ನಿವೇದಿತಾ ಗೌಡ BAR dancer ಎಂಬ ಹೊಸ‌ ಸುದ್ದಿ ಹೊರಹಾಕಿದ ಆಪ್ತ ಸ್ನೇಹಿತೆ

 | 
Jjj
ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಸಾಕು ಆ ಸ್ಟಾರ್ ಹಂಗೆ, ಈ ಸ್ಟಾರ್ ಹಿಂಗೇ ಎನ್ನುವಂತಹ ಬರಹಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರುವುದು ಸರ್ವೇ ಸಾಮಾನ್ಯ. ಚಿತ್ರರಂಗದ ತಾರೆಯರನ್ನು ಅಷ್ಟೂ ಕಾಡದೇ ಇದ್ದರೆ ಹೇಗೆ ? ಎನ್ನುವುದು ಅನೇಕರ ಆಲೋಚನೆ.
ಇನ್ನು ಇಂತಹ ಸಾಕಷ್ಟು ವಿಚಾರಗಳು ಕಣ್ಣಿಗೆ ಕಂಡಾಗ ತಮ್ಮ ಕುರಿತು ವಿವಾದಾತ್ಮಕವಾದ ಟ್ರೋಲ್ ಮಾಡಿದಾಗ ಅಥವಾ ತಮ್ಮನ್ನು ಹೀಯಾಳಿಸಿದಾಗ ಅನೇಕ ತಾರೆಯರು ಉರಿದು ಬೀಳುತ್ತಾರೆ. ಟ್ರೋಲ್ ಮಾಡಿದವರ ವಿರುದ್ದ, ಕಾಲೆಳದೆವರ ವಿರುದ್ದ, ಮನಸೋ ಇಚ್ಚೆ ಕಾಮೆಂಟ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದಲ್ಲದೇ ಕೆಲವರು ಕಾನೂನಿನ ಮೊರೆ ಹೋಗುತ್ತಾರೆ. ಸೈಬರ್ ಕ್ರೈಮ್ ಅಡಿ ಪ್ರಕರಣವನ್ನು ಕೂಡ ದಾಖಲಿಸುತ್ತಾರೆ. ಆದರೆ ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಕ್ಕೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಉದಾಹರಣೆಗೆ ನಿವೇದಿತಾ ಗೌಡ.
ಇಂಥಾ ನಿವೇದಿತಾ ಗೌಡ ಈಗ ಅಪರೂಪಕ್ಕೆ ತಮ್ಮನ್ನು ಹೀಯಾಳಿಸಿದವರಿಗೆ ಉತ್ತರ ನೀಡಿದ್ದಾರೆ. ತಮ್ಮ ಗಳಸ್ಯ ಕಂಠಸ್ಯ ಸ್ನೇಹಿತೆ ವಾಣಿಶ್ರೀ ಜೊತೆ ಕುಂತು ಕಾಮೆಂಟ್ ಓದಿದ್ದಾರೆ. ಆದಕ್ಕೆ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ. ಹೌದು ಅಸಲಿಗೆ ನಿವೇದಿತಾ ಗೌಡ ಅವರಿಗೆ ಯಾರೋ ಒಬ್ಬರು ಆವರೇಜ್ ಬಾರ್ ಡ್ಯಾನ್ಸರ್ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ನಿವೇದಿತಾ ಗೌಡ ಉತ್ತರ ನೀಡಿಲ್ಲ ಬದಲಿಗೆ ಆ ಕಾಮೆಂಟ್ ಓದಿದ್ದಾರೆ. ಆ ನಂತರ ರಂಗ ಪ್ರವೇಶ ಮಾಡುವ ಅವರ ಸ್ನೇಹಿತೆ ವಾಣಿಶ್ರೀ ಆವರೇಜ್ ಅಲ್ಲ ಅತ್ಯುತ್ತಮ ಬಾರ್ ಡ್ಯಾನ್ಸರ್ ಎಂದು ಇಂಗ್ಲೀಷ್ ನಲ್ಲಿ ನುಲಿದಿದ್ದಾರೆ. ಸ್ನೇಹಿತೆಯ ಮಾತನ್ನು ಕೇಳಿ ನಿವ್ವಿ ನಕ್ಕಿದ್ದಾರೆ.
ಆ ನಂತರ ಮುಂದುವರೆಸುವ ನಿವೇದಿತಾ ನಿಮಗೆ ಈ ತರ ಡ್ಯಾನ್ಸ್ ಮಾಡಲು ನಾಚಿಕೆಯಾಗಲ್ವಾ ಎಂಬ ಕಾಮೆಂಟ್ ಓದಿದ್ದಾರೆ. ಇದಕ್ಕೆ ವಾಣಿಶ್ರೀ ಇಲ್ಲ ಅಂದಿದ್ದಾರೆ. ಆ ನಂತರ ನಿವೇದಿತಾ ನೋ..ವೈ.ಯಾಕೆ ಎಂಬ ಪ್ರಶ್ನೆ ಕೇಳಿದ್ದಾರೆ. ಆ ನಂತರ ನನಗೆ ನೀನು ಬೇಕು, ನಿನ್ನಂತಹ ಸಂಗಾತಿಯ ಅವಶ್ಯಕತೆ ನನಗೆ ಇದೆ ಎನ್ನುವ ಮತ್ತೊಂದು ಕಾಮೆಂಟ್ ನ ನಿವೇದಿತಾ ಓದುತ್ತಾರೆ. ಈ ಸಲ ವಾಣಿಶ್ರೀಗೆ ಮಾತನಾಡುವ ಅವಕಾಶ ಕೊಡದೇ ಇವಳೇ ನನ್ನ ಪಾರ್ಟನರ್ ಇವಳನ್ನು ನನ್ನಿಂದ ಕದಿಯಲು ಯಾರಿಂದ ಕೂಡ ಸಾಧ್ಯ ಇಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.