ನೆಚ್ಚಿನ ರಘು ಇನ್ನ್ ಇಲ್ಲ, ಕಣ್ಣೀರಿಟ್ಟ ಕುಟುಂಬಸ್ಥರು

 | 
Jhhdhe

ಖ್ಯಾತ ಆಹಾರ ತಜ್ಞ ಕೆ.ಸಿ ರಘು ಅವರು ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕ್ಕವಯಸ್ಸಿನಲ್ಲಿಯೇ ನಿಧನ ಹೊಂದಿರುವುದು ಹಲವಾರು ಜನರಲ್ಲಿ ಬೇಸರ ತರಿಸಿದೆ. ಈ ಬಗ್ಗೆ ಫೇಸ್​ಬುಕ್​ನಲ್ಲಿ​ ಮಾಹಿತಿ ಹಂಚಿಕೊಂಡಿರುವ ರಘು ಅವರ ಪತ್ನಿ ಆಶಾ ಅವರು, ನನ್ನ ಪತಿ ಇಂದು ಬೆಳಗಿನ ಜಾವ ಸುಮಾರು 7.30ಕ್ಕೆ ನಮ್ಮನ್ನು ಅಗಲಿದ್ದಾರೆ. 

ಅವರು ಲಂಗ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಆರೋಗ್ಯದ ವಿಚಾರದಲ್ಲಿ ಅಪಾರ, ಅತ್ಯದ್ಭುತ ಜ್ಞಾನ ಹೊಂದಿದ್ದ ಅವರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಕೆ.ಸಿ. ರಘು ಆಹಾರ ವಿಚಾರದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿದ್ದವರಾದ್ದರಿಂದ ವಿವಿಧ ಟಿವಿ ವಾಹಿನಿಗಳ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 

ಹಲವು ವಾಹಿನಿಗಳಿಗೆ ಸರಣಿ ಕಾರ್ಯಕ್ರಮಗಳನ್ನು ಮಾಡಿಕೊಟ್ಟಿದ್ದರು. ಪತ್ರಿಕೆಗಳಿಗೆ ಅಂಕಗಣಗಳನ್ನು ಬರೆಯುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಹಾರದ ಕುರಿತು ಅವರ ಹಲವು ವಿಡಿಯೋಗಳಿವೆ. ಫುಡ್ ಎಂಡ್ ನ್ಯೂಟ್ರೇಷನ್ ವರ್ಡ್‌ ಎಂಬ ಆಂಗ್ಲ ನಿಯತಕಾಲಿಕೆಗೆ ಡಾ. ಕೆ. ಸಿ. ರಘು ಸಂಪಾದಕರಾಗಿದ್ದರು. ಸಾಮಾನ್ಯ ಜ್ಞಾನ, ಆರ್ಥಿಕತೆ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. 

ಕೇಂದ್ರ ಮತ್ತು ರಾಜ್ಯ ಬಜೆಟ್ ಸಂದರ್ಭದಲ್ಲಿ ಟಿವಿ ವಾಹಿನಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.
ಡಾ. ಕೆ. ಸಿ. ರಘು ಲೇಖಕರಾಗಿದ್ದರು. ತುತ್ತು ತತ್ವ, ಆಹಾರ ರಾಜಕೀಯ, ರಸ ತತ್ವ ಸೇರಿದಂತೆ ಅನೇಕ ಕೃತಿಗಳನ್ನು ಅವರು ಬರೆದಿದ್ದಾರೆ. ಪ್ರಿಸ್ಟೀನ್ ಅರ್ಗಾನಿಕ್ಸ್‌ ಎಂಬ ಸಂಸ್ಥೆಯನ್ನು ಅವರು ಮಕ್ಕಳಿಗೆ ಕಂಡುಬರುವ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಸಂಶೋಧನೆ ನಡೆಸಲು ಸ್ಥಾಪಿಸಿದ್ದರು.

ರಘು ವಯಸ್ಸಲ್ಲದ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಆಹಾರ ವಿಚಾರದಲ್ಲಿ ಸಾಕಷ್ಟು ಸ್ಪಷ್ಟ ಮಾಹಿತಿ ನೀಡುತ್ತಿದ್ದ ರಘು ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.