ಗೌರಿ' ಸಿನಿಮಾ ನೋಡಲು ಬೆಳ್ಳಿ ಬೊಂಬೆಯಂತೆ ರೆಡಿಯಾಗಿ ಬಂದ ನಿವೇದಿತಾ ಗೌಡ
Aug 17, 2024, 16:17 IST
|
ಇಂದ್ರಜಿತ್ ಲಂಕೇಶ್ ನಿರ್ದೇಶನದ, ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಅಯ್ಯರ್ ನಾಯಕ-ನಾಯಕಿಯಾಗಿರುವ ಚಿತ್ರ ‘ಗೌರಿ’ ಇಂದು ಬಿಡುಗಡೆಯಾಗಿದೆ. ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್ ಲಂಕೇಶ್ ನನ್ನು ಗೌರಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದಾರೆ. 2017 ರಲ್ಲಿ ಬೆಂಗಳೂರಿನಲ್ಲಿ ಗುಂಡಿಕ್ಕಿ ಹತ್ಯೆಯಾದ ಅವರ ಹಿರಿಯ ಸಹೋದರಿ, ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ.
ಇದಾಗಲೇ ಇಂದ್ರಜಿತ್ ಅವರು ಗೌರಿಗೆ ಹೃದಯಸ್ಪರ್ಶಿಯಾಗಿ ಹಾಡೊಂದನ್ನು ಅರ್ಪಿಸಿದ್ದರು. ಕಳೆದ ಸೋಮವಾರ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇಂದು ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೋ ಎಂದು ನೋಡಬೇಕಿದೆ. ಈ ಚಿತ್ರವನ್ನು ವೀಕ್ಷಿಸಲು ಕೆಲವು ಸೆಲೆಬ್ರಿಟಿಗಳು ಚಿತ್ರಮಂದಿರಕ್ಕೆ ಹೋಗಿದ್ದಾರೆ.
ಅದರಂತೆಯೇ ಬಿಗ್ಬಾಸ್ ಖ್ಯಾತಿಯ, ಚಂದನ್ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಕೂಡ ಗೌರಿ ಸಿನಿಮಾ ನೋಡಲು ಹೋಗಿದ್ದು, ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ಎಂದಿನಂತೆ ನಿವೇದಿತಾ ಮಿಂಚುತ್ತಿದ್ದಾರೆ. ಆದರೆ ಇದೀಗ ಅವರು ಹೆಚ್ಚಾಗಿ ಷಾರ್ಟ್ ಡ್ರೆಸ್ಗಳಿಗೆ ಹೆಚ್ಚು ಗಮನ ಕೊಡುತ್ತಿರುವ ಕಾರಣ, ಅಂಥದ್ದೇ ಒಂದು ಡ್ರೆಸ್ನಲ್ಲಿ ಸಿನಿಮಾಕ್ಕೆ ಹೋಗಿದ್ದಾರೆ. ಆದರೆ ಅದ್ಯಾಕೋ ಡಿವೋರ್ಸ್ ನಂತರ ನಿವೇದಿತಾ ಅವರನ್ನು ಕೆಲವರು ನೋಡುವ ದೃಷ್ಟಿಯೇ ಬೇರೆಯಾದಂತಿದೆ.
ಡಿವೋರ್ಸ್ಗೂ ಮುನ್ನ ಕೆಟ್ಟ ಕಮೆಂಟ್ ಮಾಡುತ್ತಿದ್ದವರು ಬಹಳ ಮಟ್ಟದಲ್ಲಿ ಇದ್ದರೂ, ಚಂದನ್ ಶೆಟ್ಟಿ ಅವರಿಗೆ ಡಿವೋರ್ಸ್ ನೀಡಿದ ಬಳಿಕ, ಈ ಕಮೆಂಟ್ಸ್ಗಳೆಲ್ಲಾ ಬೇರೆ ದಿಕ್ಕಿಗೇ ತಿರುಗುತ್ತಿವೆ. ಈಗಲೂ ನಿವೇದಿತಾ ಅವರ ಓಪನ್ ಡ್ರೆಸ್ ಕುರಿತು ಸಾಕಷ್ಟು ಟ್ರೋಲ್ ಮಾಡಲಾಗಿದ್ದು, ನೀನು ಮೊದ್ಲು ಅಂಗಡಿ ಮುಚ್ಚಿಕೋ, ಆಮೇಲೆ ನಗುವಿಯಂತೆ ಎಂದು ಹೇಳುತ್ತಿದ್ದಾರೆ.
ಇದಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಡಿವೋರ್ಸ್ ಬಳಿಕ ನಿವೇದಿತಾ ದಿನಕ್ಕೊಂದರಂತೆ ಸೆಕ್ಸಿ ಡ್ರೆಸ್ನಲ್ಲಿ ರೀಲ್ಸ್ ಮಾಡುತ್ತಿದ್ದಾರೆ. ಹಿಂದೊಮ್ಮೆ ಈಕೆಯನ್ನು ಕನ್ನಡದ ಬೆತ್ತಲೆರಾಣಿ ತೃಪ್ತಿ ಡಿಮ್ರಿ ಎಂದು ಹೋಲಿಸಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.