ಸಂಪೂರ್ಣ ಬದಲಾದ ಕುಂಭಮೇಳದ ಮೊನಾಲಿಸಾ, ಬಾಲಿವುಡ್ ಅಂಗಳದಲ್ಲಿ ಹೊಸ ಅವತಾರ

 | 
ಕಾ
ಉತ್ತರ ಪ್ರದೇಶ ಪ್ರಯಾಗ್‌ ರಾಜ್‌ನಲ್ಲಿ ಜಾಗತೀಕ ಮಟ್ಟದ ಮಹಾ ಕುಂಭಮೇಳ ನಡೆಯುತ್ತಿರುವುದು ಸದ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಕೋಟ್ಯಂತರ ಭಕ್ತರು ಪ್ರಯಾಗ್‌ ರಾಜ್‌ಗೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದರೆ, ಇನ್ನೂ ಅನೇಕರು ಫೋಟೋ ಹಾಗೂ ವಿಡಿಯೋಗಳ ಮೂಲಕ ಪ್ರಯಾಗ್‌ ರಾಜ್‌ನ ಮಹಾ ಕುಂಭಮೇಳದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಾಗಿ ಮಹಾ ಕುಂಭಮೇಳದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಸ್ನೇಹಿತರೇ...ಈ ಬಾರಿ ಮಹಾ ಕುಂಭಮೇಳದ ಲಕ್ಷಾಂತರ ವಿಡಿಯೋಗಳು ವೈರಲ್‌ ಆದರೂ ಅತೀ ಹೆಚ್ಚು ಸದ್ದು ಮಾಡಿರುವುದು ಮಾತ್ರ ಮಣಿ ಸರಗಳ ಮಾರುವ ಹುಡುಗಿ ಮೊನಾಲಿಸಾ ವಿಡಿಯೋಗಳು. ಹೌದು ಕಣ್ರೀ... ಲಿಯೊನಾರ್ಡೊ ಡ ವಿಂಚಿಯವರ ಪೇಂಟಿಂಗ್ ಮೊನಾಲಿಸಾ ತರಹವೇ ದಿನದಿಂದ ದಿನಕ್ಕೆ ಫೇಮಸ್ ಆಗ್ತಿದ್ದಾಳೆ.ದೇವರೇ ಐಶ್ವರ್ಯಾ ಎಲ್ಲಾ ಶ್ರೀಮಂತರಿಗೆ ಕೊಟ್ಟೆ..ಅಂದವನ್ನು ಬಡವರಲ್ಲಿ ಇಟ್ಟೆ ಎನ್ನುವ ಕ್ಯಾಪ್ಷನ್‌ನೊಂದಿಗೆ ಮೊನಾಲಿಸಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಕೂಡಾ ಆಗ್ತಿದೆ.
ಸ್ನೇಹಿತರೇ...ಮುಗ್ಧ ನಗು, ಆಕರ್ಷಕ ಹಾವಿನ ಕಣ್ಣುಗಳ ರೀತಿಯ ಕಣ್ಣುಗಳು,ಕೈಯಲ್ಲಿ- ಕುತ್ತಿಗೆಯಲ್ಲಿ ಒಂದಿಷ್ಟು ಮಣಿಗಳು, ಜೊತೆಗೆ ರುದ್ರಾಕ್ಷಿ ಹಾಗೂ ಮಣಿ ಸರಗಳ ಮಾರಾಟ ಮಾಡುತ್ತಿದ್ದ ಮೊನಾಲಿಸಾ ರಾತ್ರೋರಾತ್ರಿ ಸೋಶಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಳು. ನೂರಾರು ಜನ ಆಕೆಯನ್ನು ಹುಡುಕಿ ಬಂದು ಮಾತನಾಡಿಸಿ ವಿಡಿಯೋ ಮಾಡಿಕೊಳ್ಳಲು ಆರಂಭಿಸಿದರು. ಕೊನೆಗೆ ಇದೇ ಆಕೆಗೆ ಮುಳ್ಳಾಗಿದ್ದು, ಆಕೆ ಹೊಟ್ಟೆಪಾಡಿಗಾಗಿ ಬಂದ ಪ್ರಯಾಗ್‌ ರಾಜ್‌ ಅನ್ನು ತೊರೆದು ತನ್ನ ಊರಿಗೆ ಸೇರುವಂತಾಯಿತು.
ಸ್ನೇಹಿತರೇ .. ಆದ್ರೆ ಮೊನಾಲಿಸಾ ಮಹಾ ಕುಂಭಮೇಳದಿಂದ ನಿರ್ಗಮಿಸಿದರೂ ಆಕೆಯ ಹವಾ ಮಾತ್ರ ಕಮ್ಮಿ ಆಗಲಿಲ್ಲ. ಆಕೆಯ ಫೋಟೋಶೂಟ್‌ ವಿಡಿಯೋಗಳು, ಮೇಕಪ್ ವಿಡಿಯೋಗಳು ಹೀಗೆ ಸಾಲು ಸಾಲು ವಿಡಿಯೋಗಳು ವೈರಲ್‌ ಆಗುತ್ತಲೇ ಇದ್ದವು. ಕೊನೆಗೆ ಆಕೆಗೆ ಬಾಲಿವುಡ್‌ನಿಂದ ಆಫರ್‌ ಬಂದಿದೆ ಎನ್ನುವ ಸುದ್ದಿಗಳು ಕೂಡ ಹಾರಿದಾಡುತ್ತಿದೆ. ಸದ್ಯದ ತನ್ನ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡ ಮೊನಾಲಿಸಾ ಬದುಕು ನಡೆಸಲು ಹೊಸ ಬ್ಯುಸಿನೆಸ್‌ ಆರಂಭಿಸಿದ್ದಾಳೆ.
ಹೌದು ಸ್ನೇಹಿತರೇ...ಮಧ್ಯ ಪ್ರದೇಶದ ಇಂದೋರ್​ನ ಮಹೇಶ್ವರ ಅನ್ನೋ ಪುಟ್ಟ ಗ್ರಾಮದ ಹುಡುಗಿ ಮೊನಾಲಿಸಾ. ಸದ್ಯ, ತನ್ನ ಅಜ್ಜನೊಂದಿಗೆ ಊರಿನಲ್ಲೇ ಇರೋ ಮೊನಾಲಿಸಾಳನ್ನು ಡಿಜಿಟಲ್ ಕ್ರೇಜ್ ಸುಮ್ಮನೇ ಬಿಡುತ್ತಿಲ್ಲ. ತನ್ನನ್ನು ಅಪ್ಪ ಕುಂಭಮೇಳದಿಂದ ಕಳುಹಿಸಿದ್ದು ಏಕೆ ಅನ್ನೋ ಸಂಗತಿಯನ್ನೂ ಮೊನಾಲಿಸಾ ಹಂಚಿಕೊಂಡಿದ್ದಾಳೆ. ಅಷ್ಟೇ ಅಲ್ಲ, ತನ್ನ ಪುಟ್ಟ ಮನೆ ತೋರಿಸಿ ತನ್ನ ಸ್ಥಿತಿ ಎಂಥದ್ದು ಅನ್ನೋದನ್ನ ಮುಗ್ಧವಾಗಿ ನಗುತ್ತಲೇ ಹೇಳಿಕೊಂಡಿದ್ದಾಳೆ. ಮಹಾಕುಂಭಮೇಳದಲ್ಲಿ ದಿನಕ್ಕೆ ₹1000 ದಿಂದ ₹3000 ದುಡಿಯುತ್ತಿದ್ದಳು. ಆದ್ರೀಗ ಈಕೆಯ ರೇಂಜೇ ಚೇಂಜ್ ಆಗಿದೆ. ಹೊಸ ಬ್ಯುಸಿನೆಸ್​ ಆರಂಭಿಸಿರೋ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. ಅದ್ಯಾವ ಬಂಡವಾಳ ಅವಳನ್ನು ಜನಪ್ರಿಯಗೊಳಿಸಿತೋ? ಅದೇ ಬಂಡವಾಳದಿಂದಲೇ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾಳೆ.
ಹೂ ಹಾಗೂ ಮಣಿಸರ ಮಾರಾಟಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಮೊನಾಲಿಸಾ ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಮೊನಾಲಿಸಾ ಭೋಂಸ್ಲೆ 08 ಎನ್ನುವ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾಳೆ. ಇದುವರೆಗೂ ಮಾಡಿರುವ ಕೇವಲ ಒಂಬತ್ತು ವಿಡಿಯೋಗೆ ಮೊನಾಲಿಸಾ ಸುಮಾರು 3 ಲಕ್ಷ ಸಬ್​ಸ್ಕ್ರೈಬರ್ಸ್​ ಹೊಂದಿದ್ದಾಳೆ. ಅಲ್ಲದೇ ವಿಡಿಯೋಗಳು ಮಿಲಿಯನ್‌ ಗಟ್ಟಲೆ ವೀಕ್ಷಣೆ ಪಡೆಯುತ್ತಿದೆ. ಇದುವರೆಗೂ ಕೇವಲ 9 ವಿಡಿಯೋ ವ್ಲಾಗ್ ಮಾಡಿರೋ ಮೊನಾಲಿಸಾ ಎಂಟೇ ದಿನಗಳಲ್ಲಿ ಸರಿ ಸುಮಾರು 3 ಲಕ್ಷ ಸಬ್​ಸ್ಕ್ರೈಬರ್ಸ್​ ಹೊಂದಿದ್ದಾಳೆ. ಸೋಷಿಯಲ್ ಬ್ಲೇಡ್ ಅನ್ನೋ ವೆಬ್​​ಸೈಟ್​ ಈಕೆಯ ಯುಟ್ಯೂಬ್ ವಿಡಿಯೋ ಆದಾಯ ತಿಂಗಳಿಗೆ 10 ಲಕ್ಷ ದಾಟಲಿದೆ ಎಂದು ಅಂದಾಜಿಸುತ್ತಿದೆ. ಅಲ್ಲಿಗೆ ರುದ್ರಾಕ್ಷಿ ಮಾರುತ್ತಿದ್ದಾಗ ದಿನಕ್ಕೆ 1000 ರೂಪಾಯಿ ದುಡಿಯುತ್ತಿದ್ದ ಮೊನಾಲಿಸಾ ಇದೀಗ 30,000 ರೂಪಾಯಿ ದುಡಿಯೋ ರೇಂಜ್​​ಗೆ ಬಂದಿದ್ದಾಳೆ ಎನ್ನಲಾಗುತ್ತಿದೆ. ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯಾ ಅನ್ನೋ ಮಾತು ಇಲ್ಲೂ ಅನ್ವಯಿಸುತ್ತದೆ.