ಧ್ರುವ ಸರ್ಜಾ ಗಂಡು ಮಗುವನ್ನು ನೋಡಿ ಕಣ್ಣೀರಿಟ್ಟ ಮೇಘನಾ, ಏನಾಯಿತು ಯಾಕೆ ಗೊತ್ತಾ

 | 
Hhh

ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ತಮ್ಮ ಎರಡನೇ ಮಗುವನ್ನು ಗಣೇಶ ಚತುರ್ಥಿಯ ದಿನದಂದು ಸ್ವಾಗತಿಸಿದ್ದಾರೆ. ಗಂಡು ಮಗುವಿಗೆ ಪ್ರೇರಣಾ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಒಳ್ಳೆಯ ಸುದ್ದಿಯಿಂದ ಸಂತಸಗೊಂಡಿದ್ದಾರೆ. 

ವರಮಹಾಲಕ್ಷ್ಮಿ ಪೂಜೆಯ ಶುಭ ಸಂದರ್ಭದಲ್ಲಿ ವಿಡಿಯೋದೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಎಲ್ಲರಿಗೂ ತಿಳಿಸಿದ್ದರು. ಗಂಡು ಮಗುವಿನ ಆಗಮನದಿಂದ ಸರ್ಜಾ ಕುಟುಂದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಮಗು ಜನಿಸಿರುವುದು ತುಂಬಾ ವಿಶೇಷವಾಗಿದೆ. ಧ್ರುವ ಸರ್ಜಾ ಮಗನನ್ನು ನೋಡಲು ಮೇಘನಾ ರಾಜ್ ಮತ್ತು ಸುಂದರ್​ ರಾಜ್​, ಪ್ರಮೀಳಾ ಜೋಶಾಯ್​ ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಸುಂದರ್​ ರಾಜ್, ಗೌರಿ ಈಗಾಗಲೇ ಮನೆಗೆ ಬಂದಿದ್ದಳು. ಈಗ ಗಣೇಶ ಬಂದ. ಈ ಮಗು ಗಜಕೇಸರಿ ಯೋಗದಲ್ಲಿ ಜನಿಸಿದೆ. ಇದರಿಂದ ಕುಟುಂಬದಲ್ಲಿ ಸಂತಸ ಮೂಡಿದೆ. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಇನ್ನು ಮನೆಗೆ ಮತ್ತೊಬ್ಬ ಮಗ ಅದು ಗಣೇಶ ಹಬ್ಬದ ದಿನ ಬಂದಿರುವುದು ಬಹಳ ಸಂತೋಷ ನೀಡಿದೆ ಎಂದು ಮೇಘನಾ ರಾಜ್ ಹೇಳಿದ್ದಾರೆ.

ನನಗೆ ಮೂವರು ಮಕ್ಕಳಿದ್ದಾರೆ. ರಾಯನ್ ನನ್ನ ಮೊದಲ ಮಗನೇ ಆಗಿದ್ದಾನೆ. ಮಗಳು ಎರಡನೇಯವಳು. ಈಗ ಮತ್ತೊಮ್ಮೆ ಮಗ ಹುಟ್ಟಿದ್ದಾನೆ. ಮಗ ನನಗಿಂತೂ ತುಂಬಾ ಕಲರ್ ಆಗಿದ್ದಾನೆ. ಆದರೆ ನಾನು ಹೋದ ಕೂಡಲೇ ನನ್ನ ಮಗನನ್ನ ನೋಡಲಿಲ್ಲ. ಪತ್ನಿ ಪ್ರೇರನಾಳನ್ನೆ ನೋಡ್ತಾ ಇದ್ದೆ, ಮಕ್ಕದಲ್ಲಿದ್ದ ಡಾಕ್ಟರು ಮಗನನ್ನ ನೋಡಿ ಅಂದ್ಮೇಲೆನೆ ನಾನು ಮಗನನ್ನ ನೋಡಿದೆ. 

ಈತ ಹುಟ್ಟಿದ ಖುಷಿಯಲ್ಲಿ ಚಿರು ಅಣ್ಣನ ನಂಬರ್‌ಗೆ ಫೋನ್ ಮಾಡಿದೆ. ಆದರೆ ಅಣ್ಣನ ಇಲ್ಲ ಅನ್ನೋ ಬೇಸರ ಇನ್ನೂ ಇದೆ. ಆತನನ್ನ ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಂದು ಖುಷಿಯಲ್ಲಿಯೂ ಕೂಡ ಅಣ್ಣನನ್ನು ನೆನೆಸಿ ಕಣ್ಣೀರಿಟ್ಟಿದ್ದಾರೆ ಧ್ರುವ ಸರ್ಜಾ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.