇನು ಹೊರಟಿದ್ದವಳು ಸುಮ್ಮನಾದೆ ಎಂದು ವಿವರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub