ಬಿಗ್ ಬಾಸ್ ಸಹವಾಸ ‌ಮಾಡಿ ನನ್ನ ಜೀವನ ಅಂತ್ಯ ಕಾಣುತ್ತಿದೆ; ಗೋಲ್ಡ್ ಸುರೇಶ್

 | 
Vj
ಬಿಗ್ ಬಾಸ್ ಮನೆಯ ನೆಚ್ಚಿನ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್ ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದು ಲೈವ್ ವಿಡಿಯೋ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಅಂತ್ಯ ಕಂಡ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ. 
ಹೌದು, ಏಕಾಏಕಿ ‌ಬಿಗ್ ಬಾಸ್ ಮನೆಯಿಂದ ‌ಹೊರಬಂದ ಗೋಲ್ಡ್ ಸುರೇಶ್ ಇದೀಗ ಲೈವ್ ಬಂದು ತನ್ನ ವ್ಯಾಪಾರ ನಷ್ಟದ ಬಗ್ಗೆ ಮಾತನಾಡಿದ್ದಾರೆ.‌ ಬಿಗ್ ಬಾಸ್ ಮನೆಗೆ ಹೀಗುವ ಹೋಗುವ ಮುನ್ನ ಎಲ್ಲವೂ ಚೆನ್ನಾಗಿತ್ತು. ಆದರೆ ಮನೆಯಿಂದ ಬರುವಷ್ಟರಲ್ಲಿ ಎಲ್ಲವೂ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ ಎಂದಿದ್ದಾರೆ. 
ತನ್ನ ವ್ಯವಹಾರವನ್ನು ಪತ್ನಿಗೆ ವಹಿಸಿಕೊಂಡು ಹೋಗಿದ್ದೆ, ಆದರೆ ಆಕೆಗೆ ಸರಿಯಾಗಿ ನಿಭಾಯಿಸಲು ಸಾಧ್ಯವಾಗಿಲ್ಲ. ಹಾಗಾಗಿ ತನ್ನ ವ್ಯಾಪಾರದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಇನ್ನು ‌ಮತ್ತೆ ಮೇಲೆ ನಷ್ಟ‌ ಬರಿಸಲು ಪ್ರಯತ್ನ ಪಡುತ್ತಿದ್ದೇನೆ. 
ಇನ್ನು ಕೋಟ್ಯಾಂತರ ರೂಪಾಯಿ ನಷ್ಟದ ಹಿನ್ನೆಲೆ, ಸಾಲ ಕೂಡ ಮಾಡಬೇಕಾಗುತ್ತೆ. ಹೀಗಾಗಿ ನನ್ನ ಸದ್ಯದ ಪರಿಸ್ಥಿತಿಯಲ್ಲಿ ನಾನು ಮತ್ತೆ ಬಿಗ್ ಬಾಸ್ ಹೋಗಲು ಸಾಧ್ಯವಿಲ್ಲ ಎಂದು ಅಭಿಮಾನಿಗಳಿಗೆ ಗೋಲ್ಡ್ ಸುರೇಶ್ ಕ್ಷಮೆ ಕೇಳಿದ್ದಾರೆ.