PUC ಪರೀಕ್ಷೆ ಬರೆಯಲು ಬಸ್ ಹತ್ತಲು ಮುಂದಾದ ವಿದ್ಯಾರ್ಥಿಗೆ ಡ್ರೈವರ್ ಮಾಡಿದ ಕೆಟ್ಟ ಕೆಲಸಕ್ಕೆ‌ ಜನ ಆ ಕ್ರೋಶ

 | 
Vji
ಎಲ್ಲೆಡೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಮಕ್ಕಳು ಪರೀಕ್ಷೆಗೆ ತಯಾರಾಗಿ ಹಾಜರಾಗುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಗೆ​ ನಿಲ್ದಾಣದಲ್ಲಿ ಸರ್ಕಾರಿ ಬಸ್​ ನಿಲ್ಲಿಸದಿದ್ದಕ್ಕೆ ಡ್ರೈವರ್ ಹಾಗೂ ಕಂಡಕ್ಟರನ್ನು ಅಮಾನತು ಮಾಡಲಾಗಿದೆ. ಈ ಘಟನೆಯು ತಮಿಳುನಾಡಿನ ವಾಣಿಯಂಬಾಡಿ ಪಟ್ಟಣದ ಕೊಥಕೋಟೈ ಬಸ್ ನಿಲ್ದಾಣದಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಬೋರ್ಡ್​ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿದ್ದಳು. ಇದಕ್ಕಾಗಿ ಕೊಥಕೋಟೈ ಬಸ್ ನಿಲ್ದಾಣಕ್ಕೆ ಬಂದು ಸರ್ಕಾರಿ ಬಸ್​ಗಾಗಿ ಕಾಯುತ್ತಿದ್ದಳು. ಈ ವೇಳೆ ತಿರುಪತ್ತೂರು-ಅಲಂಗಾಯಂ ನಡುವೆ ಸಂಚಾರ ಮಾಡುವ ಸರ್ಕಾರಿ ಬಸ್ ಬಂದಿದೆ. ಆದರೆ ವಿದ್ಯಾರ್ಥಿನಿಯನ್ನು ನೋಡಿ, ಡ್ರೈವರ್​ ನಿಲ್ಲಿಸದೇ ಬಸ್​ ಅನ್ನು ಒಂದೇ ವೇಗದಲ್ಲೇ ಚಾಲನೆ ಮಾಡಿಕೊಂಡು ಹೋಗಿರುವುದು ವಿಡಿಯೋದಿಂದ ಗೊತ್ತಾಗುತ್ತಿದೆ.
ಬೋರ್ಡ್​ ಪರೀಕ್ಷೆ ಇರುವ ಕಾರಣ ಬಸ್ ಮಿಸ್ ಆಗುತ್ತೆಂದು ಅದರ ಹಿಂದೆ ಹಾಗೇ ಜೀವದ ಹಂಗು ತೊರೆದು ವಿದ್ಯಾರ್ಥಿನಿ ಓಡಿದ್ದಾಳೆ. ಬಳಿಕ ಸ್ವಲ್ಪ ದೂರಕ್ಕೆ ಹೋಗಿ​ ನಿಲ್ಲಿಸಿದಾಗ ಬಸ್​ಹತ್ತಿಕೊಂಡು ವಿದ್ಯಾರ್ಥಿನಿ ಪರೀಕ್ಷೆಗೆ ಹೋಗಿರುವುದು ಗೊತ್ತಾಗಿದೆ. ಈ ವಿಡಿಯೋವನ್ನು ಬಸ್ ನಿಲ್ದಾಣದ ಬಳಿ ನಿಂತಿದ್ದ ಬೈಕ್ ಸವಾರನೊಬ್ಬ ಸೆರೆ ಹಿಡಿದಿದ್ದಾನೆ ಎಂದು ಹೇಳಲಾಗಿದೆ.
ಸದ್ಯ ಈ ಘಟನೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಚಾಲಕ ಮುನಿರಾಜ್​ನನ್ನು ಅಮಾನತು ಮಾಡಿದ್ದಾರೆ. ಜೊತೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕಂಡಕ್ಟರ್ ಅಶೋಕ್ ಕುಮಾರ್ ಅವರನ್ನು ತೆಗೆದು ಹಾಕಲಾಗಿದೆ ಎಂದು ಹೇಳಲಾಗಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ನೆಟ್ಟಿಗರಿಂದ ಚಾಲಕ ಹಾಗೂ ನಿರ್ವಾಹಕ ಇಬ್ಬರ ವಿರುದ್ಧವೂ ಆಕ್ರೋಶ ಕೇಳಿ ಬಂದಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub