ನನ್ನ ಗಂಡ ಆ ವಿಚಾರದಲ್ಲಿ ಏನೂ ಪ್ರಯೋಜನವಿಲ್ಲ, ಮೌನಮುರಿದ ಸೂರ್ಯ ಪತ್ನಿ ಜ್ಯೋತಿಕಾ
Feb 28, 2025, 19:25 IST
|

ಉಪೇಂದ್ರ ಅವರ ಚಿತ್ರಕ್ಕೆ ಕನ್ನಡದಲ್ಲೂ ನಟಿಸಿರುವ ತಮಿಳುನಟಿ ಜ್ಯೋತಿಕಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾದ ಬಳಿಕ ಕೊಂಚ ಸಿನಿಮಾಗಳಿಂದ ಬಿಡುವು ಪಡೆದಿದ್ದರು. ಮಕ್ಕಳ ಲಾಲನೆ ಪಾಲನೆಗೆ ಹೆಚ್ಚಿನ ಸಮಯ ವ್ಯಯಿಸಿದ್ದರು. ಸದ್ಯ ಮುಂಬೈಗೆ ವಾಸ್ತವ್ಯ ಬದಲಿಸಿರುವ ಜ್ಯೋತಿಕಾ ಬಾಲಿವುಡ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.
ತಮ್ಮ ಪೋಷಕರ ಜೊತೆ ಇರಲು, ಮಕ್ಕಳ ವಿದ್ಯಾಭ್ಯಾಸದ ಕಾರಣಕ್ಕೆ ಚೆನ್ನೈನಿಂದ ಸೂರ್ಯ-ಜ್ಯೋತಿಕಾ ದಂಪತಿ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಕಳೆದ ವರ್ಷ ಶೈತಾನ್, ಶ್ರೀಕಾಂತ್ ಎಂಬ ಎರಡು ಸಿನಿಮಾಗಳಲ್ಲಿ ಜ್ಯೋತಿಕಾ ನಟಿಸಿದ್ದರು. ಸದ್ಯ ಆಕೆ ನಟಿಸಿರುವ ಡಬ್ಬಾ ಕಾರ್ಟೆಲ್ ವೆಬ್ ಸೀರಿಸ್ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರದ ಭಾಗವಾಗಿ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ.
ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿಕಾ ತಮ್ಮ ವೈಯಕ್ತಿಯ ವಿಚಾರಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಖ್ಯಾತನಟ ಸೂರ್ಯ ಅವರನ್ನು ಮದುವೆ ಆಗಿದ್ದಕ್ಕೂ ಲಿಂಗಭೇದ ಎದುರಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಇಷ್ಟು ವರ್ಷ ಕೆಲಸ ಮಾಡಿದರೂ ಲಿಂಗ ತಾರತಮ್ಯ ಇನ್ನು ಹೋಗಿಲ್ಲ. ಸೂರ್ಯ ಅವರನ್ನು ಮದುವೆ ಆಗಿದ್ದಕ್ಕೆ ಅದು ಮತ್ತಷ್ಟು ಹೆಚ್ಚಾಯಿತು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಪುರುಷ ಪ್ರಧಾನ ಸಮಾಜದಲ್ಲಿ ಲಿಂಗ ತಾರತಮ್ಯ ಮನೆಯಿಂದಲೇ ಆರಂಭವಾಗಿಬಿಡುತ್ತದೆ. ಇನ್ನು ಚಿತ್ರರಂಗದಲ್ಲಿ ಕೂಡ ಪುರುಷ ಪ್ರಾಧಾನ್ಯತೆ ಕಂಡುಬರುತ್ತದೆ. ಈ ಬಗ್ಗೆ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದ್ದಾರೆ. ಜ್ಯೋತಿಕಾ ಮಾತನಾಡಿ ಇದು ನನಗೆ ದಿನನಿತ್ಯದ ವಿಷಯ ಎನ್ನುವಂತಾಗಿದೆ. ನಾನು ಒಬ್ಬ ಸ್ಟಾರ್ ನಟನನ್ನು ಮದುವೆಯಾಗಿದ್ದೇನೆ. ಇದನ್ನು ಈಗಲೂ ಎದುರಿಸುವಂತಾಗಿದೆ. ಸಂದರ್ಶನಗಳಲ್ಲಿ ಕೂಡ ಇದು ನಡೆಯುತ್ತಿರುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.