PUC ವಿದ್ಯಾರ್ಥಿ ಜೊತೆ 3 ಮಕ್ಕಳ ತಾಯಿ ಪರಾರಿ, ಓಡೋಡಿ‌ ಬಂದ ಗಂಡನಿಗೆ ಸಿಕ್ಕಿದ್ದು ಎಲ್ಲಿ ಗೊ ತ್ತಾ

 | 
Bbb
ಪ್ರೀತಿ ಕುರುಡು, ಅದಕ್ಕೆ ವಯಸ್ಸಿನ ಮಿತಿ ಇಲ್ಲ ಎನ್ನುವುದಕ್ಕೆ ಹಲವು ಘಟನೆಗಳನ್ನು ನೀವು ನೋಡಿರಬಹುದು. ಓದಿರಬಹುದು ಆದರೆ ಇಲ್ಲೊಬ್ಬ ಪ್ರಥಮ ಪಿಯುಸಿ ವಿದ್ಯಾರ್ಥಿ ಮೂರು ಮಕ್ಕಳಿರುವ ಮಹಿಳೆಯೊಂದಿಗೆ ಪ್ರೀತಿ-ಪ್ರೇಮದ ಸಲುಗೆ ಬೆಳೆಸಿಕೊಂಡು ಆಕೆಯೊಂದಿಗೆ ಊರು ತೊರೆದು ಪರಾರಿಯಾಗಿದ್ದಾನೆ. ಎದೆ ಎತ್ತರಕ್ಕೆ ಬೆಳೆದ ಮಗ ಏಕಾಏಕಿ ನಾಪತ್ತೆಯಾಗಿರುವುದನ್ನು ಕಂಡು ಬಾಲಕನ ಪೋಷಕರು ಕಂಗಾಲಾಗಿದ್ದು, ಮಹಿಳೆಯೇ ತನ್ನ ಮಗನನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ.
ಮೂರು ಮಕ್ಕಳ ತಾಯಿಯ ಜೊತೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಮೂರು ಮಕ್ಕಳ ತಾಯಿ ಹಾಗೂ ಪಿಯುಸಿ ವಿದ್ಯಾರ್ಥಿ ಇಬ್ಬರು ಒಂದೇ ಊರಿನಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಬೇರೆ ಊರಿನಿಂದ ಬಂದು ನೆಲೆಸಿದ ಕಾರಣ ಅಪರಿಚಿತರಂತೆ ಇದ್ದ ಎರಡು ಕುಟುಂಬಗಳು ಬರುಬರುತ್ತಾ ಮಾತನಾಡಲು ಆರಂಭಿಸಿದ್ದಾರೆ.
ಒಂದು ದಿನ ಬಾಲಕನ ತಂದೆ ಆ ಮಹಿಳೆ ಜೊತೆ ಮಾತನಾಡುತ್ತಿದ್ದರಂತೆ ಈ ವೇಳೆ ಬಾಲಕನಿಗೆ ಮಹಿಳೆಯ ಪರಿಚಯವಾಗಿದೆ. ಬಳಿಕ ಅಕ್ಕ ಪಕ್ಕದ ಮನೆಯಾದ ಕಾರಣ ಪ್ರತಿದಿನವೂ ಮಾತನಾಡಲು ಆರಂಭಿಸಿದ್ದಾರೆ. ಇಬ್ಬರ ಮಧ್ಯೆ ಸ್ನೇಹ ಬೆಳೆದಿದ್ದು, ಈ ಸ್ನೇಹವೇ ಪ್ರೀತಿಯಾಗಿ ಬದಲಾಗಿದೆ. ಇಬ್ಬರ ನಡುವೆ ಅತಿಯಾದ ಸಲುಗೆ ಬೆಳೆದಿದ್ದು, ಬಾಲಕ ತನ್ನ ಹೆಚ್ಚಿನ ಸಮಯವನ್ನು ಮಹಿಳೆ ಮನೆಯಲ್ಲಿ ಕಳೆಯುತ್ತಿದ್ದ.
ಇವರಿಬ್ಬರ ಸ್ನೇಹ-ಸಲುಗೆ ಕಂಡು ಕಂಗಾಲಾದ ಬಾಲಕನ ತಂದೆ ಕೊನೆಗೆ ಆತನನ್ನು ಹಳೆ ಮಂಗಳವಾಡಿಯಲ್ಲಿನ ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಇದರಿಂದ ಪರಸ್ಪರ ದೂರಾಗಿದ್ದ ಇಬ್ಬರು ಮೊಬೈಲ್‌ ಫೋನ್‌ ಮೂಲಕ ಮತ್ತೆ ಸಂಪರ್ಕಕಕ್ಕೆ ಬಂದು, ಇಬ್ಬರು ಮನೆ ಬಿಟ್ಟು ತೆರಳಲು ಪ್ಲಾನ್‌ ಮಾಡಿದ್ದಾರೆ. ಕೊನೆಗೂ ಮೂರು ಮಕ್ಕಳ ತಾಯಿ ತನ್ನ ಕುಟುಂಬವನ್ನು ಬಿಟ್ಟು ಪ್ರಥಮ ಪಿಯುಸಿ ವಿದ್ಯಾರ್ಥಿ ಜೊತೆ ಪರಾರಿಯಾದ್ದಾಳೆ. 
ಘಟನೆ ಸಂಬಂಧ ಬಾಲಕನ ತಂದೆ ಲಕಡಗಂಜ್ ಪೊಲೀಸ್‌ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದು, ಮಹಿಳೆ ಕಡೆಯವರು ಕೂಡ ನಾಪತ್ತೆ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub