ಸ್ಟೇಜ್ ಮೇಲೆ ಸೆರಗು ಬಿಚ್ಚಿ ಡ್ಯಾನ್ಸ್ ಮಾಡಿದ ಮಂಗಳೂರು ನಟಿ ನೇಹ ಶೆಟ್ಟಿ
ಕಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಈಗ ಖುಷಿ ಸಿನಿಮಾದಲ್ಲಿ ಬಿಜಿ ಆಗಿರುವ ನಡುವೆಯೇ ಮೊನ್ನೆ ಅವರು ಮಾಡಿದ ಡ್ಯಾನ್ಸ್ ಒಂದು ಸಕತ್ ಟ್ರೋಲ್ಗೆ ಒಳಗಾಗಿತ್ತು. ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆಯೇ, ಖುಷಿ ಚಿತ್ರದ ನಾಯಕಿ ಸಮಂತಾ ಅವರ ಜೊತೆಗಿನ ರೊಮ್ಯಾಂಟಿಕ್ ಆಗಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದು, ಸಕತ್ ಟ್ರೋಲ್ಗೆ ಒಳಗಾಗಿತ್ತು.
ಅದಕ್ಕೆ ಕಾರಣ, ಆಗಸ್ಟ್ 15ರ ಸ್ವಾಂತಂತ್ರ್ಯ ದಿನ ಖುಷಿ ಚಿತ್ರತಂಡ ಹೈದರಾಬಾದ್ನ ಎಚ್ಐಸಿಸಿ ಹಾಲ್ನಲ್ಲಿ ಸಂಗೀತ ಸಂಜೆ ಆಯೋಜಿಸಿತ್ತು. ಈ ಸಂಗೀತ ಸಂಜೆಯಲ್ಲಿ ಸಮಂತಾ ಮತ್ತು ವಿಜಯ್ ದೇವರಕೊಂಡ ಅವರು ಹಾಡೊಂದಕ್ಕೆ ನರ್ತಿಸಿದ್ದರು. ಈ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಶರ್ಟ್ ಅನ್ನು ತೆಗೆದು ಕೇವಲ ಬನಿಯನ್ನಲ್ಲಿ ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್ ಮುಂದುವರೆಯಿತು.
ಇದು ಅತ್ಯಂತ ಕೆಟ್ಟ ರೀತಿಯ ಪ್ರಮೋಷನ್ ಎನ್ನುವುದು ಜನರ ವಾದ. ಈಗ ಅದರ ನಡುವೆಯೇ, ಈಗ ಕನ್ನಡತಿ, ಮುಂಗಾರು ಮಳೆ-2 ಚಿತ್ರದ ನಟಿ ನೇಹಾ ಶೆಟ್ಟಿ ವೇದಿಕೆ ಮೇಲೆಯೇ ಸೆರಗು ಬಿಚ್ಚಿ ನರ್ತಿಸಿದ್ದು ಇದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಸಿನಿಮಾದ ಪ್ರಮೋಷನ್ ಹೆಸರಿನಲ್ಲಿ ಈ ರೀತಿಯಲ್ಲಿ ಮಾನ ಮರ್ಯಾದೆ ಬಿಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ನಟ ವಿಶ್ವಾಕ್ ಸೇನ್ ಮತ್ತು ನೇಹಾ ಶೆಟ್ಟಿ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾದ ಪ್ರಚಾರದ ವೇಳೆ ಇಂಥದ್ದೊಂದು ದೃಶ್ಯ ಗಮನ ಸೆಳೆದಿದೆ. ಈ ಚಿತ್ರದ ಹಾಡಿನ ರಿಲೀಸ್ ವೇಳೆ ವಿಶ್ವಾಕ್ ಸೇನ್ ಮತ್ತು ನೇಹಾ ಶೆಟ್ಟಿ ವೇದಿಕೆ ಮೇಲೆ ನರ್ತಿಸಿದ್ದಾರೆ. ಸುತ್ತಮ್ಲ ಸುಸಿ ಹಾಡು ಇದಾಗಿದ್ದು, ಇದರ ಬಿಡುಗಡೆಯಾಗಿದೆ. ಈ ಹಾಡಿಗೆ ಯುವನ್ ಶಂಕರ್ ರಾಜಾ ಮ್ಯೂಸಿಕ್ ನೀಡಿದ್ದಾರೆ. ಇದರಲ್ಲಿ ಹುಕ್ ಸ್ಟೆಪ್ಸ್ಇದ್ದು, ಈ ಜೋಡಿ ವೇದಿಕೆ ಮೇಲೆಯೇ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ನೇಹಾ ತಮ್ಮ ಸೀರೆಯ ಸೆರಗನ್ನು ಬಿಚ್ಚಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೇಹಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಸಲಿಗೆ ಇಂಥ ಗಿಮಿಕ್ಗಳು ಸಿನಿಮಾ ಪ್ರಮೋಷನ್ನಲ್ಲಿ ಅಗತ್ಯ ಎಂದು ಒಂದು ವರ್ಗ ವಾದಿಸುತ್ತಿದೆ. ಏಕೆಂದರೆ ಕಾಂಪಿಟೀಷನ್ ಸಕತ್ ಇದೆ. ಇತ್ತೀಚೆಗೆ ಎಲ್ಲ ಸಿನಿಮಾಗಳು ಎಲ್ಲ ಭಾಷೆಗಳಲ್ಲಿ ಡಬ್ ಆಗುತ್ತಿರುವುದಿಂದ ಪ್ರೇಕ್ಷಕರನ್ನು ಸೆರೆ ಹಿಡಿಯಲು ಇಂಥದ್ದೆಲ್ಲಾ ಮಾಡುವ ಅನಿವಾರ್ಯತೆ ಇದೆ. ಹೀಗಾಗಿ ಜನರನ್ನು ಸೆಳೆಯಲು ಚಿತ್ರತಂಡಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿವೆ.
ಆದರೆ, ಕೆಲವೊಮ್ಮೆ ಇಂತಹ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯತೆ ಇದ್ದು, ಕೆಲವೊಮ್ಮೆ ಇವು ಟ್ರೋಲ್ಗೆ ಒಳಗಾಗುವುದು ಇದೆ. ಆದರೆ ಇಂದಿನ ಚಿತ್ರತಂಡಕ್ಕೆ ಚೆನ್ನಾಗಿ ಗೊತ್ತು, ಒಂದು ಚಿತ್ರ ಅಥವಾ ಹಾಡು ಹೆಚ್ಚು ಟ್ರೋಲ್ ಆಯಿತೆಂದರೆ, ಅದನ್ನು ನೋಡಲು ಇನ್ನಷ್ಟು ಜನ ಮುಂದೆ ಬರುತ್ತಾರೆ ಎನ್ನುವುದು ಚಿತ್ರರಂಗದವರ ಸಮರ್ಥನೆಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.