ಈ‌ ಊರೇ ಬಿಟ್ಟು ಪರಾರಿಯಾದ ನಿವೇದಿತಾ ಗೌಡ ಕುಟುಂಬ? ಬೆಚ್ಚಿಬಿ ದ್ದ ಜ ನ

 | 
Hu

ಕನ್ನಡದ ಸಂಗೀತ ನಿರ್ದೇಶಕ, ನಟ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ನಡುವೆ ಬಿರುಕು ಮೂಡಿದ್ದು, ದಾಂಪತ್ಯ ಜೀವನ ಮುರಿದುಬಿದ್ದಿದೆ. ಪರಸ್ಪರ ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇದೀಗ ದೂರಾಗಿದ್ದಾರೆ. ಇಬ್ಬರ ಒಪ್ಪಿಗೆಯ ಮೇರೆಗೆ ಚಂದನ್ ಶೆಟ್ಟಿ - ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ.

ಕಳೆದ ಒಂದು ವರ್ಷಗಳಿಂದ ಕಾಯ್ದುಕೊಂಡಿದ್ದ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ಜೂನ್‌ 06 ಗುರುವಾರ ವಿಚ್ಛೇದನಕ್ಕಾಗಿ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ಗೆ ತೆರಳಿದ್ದರು. ಶುಕ್ರವಾರ ಕೋರ್ಟ್ ವಿಚ್ಛೇದನವನ್ನು ಕೂಡ ಮಂಜೂರು ಮಾಡಿದೆ. ಡಿವೋರ್ಸ್‌ ಬಳಿಕ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ತಿಳಿಸಿದ್ದರು.

ತಮ್ಮ ಖಾಸಗಿ ಜೀವನ ಗೌರವಿಸುವಂತೆ ಮನವಿ ಮಾಡಿದ್ದರು. ಇತ್ತ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ವಿಚ್ಛೇದನ ಸುದ್ದಿ ವೈರಲ್‌ ಆಗುತ್ತಿದ್ದಂತೆ ನಿವೇದಿತಾ ಗೌಡ ಅವರ ಮನೆ ಖಾಲಿಯಾಗಿದೆ. ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿ ನಿವೇದಿತಾ ಗೌಡ ಫ್ಯಾಮಿಲಿ ವಾಸವಿದ್ದು, ಘಟನೆ ಬಳಿಕ ಕುಟುಂಬಸ್ಥರು ಮನೆಯಿಂದ ಹೊರಗೆ ಹೋಗಿದ್ದಾರೆ. ಮಾಹಿತಿ ಪ್ರಕಾರ ಗುರುವಾರದಿಂದ ಮನೆಗೆ ಬೀಗ ಹಾಕಿದ್ದಾರೆ ಎನ್ನಲಾಗುತ್ತಿದೆ.

ನಿವೇದಿತಾ ತಂದೆ ರಮೇಶ್, ತಾಯಿ‌ ಹೇಮ ಗುರುವಾರ ಮಧ್ಯಾಹ್ನದವರಗೆ ಮನೆಯಲ್ಲಿದ್ದರು. ಆದರೆ ಮಧ್ಯಾಹ್ನದ ಬಳಿಕ ಮನೆಗೆ ಬೀಗ ಹಾಕಿದ್ದಾರೆ. ಸದ್ಯ ನಿವೇದಿತಾ ಕುಟುಂಬದವರು ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೇ ಆಪ್ತರ ಕರೆಗೂ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಮೊಬೈಲ್‌ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.