ಚಿರು ಒಪ್ಪಿದರೆ ಎರಡನೇ ಮದುವೆ ಎಂದ ಮೇಘನಾ ರಾಜ್, ಕನ್ನಡಿಗರಿಗೆ ಸಿಹಿಸುದ್ದಿ ಕೊಟ್ಟ ಚೆಲುವೆ
Mar 11, 2025, 21:16 IST
|

ಚಿರು ಹೋಗುವಾಗ ನಾನು ನಾಲ್ಕು ತಿಂಗಳ ಗರ್ಭಿಣಿ. ನನಗೆ ಜನರ ಅನುಕಂಪ ಬೇಡ. ಅವರ ನಗು ಬೇಕು. ನನ್ನನ್ನು ನೋಡಿ ಜನ ಒಂದೊಳ್ಳೆ ನಗು ಕೊಡಬೇಕು. ಅನುಕಂಪ ಒಳ್ಳೆಯದೇ ಆದರೆ ಅದು ತುಂಬಾ ಸಮಯ ಇರುವುದಿಲ್ಲ. ಎಷ್ಟು ದಿನ ಜನ ನಿಮ್ಮ ಬಗ್ಗೆ ಅನುಕಂಪ ತೋರಿಸಬಹುದು. ಅವರಿಗೆ ಅವರೇ ಆದ ಜೀವನ ಇದೆ. ಹೀಗಾಗಿ ನನಗೆ ಯಾರ ಅನುಕಂಪವೂ ಬೇಡ. ಬದಲಿಗೆ ನನ್ನನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ನಾನು ಒಳ್ಳೆಯದು ಮಾಡಿದರೆ ಅದನ್ನು ನೀವು ಕಲಿತುಕೊಂಡು ಮಾಡಿ ಎಂದರು.
ಆ ಸಮಯದಲ್ಲಿ ತುಂಬಾ ಜನ ಅನುಕಂಪ ತೋರಿಸಿರಬಹುದು. ಆ ಸಮಯದಲ್ಲಿ ನನ್ನನ್ನು ಹೇಗೆ ಮಾತನಾಡಿಸಬೇಕು ಎನ್ನುವುದು ಗೊತ್ತಾಗುತ್ತಿರಲಿಲ್ಲ. ರಾಯನ್ ನನ್ನ ಜೀವನದಲ್ಲಿ ಬರದೇ ಇದ್ದರೆ ನಾನು ಮತ್ತೆ ಮೊದಲಿನಂತೆ ಆಗುತ್ತಿರಲಿಲ್ಲ. ಈ ದುರ್ಘಟನೆ ಆದ ಮೇಲೆ ನನಗೆ ಮೊದಲು ಬಂದ ಯೋಚನೆ ಅಂದರೆ ನನ್ನ ಮಗುವನ್ನು ನಾನು ಉಳಿಸಿಕೊಳ್ಳಬೇಕು. ಅದೊಂದೇ ನನ್ನ ತಲೆಗೆ ಬಂದಿದ್ದು.
ರಾಯನ್ ನನ್ನ ಜೀವನದಲ್ಲಿ ಇಲ್ಲದೇ ಇದ್ದಿದ್ದರೆ ನಾನೇನು ಮಾಡುತ್ತಿದೆ ಎನ್ನುವುದನ್ನು ನಾನು ಈಗಲೂ ಯೋಚಿಸುತ್ತೇನೆ. ರಾಯನ್‌ನಿಂದ ನಾನು ಇಂದು ಖುಷಿಯಾಗಿದ್ದೇನೆ. ಜನ ಏನೇ ಅಂದರೂ ನಾನು ಖುಷಿಯಾಗಿರಬೇಕು ಎಂದು ನಿರ್ಧರಿಸಿದ್ದೇನೆ. ಮೊದಲು ನನಗೆ ನಗಲು ಭಯ ಆಗುತ್ತಿತ್ತು.
ಈ ಘಟನೆಯಾಗಿ ಕೆಲವು ತಿಂಗಳು ಆದ ಮೇಲೆ ನನ್ನ ಸ್ನೇಹಿತರು ಮನೆಗೆ ಬಂದಾಗ ಏನೋ ಒಂದು ತಮಾಷೆಯ ಘಟನೆ ನಡೆಯಿತು. ನಾನು ಎಷ್ಟು ನಕ್ಕಿದ್ದೇನೆ ಎಂದರೆ, ಆ ರೀತಿ ನಾನು ನಗದೇ ಬಹಳ ಸಮಯವಾಗಿತ್ತು. ಚಿರು ಒಪ್ಪಿದರೆ ಮಾತ್ರ ಇನ್ನೊಂದು ಮದುವೆಯ ಮಾತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025