ಸುದೀಪ್ ಮುಂದೆಯೇ ಟಕ್ಕರ್ ಕೊಟ್ಟ ಹನುಮ, ಹನುಮಂತುವಿಗೆ ದುರಾಂಕರ ಎಂದ ನೆಟ್ಟಿಗರು

 | 
Jd
ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿಯಲಿದೆ. ಈ ವಾರ ಕಳೆದರೆ ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇದಕ್ಕಾಗಿ ವೇದಿಕೆ ಕೂಡ ಸಜ್ಜಾಗುತ್ತಿದೆ. ಈ ನಡುವೆ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಪ್ರೇಮ ಕತೆಯ ಚರ್ಚೆ ಶುರುವಾಗಿದೆ. ಕಿಚ್ಚ ಸುದೀಪ್ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಆ ಪ್ರೇಮ ಕತೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು...ಸ್ನೇಹಿತರೇ. ಕಲರ್ಸ್‌ ಕನ್ನಡ ವಾಹಿನಿ ಇಂದು ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಿಚ್ಚ ಸುದೀಪ್ ಅವರು ಗೋಲ್ಡ್‌ ಸುರೇಶ್ ಅವರು ಕೇಳಿದ ಪ್ರಶ್ನೆಯನ್ನೇ ಪುನ: ಭವ್ಯಾ ಗೌಡ ಅವರಿಗೆ ಕೇಳಿದ್ದು ಸಾಕಷ್ಟು ವೈರಲ್ ಆಗಿದೆ. ಬಿಗ್‌ಬಾಸ್‌ ಮನೆಯಲ್ಲಿ ಈ ಹಿಂದೆ ಈವರೆಗೂ ಒಂದಿಲ್ಲಾ ಒಂದು ಲವ್‌ ಸ್ಟೋರಿ ನಡೆದಿವೆ. ಆದರೆ ಮನೆಯಿಂದ ಹೊರ ಬಂದ ಮೇಲೆ ಅವು ಅದೆಷ್ಟು ಉಳಿದುಕೊಂಡಿವೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ.
https://www.instagram.com/reel/DE_VgY9N7R3/?igsh=MWtnZzd4Y2VwYTU4OA==
ಸ್ನೇಹಿತರೇ...ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಮತ್ತದೇ ಕತೆ ಶುರುವಾಗಿದೆ. ಇದನ್ನು ಕಿಚ್ಚ ಸುದೀಪ್ ಕೂಡ ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಕಿಚ್ಚ ಸುದೀಪ್ ಕೇಳಿದ್ದೇನು? ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ದು ನಿಜಾನಾ? ಅಥವಾ ತ್ರಿವಿಕ್ರಮ್ ಮೋಕ್ಷಿತಾ ಅವರನ್ನು ಇಷ್ಟ ಪಡುತ್ತಿದ್ದಾರಾ? ಎಲ್ಲವನ್ನೂ ಡಿಟೇಲ್ ಆಗಿ ತಿಳಿಯೋಣ.
ಸ್ನೇಹಿತರೇ...ಬಿಗ್‌ಬಾಸ್‌ ಮನೆಗೆ ಹಳೆಯ ಸ್ಪರ್ಧಿಗಳು ಬಂದಿದ್ದರು. ಆ ಸಮಯದಲ್ಲಿ ಗೋಲ್ಡ್‌ ಸುರೇಶ್ ಅವರು ಭವ್ಯಾ ಅವರಿಗೆ 'ನಿಮಗೆ ತ್ರಿವಿಕ್ರಮ್ ಪ್ರಪೋಸ್ ಮಾಡಿದ್ರಾ?' ಎಂದು ಕೇಳುತ್ತಾರೆ. ಇದಕ್ಕೆ ಭವ್ಯಾ ಗೌಡ ಸರಿಯಾಗಿ ಉತ್ತರ ಕೊಟ್ಟಿರಲಿಲ್ಲ. ಆದರೆ ಭವ್ಯಾ ಹಾಗೂ ತ್ರಿವಿಕ್ರಮ್ ನಡುವೆ ನಡೆದ ಸಂಭಾಷಣೆಯ ವೀಡಿಯೋವನ್ನು ಪ್ರಸಾರ ಮಾಡಿ ಹನುಮಂತ ಅವರಿಗೆ ಕಿಚ್ಚ ಸುದೀಪ್ ಅವರು 'ಇದರಲ್ಲಿ ನಿಮಗೆ ಅರ್ಥ ಆಗಿದ್ದೇನು?' ಪ್ರಶ್ನೆ ಮಾಡುತ್ತಾರೆ. ಆಗ ಹನುಮಂತ 'ತ್ರಿವಿಕ್ರಮ್ ಭವ್ಯಾಕ್ಕಗಾ ಐ ಲವ್‌ ಯು ಎಂದವನೆ ಸರ್' ಎಂದು ಹೇಳಿದ್ದಾರೆ
ಸ್ನೇಹಿತರೇ..ಇದೇ ವೇಳೆ ರಜತ್ ಕೂಡ, 'ಗೊತ್ತಿತ್ತು ಸರ್ ನನಗೆ. ತ್ರಿವಿಕ್ರಮ್ ಸಿಕ್ಕಾಪಟ್ಟೆ ಸಿಕ್ರೇಟ್ ಮೆಂಟೇನ್ ಮಾಡ್ತಿದ್ದ. ಆದರೆ ಈ ಲೇವಲ್‌ಗೆ ಅಂತ ಗೊತ್ತಿರಲಿಲ್ಲ' ಎಂದು ಕಾಲೆಳೆದಿದ್ದಾರೆ. ಇನ್ನೂ ಭವ್ಯಾ ಗೌಡ ಕೇಳಿದಾಗ, 'ಆತ ತರ ಏನು ಇಲ್ಲ ಸರ್' ಎಂದು ಮತ್ತದೇ ಹಳೆಯ ಡೈಲಾಗ್ ಹೊಡೆದಿದ್ದಾರೆ. ಆಗ ಕಿಚ್ಚ ಸುದೀಪ್ ಅವರು 'ಆ ತರ ಅಂದರೆ ಯಾವ ತರ' ಎಂದು ಮರು ಪ್ರಶ್ನೆ ಹಾಕುತ್ತಾರೆ.
'ತ್ರಿವಿಕ್ರಮ್ ಜೊತೆ ಗುಡ್ ವೈಬ್ ಕನೆಕ್ಷನ್ ಇದೆ ಸರ್' ಎಂದು ಭವ್ಯಾ ಹೇಳಿದಾಗ ಇಲ್ಲಿ ಕಿಚ್ಚ ಕಾಮಿಡಿಯಾಗಿ 'ಗುಡ್‌ ವೈಫ್ ಕನೆಕ್ಷನ್ ಇದಿಯಾ?' ಎಂದು ಕೇಳಿ ಕಾಲೆಳೆದಿದ್ದಾರೆ. 
ಇದಕ್ಕೆ ಮನೆ ಮಂದಿಯೆಲ್ಲಾ ಸಿಕ್ಕಾಪಟ್ಟೆ ನಗಾಡಿದ್ದಾರೆ. ಇದರಿಂದಾಗಿ ಇಂದಿನ ಸಂಚಿಕೆಯಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಪ್ರೇಮ ಕಥೆ ರಿವೀಲ್ ಆಗೋದು ಪಕ್ಕ ಆಗಿದೆ. ತ್ರಿವಿಕ್ರಮ್ ಏನು ಹೇಳಿದರು? ಇದಕ್ಕೆ ಭವ್ಯಾ ಹೇಳಿದ್ದೇನು? ಮೋಕ್ಷಿತಾ ಮೇಲೆ ತ್ರಿವಿಕ್ರಮ್‌ಗೆ ಪ್ರೀತಿ ಇದಿಯಾ? ಎಲ್ಲವನ್ನೂ ಇಂದಿನ ಸಂಚಿಕೆಯಲ್ಲಿ ತೋರಿಸಲಾಗುತ್ತದೆ. ಜೊತೆಗೆ ತ್ರಿವಿಕ್ರಮ್ ಅವರು ಭವ್ಯಾ ಗೌಡ ಅವರನ್ನು ಮನೆಯಿಂದ ಹೊರ ಬಂದ ಮೇಲೆ ಮದುವೆ ಆಗುತ್ತಾರಾ ಅಥವಾ ಬಿಗ್‌ಬಾಸ್‌ ಮನೆಯಲ್ಲೇ ಆ ವಿಚಾರವನ್ನು ಬಿಟ್ಟುಬಿಡ್ತಾರಾ ನೋಡಬೇಕಿದೆ.