ಶಾ.ಸಕ ಮುನಿರತ್ನಗೆ ನಡು ಬೀದಿಯಲ್ಲಿ ಹಿಗ್ಗಾಮುಗ್ಗಾ ಬೈದ ಜನರು

 | 
Hd

ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 126 ಕೋಟಿ ರೂ. ಅನುದಾನವನ್ನು ನಮ್ಮ ಸರ್ಕಾರ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದ ಕಾಮಗಾರಿಗಳನ್ನು ರದ್ದುಪಡಿಸಿ, 126 ಕೋಟಿ ಹಣವನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಸತ್ಯಾಗ್ರಹ ಮಾಡಿ ಮನವಿ ಮಾಡಿದರೂ ಸಹ ಈವರೆಗೆ ಕ್ಷೇತ್ರದ 126 ಕೋಟಿ ಅನುದಾನ ನನಗೆ ಹಿಂತಿರುಗಿಸಿಲ್ಲ ಎಂದು ಶಾಸಕ ಮುನಿರತ್ನ ಬೇಸರ ವ್ಯಕ್ತಪಡಿಸಿದ್ದಾರೆ.
 
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು  ನನ್ನ ಬಳಿ ಅನುದಾನ ಹಿಂತಿರುಗಿಸಿದ್ದಾರ ಎಂದು ಕೇಳಿದ ಸಂದರ್ಭ ನಾನು ಇಲ್ಲ ಎಂದು ಹೇಳಿದ್ದೆ. ನಾನು ಕಾಮಗಾರಿಗಳನ್ನು ವೀಕ್ಷಣೆ ಮಾಡುತ್ತೇನೆ. ಕಾಮಗಾರಿ ವೀಕ್ಷಣೆಗೆ ದಿನಾಂಕ ನಿಗದಿ ಮಾಡುವಂತೆ ಯಡಿಯೂರಪ್ಪ ಸೂಚಿಸಿದ್ದರು. ಅದರ ಪ್ರಕಾರ ಇವತ್ತು ವೀಕ್ಷಣೆ ಮಾಡಿದ್ದಾರೆ ಎಂದರು. 

ನಮ್ಮ ಕ್ಷೇತ್ರದ ಅನುದಾನ ಹಿಂತಿರುಗಿಸುವಂತೆ ಸಂಸದ ಡಿಕೆ ಸುರೇಶ್  ಅವರಿಗೆ ಮನವಿ ಮಾಡುತ್ತೇನೆ. ಯಾವ ಕಾಮಗಾರಿಗೆ ನಾವು ಅನುದಾನ ತಂದಿದ್ದೆವೋ ಅದನ್ನು ಮತ್ತೆ ನಮಗೆ ಕೊಡಿ. ಇದು ನಿಮ್ಮ ಲೋಕಸಭಾ ವ್ಯಾಪ್ತಿಗೆ ಬರುವಂತಹ ಅನುದಾನ. ರಾಜಕೀಯದ ಬಗ್ಗೆ ನಾನು ಮಾತನಾಡಲ್ಲ. ವೈಯಕ್ತಿಕವಾಗಿ ನಾನು ಯಾವುದಕ್ಕೂ ಬರಲ್ಲ ಎಂದು ಹೇಳಿದರು.

ಈ ಕ್ಷೇತ್ರದ ಜನತೆಯ ಋಣದಲ್ಲಿ ನಾನಿದ್ದೇನೆ. ಆ ಋಣ ತೀರಿಸುವ ಕೆಲಸವನ್ನು ನಾನು ಪ್ರತಿದಿನ ಮಾಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಒಟ್ಟಾಗಿ ಹೋಗೋಣ. ಖುದ್ದು ಯಡಿಯೂರಪ್ಪ ಬಂದು ವೀಕ್ಷಿಸಿ ದ್ವೇಷದ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾವ್ಯಾರೂ ಶಾಶ್ವತ ಅಲ್ಲ. ಒಟ್ಟಾಗಿ ಕೆಲಸ ಮಾಡೋಣ ಎಂದು ಆಶಯ ವ್ಯಕ್ತಪಡಿಸಿದರು.

ಆದರೆ ಈ ಸಲ ಜನ ಮಾತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಏಕೆಂದರೆ ನೀನೊಬ್ಬ ಶಾಸಕ ಆದರೆ ಒಂದಿಷ್ಟು ಕೂಡ ಸ್ವ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿಲ್ಲ ಎಂದು ಕಿಡಿಕರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ