ಶಾಲೆಯ ಪ್ರಾಂಶುಪಲನ ಕೆಲಸಕ್ಕೆ ಕಣ್ಣೀರಿಟ್ಟ ಪೋಷಕರು, ಕಂಗಾಲಾದ ಪ್ರಜೆಗಳು
ಬೇಲಿಯೇ ಎದ್ದು ಹೊಲವ ಮೇದರೆ ಏನಾಗಬಹುದು ಹೌದು ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲನೇ ಅತ್ಯಾಚಾರ ಮಾಡಿರುವ ಅಮಾನುಷ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಗುಂಜೂರಿನ ಶಾಲೆಯೊಂದರಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ವರ್ತೂರು ಪೊಲೀಸ್ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಶಾಲೆಯಿಂದ ವಿದ್ಯಾರ್ಥಿನಿ ಮನೆಗೆ ವಾಪಸ್ ಆದ ಸಂದರ್ಭದಲ್ಲಿ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಾಲಕಿಯ ತಾಯಿ ಆಕೆಯಗೆ ಸ್ನಾನ ಮಾಡಿಸಿದ ವೇಳೆ ರಕ್ತದ ಕಲೆಗಳು ಕಂಡು ಬಂದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ಈ ವೇಳೆ ಬಾಲಕಿಯ ಮೇಲೆ ನೀಚ ಕೃತ್ಯ ಎಸಗಿರುವುದು ಪೋಷಕರಿಗೆ ತಿಳಿದು ಬಂದಿದೆ.
ಸದ್ಯ ವರ್ತೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇನ್ನೂ, ಗುಂಜೂರು ಸಮೀಪದ ಖಾಸಗಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ 10 ವರ್ಷದ ಮಗು ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದಳು.ಅದನ್ನೇ ದಾಳವಾಗಿ ಬಳಸಿ ಖಾಸಗಿ ಶಾಲೆಯ ಪ್ರಿನ್ಸಿಪಲ್ ಹಾಗೂ ಶಾಲೆಯ ಸಂಸ್ಥಾಪಕ ಪುಷ್ಪರಾಜ್ ಕೃತ್ಯ ಎಸಗಿದ್ದಾನೆ.
ಶಾಲೆಗೆ ಹೋದಾಗ ಬಾಲಕಿಯ ಮೇಲೆ ರೇಪ್ ಮಾಡಿದ್ದಾನೆ. ಶಾಲೆಯ ಪಕ್ಕದಲ್ಲೇ ಆತನ ಮನೆ ಇದೆ, ಅಲ್ಲಿಗೆ ಕರೆದೊಯ್ದು ಕೃತ್ಯ ಎಸಗಿದ್ದಾನೆ. ಪ್ರಾಥಮಿಕ ತನಿಖೆ ವೇಳೆ ಘಟನೆ ನಿಜ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.