ಬಾಲಿವುಡ್ ಹಾಡಿಗೆ ಮೊಟ್ಟಮೊದಲ ಬಾರಿಗೆ ರೀಲ್ಸ್ ಮಾಡಿದ ಮಾಲಾಶ್ರೀ; ಮೆಚ್ಚಿಕೊಂಡ ಹಿಂದಿ ಫ್ಯಾನ್ಸ್
ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀ ಕೂಡ ಟ್ರೆಂಡಿ ಆಗಿದ್ದಾರೆ. ಮಗಳ ಜೊತೆಗೆ ಇವರೂ ಅಪ್‌ಡೇಟ್ ಆಗುತ್ತಿದ್ದಾರೆ. ದೂರದ ವಿದೇಶದಲ್ಲಿ ರೀಲ್ ಮಾಡಿ ಗಮನ ಸೆಳೆದಿರೋದು ಗೊತ್ತೇ ಇದೆ. ಕಾಟೇರ ಚಿತ್ರ ಬಂದಾಗ, ಆ ಚಿತ್ರದ ಪಸಂದಗಾವ್ನೆ ಹಾಡಿಗೆ ಮಗಳ ಜೊತೆಗೆ ರೀಲ್ಸ್ ಮಾಡಿದ್ರು. ಹಾಗೇ ಮಾಡಿರೋ ಆ ವಿಡಿಯೋ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು.
ಅಷ್ಟೇ ವೈರಲ್ ಕೂಡ ಆಗಿತ್ತು. ಆದರೆ, ಇದೀಗ ಮಾಲಾಶ್ರೀ ಅವರು ಒಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಾಲಿವುಡ್ ಹಾಡಿಗೇನೆ ಸಖತ್ ವಾಕ್ ಮಾಡಿದ್ದಾರೆ. ತಮ್ಮ ಶಾರ್ಟ್ ಹೇರ್ ಅನ್ನ ಮಸ್ತ್ ಹಾರಿಸಿದ್ದಾರೆ. ವಿಶೇಷವಾಗಿ ಈ ವಿಡಿಯೋ ಸ್ಲೋ ಮೋಷನ್ ನಲ್ಲಿಯೇ ಇದೆ. ಕನಸಿನ ರಾಣಿ ಮಾಲಾಶ್ರೀ ಅವರು ರೀಲ್ಸ್ ಅಂತ ಏನೂ ಮಾಡೋದಿಲ್ಲ. ಮಗಳು ಆರಾಧನಾ ಪ್ರೀತಿಯ ಒತ್ತಾಯಕ್ಕೆ ರೀಲ್ಸ್ ಅಂತ ಮಗಳ ಜೊತೆಗೆ ಮಾಡೋದು ಇದೆ.
ಆದರೆ, ಬಾಲಿವುಡ್‌ನ ಮಯ್ಯ ಮಯ್ಯ ಹಾಡಿಗೆ ಮಾಲಾಶ್ರೀ ಅವರೊಬ್ಬರೇ ಅಭಿನಯ ಮಾಡಿದ್ದಾರೆ. ಆದರೆ, ಇದನ್ನ ಅಭಿನಯ ಅಂದ್ರೆ ತಪ್ಪಾಗುತ್ತದೆಯೋ ಏನೋ.?ಯಾಕೆಂದ್ರೆ, ಇದರಲ್ಲಿ ಕನಸಿನ ರಾಣಿ ವಾಕ್ ಮಾಡಿದ್ದಾರೆ. ಕೊನೆಯಲ್ಲಿ ತಮ್ಮ ಶಾರ್ಟ್ ಹೇರ್ ಅನ್ನ ಸ್ಟೈಲ್ ಆಗಿಯೇ ಹಾರಿಸಿದ್ದಾರೆ. ಇದು ಸ್ಲೋಮೋಷನ್‌ನಲ್ಲಿಯೇ ಇದೆ. ಹಾಗಾಗಿಯೇ ಇದು ಇನ್ನಷ್ಟು ಇಂಟ್ರಸ್ಟಿಂಗ್ ಆಗಿಯೇ ಇದೆ ಅಂತಲೇ ಫೀಲ್ ಆಗುತ್ತದೆ.
ಮಾಲಾಶ್ರೀ ಅವರು ತಮ್ಮ ಈ ವಿಶೇಷ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿಯೇ ಶೇರ್ ಮಾಡಿದ್ದಾರೆ. ಇದನ್ನ ನೋಡಿದವ್ರು ವಿವಿಧ ರೀತಿಯ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಸೂಪರ್ ಲೇಡಿ ಸೂಪರ್ ವಾಕ್ ಅಂತಲೂ ಹೇಳಿದ್ದಾರೆ. ಅದ್ಯಾರೋ ಗ್ರೇಸ್‌ಫುಲ್ ವಾಕ್ ಅಂತಲೂ ಹೊಗಳಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.