ನಮ್ಮೆಲ್ಲರ ಅಚ್ಚುಮೆಚ್ಚಿನ ಧನುಷ್ ಪರಲೋಕ, ಅಪ್ಪು ಬೆನ್ನಲ್ಲೇ ಮತ್ತೊಂದು ‌ಬಿರುಗಾಳಿ

 | 
Bx

ಜವರಾಯನ ಕೆಂಗಣ್ಣು ಚಿತ್ರಕಲಾವಿದರಮೇಲೆ ಬಿದ್ದಂತಿದೆ. ಒಬ್ಬರಾದಮೇಲೆ ಒಬ್ಬರು ನಮ್ಮನ್ನಗಲಿ ಬಾರದ ಲೋಕಕ್ಕೆ ಪಾಯಣಬೆಳೆಸುತ್ತಲೇ ಇದ್ದಾರೆ ಹೌದು ಇತ್ತೀಚಿಗೆ ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಧನುಷ್  ಅನಾರೋಗ್ಯದಿಂದ ನಿಧನರಾಗಿದ್ದಾರೆ. ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೇ, ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿ ಆಗದೇ ಕೆಲ ದಿನಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ.

ಬಾಗಲಕೋಟೆ  ಜಿಲ್ಲೆಯ ಕೋಡಿಹಾಳ ಗ್ರಾಮದವರಾಗಿದ್ದ ಶ್ರೀಮುತ್ತುರಾಜ್  ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು. ಪ್ಯಾರ್ ಕಾ ಗೋಲ್ಗುಂಬಜ, ಸ್ನೇಹಿತ, ಶಿವರಾಜ್ ಕುಮಾರ್ ನಟನೆಯ ಲೀಡರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ಪ್ರಮುಖ ಪಾತ್ರಗಳಲ್ಲಷ್ಟೇ ಅಲ್ಲ, ಇತರ ಸ್ಟಾರ್ ನಟರ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಅಗಲಿದ ಧನುಷ್ ಅವರ ಮೃತದೇಹವನ್ನು ಅವರ ಊರಿಗೆ ಕೊಂಡೊಯ್ದು ಹುಟ್ಟೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಗಲಿದ ನಟನಿಗೆ ಸಿನಿಮಾ ತಂಡಗಳು ಹಾಗೂ ಅವರ ಸ್ನೇಹಿತರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಕೆಲ ವರ್ಷಗಳಿಂದ ಚಿತ್ರರಂಗಕ್ಕೆ ಶಾಕ್​ ಮೇಲೆ ಶಾಕ್​  ಎದುರಾಗುತ್ತಿದೆ. ಹಲವಾರು ಯುವ ನಟರು ಸಾವಿನ ಹಾದಿ ತುಳಿದಿದ್ದಾರೆ. ಹೃದಯಾಘಾತ, ಚಿತ್ರೀಕರಣದ ವೇಳೆ ಅನಾಹುತ, ವಾಹನ ಅಪಘಾತ. ಹೀಗೆ ಹಲವಾರು ಕಾರಣಗಳಿಂದ ಹಲವಾರು ನಟರು ಪ್ರಾಣ ಬಿಡುವ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಚಿತ್ರರಂಗದ ಶೂಟಿಂಗ್​ ವೇಳೆ ಹಲವಾರು ಅಪಘಡಗಳು ಸಂಭವಿಸಿದ ನಟ, ನಟಿಯರು ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಅಥವಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳು ಕೂಡ ಹೆಚ್ಚಾಗುತ್ತಲೇ ಸಾಗಿವೆ.ಒಟ್ಟಿನಲ್ಲಿ  ಬಾಳಿ ಬದುಕಬೇಕಾಗಿದ್ದ ಯುವ ಪ್ರತಿಭೆ ಧನುಷ್ ಸಾವು ನಿಜಕ್ಕೂ ಬೇಸರ ಮೂಡಿಸಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) 
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.