ನನ್ನ personal ವಿಚಾರ ಬ್ಯಾಂಕ್ ಜನಾರ್ದನ್ ಅವರಿಗೆ ಮಾತ್ರ ಗೊತ್ತಿತ್ತು; ನಟಿ ರೇಖಾ ದಾಸ್

 | 
Nmk
ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಕೆಲವು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರುವರೆ ನಾಲ್ಕು ದಶಕಗಳ ಕಾಲ ನಟಿಸಿ, ಪ್ರೇಕ್ಷಕರನ್ನು ರಂಜಿಸಿದ ಹೆಗ್ಗಳಿಕೆ ಇವರದ್ದು, ಪೋಷಕ ಕಲಾವಿದನಾಗಿ, ಹಾಸ್ಯ ನಟನಾಗಿ, ಖಳನಟನಾಗಿ ಬ್ಯಾಂಕ್ ಜನಾರ್ಧನ್ ಅವರಿಗೆ ಮಿಂಚಿದ್ದರು. ಇವುಗಳಲ್ಲಿ ಹಾಸ್ಯ ಪಾತ್ರ ಸಿನಿಪ್ರಿಯರಿಗೆ ಹೆಚ್ಚು ಇಷ್ಟವಾಗಿದ್ದವು.
ಅಷ್ಟಕ್ಕೂ ಬ್ಯಾಂಕ್ ಜನಾರ್ಧನ್ ಹಾಸ್ಯ ಪಾತ್ರ ಅಂದಕೂಡಲೇ ಮೊದಲು ನೆನಪಾಗೋದು ಹಿರಿಯ ನಟಿ ರೇಖಾ ದಾಸ್. ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಕ್ಲಿಕ್ ಆಗಿತ್ತು. ಅಪ್ಪ ಮಗಳಾಗಿ, ಗಂಡ ಹೆಂಡ್ತಿಯಾಗಿ, ಬ್ಯಾಂಕ್ ಜನಾರ್ಧನ್ ಅವರೊಂದಿಗೆ ಸುಮಾರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ರೇಖಾ ದಾಸ್ ನಟಿಸಿದ್ದಾರೆ. ರಿಯಲ್ ಲೈಫ್‌ನಲ್ಲೂ ಇವರದ್ದು ತಂದೆ ಮಗಳ ಸಂಬಂಧವೇ ಇತ್ತು. ತಂದೆ ಸಮಾನರಾಗಿದ್ದ ಬ್ಯಾಂಕ್ ಜನಾರ್ಧನ್ ಅವರನ್ನು ಕಳೆದುಕೊಂಡು ರೇಖಾ ದಾಸ್ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಕಣ್ಣೀರು ಹಾಕಿದ್ದಾರೆ
ಅವರು ತೀರಿ ಹೋದ ವಿಷಯ ನನಗೆ ಗೊತ್ತೇ ಇರಲಿಲ್ಲ. ಹಿಂದಿನ ದಿನವೇ ಶೃಂಗೇರಿಗೆ ಹೊರಟಿದ್ದೆ ನಾನು. ಅಲ್ಲಿಗೆ ನಾನು ಐದೂವರೆಗೆ ರೀಚ್ ಆದೆ. ಅಲ್ಲಿ ನನಗೆ ಮೂರು ಗಂಟೆ ರೆಸ್ಟ್ ತಗೊಳ್ಳಿ ಆಮೇಲೆ ನಾನು ಹೇಳುತ್ತೇನೆ ಅಂದಿದ್ದರು. ನಾನು ಮಲಗಿದ್ದೆ. ಆಗ ಹಿರಿಯ ನಟಿ ಸಿತಾರಾ ಒಂದು ನ್ಯೂಸ್ ಇದೆ ಅಂತ ಎಬ್ಬಿಸಿದ್ದಳು. ಏನಾಯ್ತು ಅಂತ ಕೇಳಿದಾಗ, ನಿಮ್ಮ ಪಪ್ಪಾ ಹೊರಟು ಹೋದರಂತೆ ಅಂದಳು. ಅದನ್ನು ಹೇಳಿದಾಗ ತಲೆ ಮೇಲೆ ಬಂಡೆ ಬಿದ್ದ ಹಾಗೆ ಆಯ್ತು. ನ್ಯೂಸ್ ನೋಡುತ್ತಿದ್ದೆ. ಅದನ್ನು ಕನ್ಫರ್ಮ್ ಮಾಡಿಕೊಳ್ಳುವ ಮುನ್ನವೇ ಕರೆಗಳು ಬರುವುದಕ್ಕೆ ಶುರುವಾಗಿತ್ತು. ನನಗೆ ಏನು ಹೇಳಬೇಕು ಅಂತಾನೇ ಗೊತ್ತಾಗಲಿಲ್ಲ.ಪೋಷಕ ಕಲಾವಿದರ ಸಂಘಕ್ಕೆ ಫೋನ್ ಮಾಡಿದಾಗ ನಿಮ್ಮ ಪೊಪ್ಪ ಹೋಗ್ಬಿಟ್ರು. ಅದಾಗ ನನಗೆ ಜೋರಾಗಿ ಅಳು ಬಂತು. ಅಲ್ಲಿ ಶೂಟಿಂಗ್ ಮಾಡುತ್ತಿದ್ದವರೆಲ್ಲ ಓಡಿ ಬಂದರು. ಸಮಾಧಾನ ಮಾಡಿಕೊಳ್ಳಿ. ಟಿವಿಯವರೊಂದಿಗೆ ಮಾತಾಡಿ ಅಂತ ಹೇಳಿದರು. ನನಗೆ ಅವರ ಬಗ್ಗೆ ಏನು ಹೇಳುವುದು? ನನಗೆ ಏನು ಮಾತಾಡಬೇಕು ಅಂತಾನೇ ಗೊತ್ತಾಗಲಿಲ್ಲ.
ನಾನು ಮೊದಲನೇ ಸಿನಿಮಾ ಮಾಡುವಾಗ ಚಿಕ್ಕ ಹುಡುಗಿ. ನನಗೆ 16 ವರ್ಷ. ಪಂಜರದ ಗಿಳಿ ಅಂತ ಒಂದು ಸಿನಿಮಾ ಬಂತು. ಆ ಸಿನಿಮಾದಲ್ಲಿ ನನ್ನ ತಂದೆ ಪಾತ್ರವನ್ನು ಬ್ಯಾಂಕ್ ಜನಾರ್ಧನ್ ಅವರು ಮಾತಾಡಿದ್ದರು. ಆ ಸಿನಿಮಾ ಅಪ್ಪ ಅಂತ ಕರೆದಿದ್ದು. ಕೊನೆಯವರೆಗೂ ತಂದೆಯಂತೆಯೇ ಇದ್ದರು ಅವರು. ನಾನು ನಿನ್ನನ್ನು ದತ್ತು ತೆಗೆದುಕೊಳ್ಳುತ್ತೇನೆ ಅಂತ ಹೇಳುತ್ತಿದ್ದರು. ಆ ದಿನದಿಂದ ನಾವಿಬ್ಬರೂ ಸುಮಾರು 100 ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದೀವಿ. 
ನನ್ನ ಜೀವನದ ಕೆಲವು ರಹಸ್ಯಗಳು, ವೈಯಕ್ತಿಕ ಸಮಸ್ಯೆಗಳು ಅದು ಅವರಿಗೆ ಬಿಟ್ಟರೆ, ಬೇರೆ ಯಾರಿಗೂ ಗೊತ್ತಿಲ್ಲ. ಅದು ಅವರಲ್ಲಿಯೇ ಹೊರಟು ಹೋಯ್ತು. ಅವರು ಹೇಳಿದ್ದರು. ನಾನು ಬದುಕಿರುವವರೆಗೂ ನನ್ನಲ್ಲಿ ಇರುತ್ತೆ. ನಾನು ಸತ್ತಾಗ ನನ್ನಲ್ಲೇ ಹೊರಟು ಹೋಗುತ್ತೆ ಅಂತ. ಆ ರೀತಿ ಇದ್ವಿ ನಾವು. ಕಷ್ಟ ಸುಖವನ್ನು ಹಂಚಿಕೊಳ್ಳುತ್ತಿದ್ವಿ. ಎಂದು ಹಿರಿಯ ನಟಿ ರೇಖಾ ದಾಸ್ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub