ರಾಘು ಮಗನ ಪರಿಸ್ಥಿತಿ ಯಾರಿಗೂ ಬೇಡ, ಸ್ವಂತ ತಾಯಿಯ ಕೊನೆಯ ದರ್ಶನ

 | 
Nd

ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆ ನಿನ್ನೆ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು. ಈಡಿಗ ಪದ್ಧತಿಯಂತೆ ಸ್ಪಂದನಾ ಅವರ ಅಂತ್ಯಕ್ರಿಯೆ ಮಾಡಲಾಯಿತು. ಪತ್ನಿಯ ಅಂತಿಮ ವಿದಾಯದ ವೇಳೆ ವಿಜಯ ರಾಘವೇಂದ್ರ ಭಾವುಕರಾದರು. ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಬ್ಯಾಂಕಾಕ್‌ನಿಂದ ಎಲ್ಲಾ ಪ್ರಕ್ರಿಯೆ ಮುಗಿಸಿ ನಿನ್ನೆ ತಡರಾತ್ರಿ ಸ್ಪಂದನಾ ಮೃತದೇಹ ತರಲಾಯಿತು. 

ಸ್ಪಂದನಾ ತಂದೆ ಬಿ.ಕೆ ಶಿವರಾಂ ಮನೆಯಲ್ಲಿ ಅಂತಿಮ ನಮನಕ್ಕೆ ಸಿದ್ಧತೆ ಮಾಡಲಾಗಿತ್ತು. ಸಿನಿಮಾ ರಂಗದ ಗಣ್ಯರು, ಆಪ್ತರು, ರಾಜಕೀಯ ಗಣ್ಯರು ಸ್ಪಂದನಾರ ಅಂತಿಮ ದರ್ಶನ ಪಡೆದರು. ಮಧ್ಯಾಹ್ನ 3ರ ಬಳಿಕ ಮಲ್ಲೇಶ್ವರಂ ನಿವಾಸದಿಂದ ಹರಿಶ್ಚಂದ್ರ ಘಾಟ್‌ವರೆಗೂ ಸ್ಪಂದನಾರ ಅಂತಿಮ ಯಾತ್ರೆ ಮಾಡಲಾಯಿತು. ಬಳಿಕ ಈಡಿಗ ಸಂಪ್ರದಾಯದಂತೆ ಸ್ಪಂದನಾ ಅಂತ್ಯ ಸಂಸ್ಕಾರ ಮಾಡಲಾಗಿದೆ. 

ಪತಿ ರಾಘು- ಪುತ್ರ ಶೌರ್ಯ ಸ್ಪಂದನಾರ ಅಂತಿಮ ಕಾರ್ಯವನ್ನ ಸಲ್ಲಿಸಿದ್ದಾರೆ. ಕಳೆದ ಒಂದು ವಾರದಿಂದ ಸ್ಪಂದನಾ ಸೋದರ ಸಂಬಂಧಿಗಳ ಜೊತೆ ಬ್ಯಾಂಕಾಕ್ ಪ್ರವಾಸದಲ್ಲಿದ್ದರು. ಭಾನುವಾರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ರಾತ್ರಿ ಮಲಗಿದವರು ಎದ್ದೇಳಲಿಲ್ಲ ಎನ್ನುವ ಮಾಹಿತಿಯನ್ನು ನಟ ಶ್ರೀಮುರಳಿ ನೀಡಿದ್ದರು. ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆಯೇ ಭಾನುವಾರ ರಾತ್ರಿಯೇ ವಿಜಯ ರಾಘವೇಂದ್ರ ಬ್ಯಾಂಕಾಕ್‌ಗೆ ತೆರಳಿದ್ದರು.ಒಟ್ಟಿನಲ್ಲಿ ಚಿನ್ನಾರಿ ಮುತ್ತುವಿನ ಮುತ್ತೇ ಇಲ್ಲದಂತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.