ಅವಸರದಲ್ಲಿ ಮದುವೆ ಮಾಡಿಸಿದ ಪೋಷಕರು; ಇವತ್ತು ನ ಟಿಯ ಅವತಾರವೇ ಬೇರೆ
Sep 7, 2024, 11:58 IST
|
ಚಿಕ್ಕಮಗಳೂರಿನ ಬೆಡಗಿ ಶರ್ಮಿತಾ ಗೌಡ ಇಂದು ಕನ್ನಡ ಕಿರುತೆರೆಯ ಸುಂದರ ವಿಲನ್. ಗೀತಾ ಧಾರಾವಾಹಿಯಲ್ಲಿ ಭಾನುಮತಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ಇವರು, ಕಣ್ಣಿನಲ್ಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಗನನ್ನು ಪ್ರೀತಿ ಮಾಡುತ್ತಿದ್ದಾರೋ ಅಥವಾ ಇದರ ಹಿಂದೆ ಬೇರೆಯದ್ದೇ ಆದ ದ್ವೇಷ ಇದೆಯೋ ಅದಕ್ಕೆಲ್ಲ ಉತ್ತರ ಸಿಗಬೇಕಿದೆ. ಶರ್ಮಿತಾ ನಟನೆಗೂ ಬರುವ ಮುನ್ನ ಏನು ಮಾಡುತ್ತಿದ್ದರು? ಧಾರಾವಾಹಿ ಲೋಕ ಹೇಗಿದೆ? ಹೇಗೆ ಅವರು ನಟನೆ ಕಲಿತರು ಎಂಬ ಪ್ರಶ್ನೆಗಳಿಗೆ ಉತ್ತರ ದೊರಕಿದೆ.
ಎಂಎಸ್‌ಸಿ ಬಯೋಕೆಮಿಸ್ಟ್ರಿ ಗೋಲ್ಡ್ ಮಿಡಲಿಸ್ಟ್ ನಾನು. ಬಿಎಸ್‌ಸಿಯಲ್ಲೂ ಗೋಲ್ಡ್ ಮೆಡಲಿಸ್ಟ್ ನಾನು. ಹೀಗಾಗಿ ನ್ಯೂಟ್ರಿಶಯನಿಸ್ಟ್ ಆಗಿ ಕೆಲಸ ಮಾಡಿದೆ. ನನ್ನ ಸ್ನೇಹಿತರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಹೇಳುತ್ತಿದ್ದರು. ಆಮೇಲೆ ಸೋಶಿಯಲ್ ಮೀಡಿಯಾದಲ್ಲಿ ನಾನು ಫೋಟೋಗಳನ್ನು ಹಾಕಿದ್ದೆ. ಶಾಲಾ-ಕಾಲೇಜಿನಲ್ಲಿ ನಾನು ಓದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದೆ. ಒಮ್ಮೆ ವಿನು ಬಳಂಜ ಅವರು 'ಜಾನಕಿ ರಾಘವ' ಆಡಿಶನ್‌ಗೆ ಕರೆದರು. ಹೀಗೆ ಪ್ರಯತ್ನ ಮಾಡೋಣ ಅಂತ ಟ್ರೈ ಮಾಡಿದೆ.
ನನಗೆ ನಟನೆ ಬಗ್ಗೆ ಏನೂ ಗೊತ್ತಿರಲಿಲ್ಲ, ನಮ್ಮ ಕುಟುಂಬದಲ್ಲಿಯೂ ನಟನೆ ಕ್ಷೇತ್ರದಲ್ಲಿ ಯಾರೂ ಇರಲಿಲ್ಲ. ಆಮೇಲೆ ನನಗೆ ಆ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಕೊಟ್ಟಾಗ ಹೇಗಪ್ಪ ಮಾಡೋದು ಅಂತ ಅನಿಸಿತ್ತು. ನಾನು ತುಂಬ ಕಡಿಮೆ ಮಾತನಾಡುತ್ತೇನೆ, ತಾಳ್ಮೆಯಿಂದ ಇರುತ್ತೇನೆ. ನನಗೆ ವಿರುದ್ಧವಾದ ಪಾತ್ರ ಹೇಗೆ ನಿಭಾಯಿಸುವುದು ಎಂಬ ಪ್ರಶ್ನೆ ಬಂದಿತ್ತು. ಆಮೇಲೆ ಧಾರಾವಾಹಿ ತಂಡದವರು ನಿಮ್ಮ ಕಣ್ಣುಗಳನ್ನೇ ನಟನೆಯಲ್ಲಿ ಅಸ್ತ್ರ ಮಾಡಿಕೊಳ್ಳಬಹುದು. ನಿಮ್ಮ ಮುಖ ನಮ್ಮ ಪಾತ್ರಕ್ಕೆ ಹೊಂದಿಕೆಯಾಗುತ್ತದೆ ಎಂದು ಹೇಳಿದರು.
ತುಂಬ ಕಷ್ಟಪಟ್ಟಿದ್ದೇನೆ. ನಾನು ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸರಿಯಾದ ಶ್ರಮ, ಸಮಯ ಕೊಡುತ್ತಿದ್ದೆ. ಬೇಗ ಕಲಿಯುವ ಗುಣ ನನಗಿದೆ. ಹೀಗಾಗಿ ನಾನು ನಟಿಸಲು ಆರಂಭಿಸಿದೆ. ಕೆಲವೊಮ್ಮೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳುತ್ತಿದ್ದರು. ತುಂಬ ಜನರು ನೀವು ಮೊದಲ ಬಾರಿಗೆ ಕ್ಯಾಮರಾ ಎದುರಿಸುತ್ತಿದ್ದೀರ ಅಂತ ಅನಿಸುವುದಿಲ್ಲ ಎಂದು ಹೇಳಿದ್ದರು. ಕೆ ಎಸ್ ರಾಮ್‌ಜೀ ಅವರ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ತಮಿಳಿನ ಧಾರಾವಾಹಿಯಿಂದ ಆಫರ್ ಬಂತು.
ತಮಿಳು ಕಲಿಯಬೇಕು ಎಂಬ ಆಸೆಯಿತ್ತು. ಹೀಗಾಗಿ ನೀಲಾ ಎಂಬ ತಮಿಳು ಧಾರಾವಾಹಿ ಒಪ್ಪಿಕೊಂಡೆ. ಅಲ್ಲಿನ ಪ್ರಖ್ಯಾತ ವಿಲನ್ ಕಲಾವಿದರ ಮಧ್ಯೆ ನನಗೆ ಪ್ರಶಸ್ತಿ ಬಂತು. ಅಲ್ಲಿನ ಜನತೆ ನನ್ನ ಪಾತ್ರವನ್ನು ತುಂಬ ಮೆಚ್ಚಿದ್ದರು. ಕೊರೊನಾ ವೈರಸ್‌ನಿಂದಾಗಿ ನಾನು ಆ ಧಾರಾವಾಹಿ ಬಿಟ್ಟೆ. ಹೀಗಾಗಿ ಅಲ್ಲಿನ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. 'ಗೀತಾ' ಧಾರಾವಾಹಿಯಲ್ಲಿ ಗಟ್ಟಿ ಪಾತ್ರ ಇದೆ ಎಂದಾಗ ಹಿಂದೆಮುಂದೆ ನೋಡದೆ ಒಪ್ಪಿಕೊಂಡೆ.
ಮನೆಯಲ್ಲಿ ನಾನು ನಟಿಸ್ತೀನಿ ಅಂದಾಗ ಅವರಿಗೆಲ್ಲ ಆರಂಭದಲ್ಲಿ ಸ್ವಲ್ಪ ಟೆನ್ಶನ್ ಆಯ್ತು. ಆರಂಭದ 4 ದಿನ ನನ್ನ ಗಂಡ ಧಾರಾವಾಹಿ ಸೆಟ್‌ಗೆ ಬರುತ್ತಿದ್ದರು. ಆಮೇಲೆ ವಿನು ಬಳಂಜ ಅವರ ಸೆಟ್‌ನಲ್ಲಿ ಸ್ಕೂಲ್ ನೋಡಿದ ಹಾಗೆ ಆಯ್ತು. ನಮ್ಮ ಕೈಗೆ ಸಂಬಳ ಬರೋದಕ್ಕಿಂತ ಜಾಸ್ತಿ ಜನರ ಪ್ರೀತಿ ನೋಡಿದರೆ ತುಂಬ ಖುಷಿಯಾಗುತ್ತದೆ. ಚೆನ್ನೈನವರು ನನ್ನ ನಟನೆ ನೋಡಿ ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಕೊಟ್ಟಿದ್ದರು. ಆಗ ಪ್ರತಿಭೆಯಿದ್ದಲ್ಲಿ ಅವಕಾಶ ಸಿಕ್ಕೇ ಸಿಗುತ್ತದೆ ಅನಿಸಿತ್ತು ಅದರಂತೆ ಆಯಿತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.