ಡ್ರೋನ್ ಪ್ರತಾಪ್ ವಿರುದ್ಧ ರೊಚ್ಚಿಗೆದ್ದ ನಾಗಿಣಿ, ಎದ್ದು ಬಿದ್ದು ಕಣ್ಣೀರಿಟ್ಟ ಡ್ರೋ.ನ್

 | 
Bf

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್‌ ಮನೆಯಲ್ಲಿ ಒಂದಲ್ಲ ಒಂದು ವಿಷ್ಯಕ್ಕೆ ಡ್ರೋನ್ ಪ್ರತಾಪ್ ಹೆಸರು ಕೇಳಿ ಬರುತ್ತಿದೆ. ವಿನಯ್ ಹಾಗೂ ಮೈಕಲ್​ನಿಂದ ಇಡೀ ಮನೆ ಶಿಕ್ಷೆ ಅನುಭವಿಸುತ್ತಿದೆ. ಮನೆಯಲ್ಲಿನ ಒಬ್ಬಿಬ್ಬರಿಂದ ಇಡೀ ಮನೆಯಲ್ಲಿರೋರೆಲ್ಲ ಶಿಕ್ಷೆ ಅನುಭವಿಸುತ್ತಿದ್ದಾರೆ ಅನ್ನೋ ಬೇಸರ ಕಾಡುತ್ತಿದೆ. 

ಇದೇ ರೀತಿಯಲ್ಲಿ ಪ್ರತಾಪ್​ಗೂ ಕೂಡ ಬೇಸರವಾಗಿದೆ. ಇದೇ ತಪ್ಪನ್ನ ನಮ್ಮ ಬದಲು ಬೇರೆಯವರು ಯಾರಾದರೂ ಮಾಡಿದ್ರೆ ಈ ಮನೆಯಲ್ಲಿ ಬದುಕೋಕೆ ಆಗುತ್ತಿತ್ತಾ ಎಂದು ಬಾತ್​ ರೂಮ್​ ಬಳಿ ರಕ್ಷಕ್ ಹಾಗೂ ಭಾಗ್ಯಶ್ರೀಯವರನ್ನು ಪ್ರಶ್ನೆ ಮಾಡಿದ್ದಾರೆ. ಇನ್ನೂ ಇದೇ ವಿಷ್ಯ ವಿನಯ್​ಗೆ ಗೊತ್ತಾಗಿದೆ. ಈ ವಿಷಯವನ್ನ ಪ್ರತಾಪ್ ಬಳಿ ವಿನಯ್ ಚರ್ಚೆ ಮಾಡಿದ್ದು ನಿನ್ನ ಮಾತಿನ ಪ್ರಕಾರ ಬೇರೆಯವರು ಮಾಡಿದ್ರೆ ಏನಾಗುತ್ತಿತ್ತು.

ನಾವು ಅಂದರೆ ನಿಮ್ಮದೇ ಸಪರೇಟ್ ಗ್ರೂಪ್ ಇದ್ಯಾ ಎಂದು ಪ್ರತಾಪ್ ಹತ್ತಿರ ಮಾತಿಗಿಳಿದಿದ್ದಾರೆ. ಇದೇ ಸಮಯದಲ್ಲಿ ಕ್ಯಾಪ್ಟನ್ ರಕ್ಷಕ್ ಗೂಬೆ ಅನ್ನೋ ಪದವನ್ನ ಪ್ರತಾಪ್​ಗೆ ಬಳಸಿದ್ದರಿಂದ ಇಬ್ಬರ ನಡುವೆ ಮಾತಿನ ಸಮರ ನಡೆಯಿತು. ಈ ವೇಳೆ ನೀನು ಮನೆಯ ಕ್ಯಾಪ್ಟನ್ ಆಗಿದ್ದು ಮರ್ಯಾದೆ ಕೊಟ್ಟು ಮಾತಾಡು ಎಂದು ಪ್ರತಾಪ್ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಇಷ್ಟೆಲ್ಲ ಆದ ಬಳಿಕವೂ ನಮ್ರತಾ, ಇಶಾನಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಪ್ರತಾಪ್​ ನನ್ನ ಬಗ್ಗೆನೇ ಮಾತನಾಡುತ್ತಿದ್ದಾರೆ ಎಂದು ಭಾವಿಸಿ ನಮ್ರತಾಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನೀನು ಯಾಕೆ ಎಲ್ಲ ವಿಷ್ಯಕ್ಕೂ ಮಧ್ಯೆ ಬರುತ್ತೀಯಾ?. ಎಲ್ಲ ವಿಷಯವು ನಿನ್ನ ಬಗ್ಗೆಯೇ ಇರುತ್ತೆಂದು ಏಕೆ ಭಾವಿಸಿಕೊಳ್ಳುತ್ತೀಯಾ?. ಪಾಪ ಅಂತ ತೋರಿಸಿಕೊಳ್ಳೋಕೆ ನೀನು ಹೀಗೆಲ್ಲ ಮಾಡ್ತಿದ್ದೀಯಾ ಅಂದ್ರೆ ಅದು ನಿನ್ನ ಫೂಲಿಶ್​ನೆಸ್ ಎಂದು ಹೇಳಿದ್ದಾರೆ.

ಎಲ್ಲ ವಿಷಯವೂ ಹೋಗಿ ಬಂದು ಡ್ರೋನ್​ ಪ್ರತಾಪ್ ಕೊರಳಿಗೆ ಸುತ್ತಿಕೊಳ್ತಿದೆ. ಇಲ್ಲಿ ಪ್ರತಾಪ್ ಧ್ವನಿ ಏರಿಸಿದರು ತಪ್ಪು, ಮಾತನಾಡದೇ ಇದ್ದರೂ ತಪ್ಪೇ ಅನ್ನೋ ಹಾಗಾಗಿದೆ ಬಿಗ್ ಮನೆಯಲ್ಲಿ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಕಣ್ಣೀರಿಟ್ಟಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.